ಬೆಳಗಾವಿಯಲ್ಲಿ ಸಚಿವರ ಭೇಟಿ – ಕಲ್ಯಾಣ ಕರ್ನಾಟಕ ಮೇಲ್ವಿಚಾರಕರ ಹುದ್ದೆ ಅನ್ಯಾಯ ಕುರಿತು ಮನವಿ
ದಿನಾಂಕ 21/02/2026 ರಂದು ಬೆಳಗಾವಿ ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಪುತ್ರರಾದ ಮ್ರಣಾಲ ಹೆಬ್ಬಾಳ್ಕರ್ ಅವರನ್ನು ಅವರ ಕಾರ್ಯಾಲಯ ಹಾಗೂ ನಿವಾಸದಲ್ಲಿ ಭೇಟಿ ಮಾಡಿ, ಹೈದರಾಬಾದ್ ಕರ್ನಾಟಕ (HK) ಪ್ರಸ್ತುತ ಕಲ್ಯಾಣ…
ಬೊಮ್ಮನಹಳ್ಳಿ ಪಿಕೆಪಿಎಸ್ ಗೆ ಸಿದ್ದಪ್ಪ ಕಟ್ಟಿಮನಿ ಆಯ್ಕೆ
ತಾಳಿಕೋಟಿ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಇದರ ಆಡಳಿತ ಮಂಡಳಿಯ ಹಿಂದುಳಿದ ವರ್ಗ “ಅ” ಒಂದು ಸ್ಥಾನಕ್ಕೆ ರವಿವಾರ ದಂದು ನಡೆದ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಗ್ರಾಮದ ಸಿದ್ದಪ್ಪ ಬಸಪ್ಪ ಕಟ್ಟಿಮನಿ ಇವರು ಆಯ್ಕೆಯಾದರು. ಸಂಘದ…
ಸೌದಾಗರ್ ಮೌಂಟೇಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಟ್ಯಾಲೆಂಟ್ ಪರೀಕ್ಷೆ
ಸಿಂಧನೂರು : ಫೆಬ್ರವರಿ 22 ರವಿವಾರ ಪಟ್ಟಣದ ಸೌದಾಗರ್ ಮೌಂಟೇಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ “ಟ್ಯಾಲೆಂಟ್ ಪರೀಕ್ಷೆ” ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಅಪಾರ ಉತ್ಸಾಹ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಮೂಡಿಸಿತು. ನಗರದ ವಿವಿಧ ವಾರ್ಡ್‌ಗಳು ಹಾಗೂ ವಿವಿಧ ಶಾಲೆಗಳ ಸುಮಾರು 180ಕ್ಕೂ…
ಪರಿಶ್ರಮ ಮತ್ತು ಶ್ರದ್ಧೆಯಿಂದಲೇ ಸಾಧನೆ ಸಾಧ್ಯ : ಕೆ.ಈ.ನರಸಿಂಹ ಮಾನ್ವಿ : ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು, ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ಕೆ.ಈ.ನರಸಿಂಹ ಹೇಳಿದರು. ಅವರು ಪಟ್ಟಣದ ನೇತಾಜಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾವುಕ ಹಾಗೂ ಸ್ಮರಣೀಯ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೋಷಕರು ಮಕ್ಕಳ ಸಾಧನೆಗೆ ಪ್ರಮುಖ ಆಧಾರ ಸ್ತಂಭರಾಗಿದ್ದು, ಅವರ ತ್ಯಾಗ ಮತ್ತು ಪ್ರೋತ್ಸಾಹವೇ ವಿದ್ಯಾರ್ಥಿಗಳ ಯಶಸ್ಸಿನ ಬುನಾದಿಯಾಗುತ್ತದೆ. ಆದ್ದರಿಂದ ಎಂದಿಗೂ ತಂದೆ–ತಾಯಿಯ ಮನಸ್ಸು ನೋಯಿಸಬಾರದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮಿ, ಸೋಲು ಬಂದರೆ ನಿರಾಶರಾಗಬೇಡಿ; ಅದನ್ನು ಪಾಠವಾಗಿ ಸ್ವೀಕರಿಸಿ ಮುಂದೆ ಸಾಗಿದರೆ ಜಯ ನಿಮ್ಮದೆ ಆಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಬಳಿಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಕಾಲೇಜಿನ ನೆನಪುಗಳನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ಕಾರ್ಯದರ್ಶಿ ಕೆ.ರಾಜರವಿವರ್ಮಾ, ಡಾ. ಕೆ.ವಿನಯಾ, ಕಾಲೇಜಿನ ಮೇಲ್ವಿಚಾರಕ ಆರೀಫ್ ಹಾಗೂ ಉಪನ್ಯಾಸಕರಾದ ಚಂದ್ರು ಜಾಧವ್, ರಮೇಶ್, ವೀರನಗೌಡ, ಸದ್ದಾಂ, ನಾಗರಾಜ್, ಕಾವ್ಯ, ತ್ರಿವೇಣಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಡಿಜಿಟಲ್ ಪ್ರಾಜೆಕ್ಟರ್ ಅನ್ನು ಕಾಣಿಕೆಯಾಗಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.
ಮಾನ್ವಿ : ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು, ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ಕೆ.ಈ.ನರಸಿಂಹ ಹೇಳಿದರು. ಅವರು ಪಟ್ಟಣದ ನೇತಾಜಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾವುಕ ಹಾಗೂ ಸ್ಮರಣೀಯ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.…
ಕಾರಟಗಿ ಪೊಲೀಸ್ ಇಲಾಖೆಯ ದಂಪತಿಗಳಿಂದ ಕಾರುಣ್ಯಾಶ್ರಮಕ್ಕೆ ಏರ್ ಕೂಲರ್ ವಿತರಣೆ ವಿತರಣೆ ಕಾರುಣ್ಯಾಶ್ರಮವು ನಮ್ಮ ಪೊಲೀಸ್ ಇಲಾಖೆಯ ಪ್ರೀತಿಗೆ ಪಾತ್ರವಾಗಿದೆ – ಶರಣಪ್ಪ ಪೊಲೀಸ್ ಅಧಿಕಾರಿಗಳು
ಸಿಂಧನೂರು- ಫೆ 22 ಕೊಪ್ಪಳ ಜಿಲ್ಲೆಯ ಕಾರಟಿಗಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳಾದ ಜಯಮ್ಮ ಶರಣಪ್ಪ ಈ ಪೊಲೀಸ್ ದಂಪತಿಗಳು ತಮ್ಮ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ…
ದುಡ್ಡುಪುಡಿ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಯಶಸ್ವಿ
ಸಿಂಧನೂರು ಫೆ 22 : ದುಡ್ಡುಪೂಡಿ ಭದ್ರಾವತಿ ಮೆಮೋರಿಯಲ್ ಮೆರಿಟ್ ಸ್ಕಾಲರ್‌ಶಿಪ್ 2025-26 ಅಂಗವಾಗಿ ಆಯೋಜಿಸಲಾದ ದುಡ್ಡುಪೂಡಿ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಇಂದು ಯಶಸ್ವಿಯಾಗಿ ನಡೆಯಿತು. ಈ ಪರೀಕ್ಷೆಯನ್ನು 6ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು. ಪರೀಕ್ಷೆ ಇಂದು ಬೆಳಿಗ್ಗೆ…
ಸಾಹನ ಹೈಯರ್ ಪ್ರೈಮರಿ ಶಾಲೆಯಲ್ಲಿ ಪೋಷಕರಿಗಾಗಿ ವಿಶೇಷ ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು
ಸಿಂಧನೂರು :“ಪ್ರೀತಿಯಿಂದ ಬೆಳೆಸೋಣ, ಅರಿವಿನಿಂದ ಮುನ್ನಡೆಸೋಣ” ಎಂಬ ವಿಷಯದ ಮೇಲೆ ಅನಿಕೇತನ ಸಭಾಂಗಣ, ಸಹನಾ ಶಾಲೆಯಲ್ಲಿ 22 ಫೆಬ್ರವರಿ ಭಾನುವಾರ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾದ ಪೋಷಕರಿಗಾಗಿ ವಿಶೇಷ ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು.“ಪ್ರೀತಿಯಿಂದ ಬೆಳೆಸೋಣ, ಅರಿವಿನಿಂದ ಮುನ್ನಡೆಸೋಣ” ಎಂಬ ವಿಷಯದಡಿ ನಡೆದ…
ಕಾರುಣ್ಯಾಶ್ರಮದಲ್ಲಿ ಶಾಸಕ ಬಸನಗೌಡ ಬಾದರ್ಲಿ ಅವರ ಜನ್ಮದಿನ ಸಮಾರಂಭ
ನಮ್ಮ ಬಸನಗೌಡ ಬಾದರ್ಲಿ ಅಪರೂಪದ ರಾಜಕಾರಣಿಯಾಗಿ ನಮ್ಮೆಲ್ಲರಿಗೆ ಸ್ಫೂರ್ತಿಯಾಗಿದ್ದಾರೆ, ನಮ್ಮ ಬಸನಗೌಡ ಬಾದರ್ಲಿ ಅವರ ರಾಜಕಾರಣ ಸಿಂಧನೂರಿನಲ್ಲಿ ಇತಿಹಾಸ ಸೃಷ್ಟಿಸಿದೆ – ಅಮರೇಶ ಗಿರಿಜಾಲಿ ಸಿಂಧನೂರು – ಫೆ 22 ಕರ್ನಾಟಕ ಪ್ರದೇಶ ಬ್ಲಾಕ್ ಕಾಂಗ್ರೆಸ್ ಸಮಿತಿ ಎಸ್. ಸಿ. ಘಟಕ…
ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿಗೆ ವೇಗ ನೀಡಿ: ಸಂಸದ ಜಿ.ಕುಮಾರ ನಾಯಕ ಕಟ್ಟುನಿಟ್ಟಿನ ನಿರ್ದೇಶನ
ರಾಯಚೂರು (ಕರ್ನಾಟಕ ವಾರ್ತೆ): ರೈಲ್ವೆ ಲೈನ್ ನಿರ್ಮಾಣ ಯೋಜನೆ, ಇಂಡಿಯಾ ಪೋಸ್ಟ್, ಬಿಎಸ್‌ಎನ್‌ಎಲ್, ಸರ್ವ ಶಿಕ್ಷಣ ಶಿಕ್ಷಣ ಅಭಿಯಾನ, ಸ್ವಚ್ಛ ಭಾರತ ಮಿಷನ್, ಜಲಜೀವನ ಮಿಷನ್, ಪ್ರಧಾನಮಂತ್ರಿ ಉಜ್ವಲ ಯೋಜನೆ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ಸೇರಿದಂತೆ…
ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ವಿಶೇಷ ನೋಂದಣಿ ಅಭಿಯಾನ
ರಾಯಚೂರು (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ಹಾಗೂ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್-ವ್ಯಾಪಾರಿಗಳು) ಯೋಜನೆಗಳಡಿ ಅಸಂಘಟಿತ ವಲಯದ ಕಾರ್ಮಿಕರನ್ನು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳನ್ನು ನೊಂದಾಯಿಸಲು ದಿನಾಂಕ:…
