ಹಾಲಾಪೂರ: ಗ್ರಾಮದಲ್ಲಿರುವ ಸರಕಾರಿ ಪ್ರೌಢ ಶಾಲೆಯ ಭೂದಾನಿಗಳಾದ ದಿವಂಗತ ಬಸವರಾಜಪ್ಪಗೌಡ ರವರ 9ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ದೈಹಿಕ ಶಿಕ್ಷಕರಾದ ರವೀಂದ್ರ ಕುಂಬಾರ ರವರು ಮಾತನಾಡಿ ನಮ್ಮ ಶಾಲೆಯ ಭೂದಾನಿಗಳಾದ ದಿವಂಗತ ಬಸವರಾಜಪ್ಪಗೌಡ ರವರು ಆರು ಎಕರೆ ವಿಶಾಲವಾಗಿರುವ ಭೂಮಿಯನ್ನ ಭೂದಾನ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ, ಉದ್ಯೋಗ, ಜ್ಞಾನ ಕರುಣಿಸಿದ ಮಹಾನ್ ಪುರುಷರು ಅವರ ಸೇವೆ ಸಮಾಜಕ್ಕೆ ಅತ್ಯಂತ ಮಹತ್ವದ್ದು, ನಮ್ಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಒಳ್ಳೆಯ ಹುದ್ದೆ ಹೂಂದಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಆದೇಶಪ್ಪ, ಬಾಬುರಾವ್, ಯಮನಪ್ಪ, ಕೃಷ್ಣಮೂರ್ತಿ, ಕಿರಣಕುಮಾರ್ ಹಾಗೂ ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು

Leave a Reply

Your email address will not be published. Required fields are marked *