ಮಸ್ಕಿ: ಮಾನವೀಯತೆ ಮತ್ತು ಸಮಾಜ ಸೇವೆಯ ಅತ್ಯುತ್ತಮ ಉದಾಹರಣೆಯಾಗಿ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ರೈತ ಮಹಿಳೆ ಶ್ರೀಮತಿ ಕವಿತಾ ಮಿಶ್ರಾ ಅವರು ಅಭಿನಂದನ್ ಸ್ಪೂರ್ತಿ ಧಾಮ ಮಸ್ಕಿಯ ಮಕ್ಕಳಿಗಾಗಿ ಒಂದು ಕ್ವಿಂಟಲ್ ಅಕ್ಕಿಯನ್ನು ದಾನವಾಗಿ ನೀಡಿ ತಮ್ಮ ದಾನಶೀಲತೆಯನ್ನು ತೋರಿಸಿದ್ದಾರೆ.ಮಸ್ಕಿ ತಾಲೂಕಿನಲ್ಲಿರುವ ಅಭಿನಂದನ್ ಸ್ಪೂರ್ತಿ ಧಾಮ ಅನಾಥ ಮತ್ತು ಆಶ್ರಯವಿಲ್ಲದ ಮಕ್ಕಳಿಗೆ ಆಶ್ರಯವಾಗಿದ್ದು, ಇಲ್ಲಿ ನೂರಾರು ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕಿ ಬೆಳೆಸುವ ಮಹತ್ತರ ಕಾರ್ಯವನ್ನು ಶ್ರೀಮತಿ ಶ್ರುತಿ ಹಂಪರಗುಂದಿ ಹಾಗೂ ಶ್ರೀ ರಾಮಣ್ಣ ಹಂಪರಗುಂದಿ ದಂಪತಿಗಳು ಮಾಡುತ್ತಿದ್ದಾರೆ.ಮಕ್ಕಳಾಗಲಿಲ್ಲ ಎಂಬ ವೈಯಕ್ತಿಕ ಕೊರಗನ್ನು ಸಮಾಜ ಸೇವೆಯ ಮೂಲಕ ನೀಗಿಸಬೇಕು ಎಂಬ ಉದ್ದೇಶದಿಂದ ಈ ದಂಪತಿಗಳು ಹಲವಾರು ವರ್ಷಗಳಿಂದ ಅನೇಕ ಮಕ್ಕಳಿಗೆ ಆಶ್ರಯ, ಆಹಾರ, ಶಿಕ್ಷಣ ಮತ್ತು ಉತ್ತಮ ಭವಿಷ್ಯ ಒದಗಿಸಲು ಶ್ರಮಿಸುತ್ತಿದ್ದಾರೆ.ಅವರ ಈ ಸೇವಾಭಾವವನ್ನು ಗುರುತಿಸಿ ರೈತ ಮಹಿಳೆ ಕವಿತಾ ಮಿಶ್ರಾ ಅವರು ಸ್ವತಃ ಶ್ರುತಿ ರಾಮಣ್ಣ ಹಂಪರಗುಂದಿ ಅವರಿಗೆ ಕರೆ ಮಾಡಿ ನೀವು ಮಾಡುವ ಸಮಾಜ ಸೇವೆ ಅತ್ಯಂತ ಮಹತ್ತರವಾದುದು ನನ್ನ ಕಡೆಯಿಂದ ಚಿಕ್ಕ ಅಳಿಲು ಸೇವೆ ಎಂದು ಒಂದು ಕ್ವಿಂಟಲ್ ಅಕ್ಕಿಯನ್ನು ದಾನವಾಗಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಶ್ರುತಿ ರಾಮಣ್ಣ ಹಂಪರಗುಂದಿ ಅವರು, “ಸಮಾಜದಲ್ಲಿ ಇನ್ನೂ ಸಹ ಮಾನವೀಯತೆ ಜೀವಂತವಾಗಿದೆ ಎಂಬುದಕ್ಕೆ ರೈತ ಮಹಿಳೆ ಕವಿತಾ ಮಿಶ್ರಾ ಅವರ ದಾನವೇ ದೊಡ್ಡ ಉದಾಹರಣೆ.ಅವರ ಈ ಸಹಾಯದಿಂದ ಇಲ್ಲಿ ಇರುವ ಮಕ್ಕಳಿಗೆ ಬಹಳ ಉಪಕಾರವಾಗಿದೆ. ಅವರಂತಹ ದಾನಿಗಳ ಸಹಕಾರದಿಂದಲೇ ನಮ್ಮ ಸಂಸ್ಥೆ ನೂರಾರು ಮಕ್ಕಳನ್ನು ಉತ್ತಮವಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತಿದೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಇದಲ್ಲದೆ ಕವಿತಾ ಮಿಶ್ರಾ ಅವರ ದಾನಶೀಲತೆ, ಸಮಾಜದ ಬಗ್ಗೆ ಇರುವ ಕಾಳಜಿ ಮತ್ತು ಮಕ್ಕಳ ಮೇಲಿನ ಪ್ರೀತಿ ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಅಭಿನಂದನ್ ಸ್ಪೂರ್ತಿ ಧಾಮದ ಪರವಾಗಿ ಕವಿತಾ ಮಿಶ್ರಾ ಅವರಿಗೆ ಅನಂತ ಕೋಟಿ ಧನ್ಯವಾದಗಳು ಮತ್ತು ಅಭಿನಂದನೆಗಳನ್ನು ಅರ್ಪಿಸಿದರು.ಸಮಾಜದ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂಬ ಸಂದೇಶವನ್ನು ಈ ಕಾರ್ಯ ನೀಡುತ್ತದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ. ತಾವು ಕೂಡ ಏನಾದರೂ ದಾನ ಮಾಡಲು ಬಯಸಿದರೆ ಹಾಗೂ ಇವರು ಮಕ್ಕಳ ಸ್ವಂತ ಕಟ್ಟಡಕ್ಕಾಗಿ ಹಣ ಸಂಗ್ರಹ ಮಾಡುತ್ತಿದ್ದಾರೆ ದಾನಿಗಳು ಮಕ್ಕಳಿಗಾಗಿ ಹಣ ಕೂಡ ದಾನಮಾಡಬಹುದು ಈ ನಂಬರ್ ಗೆ ಕರೆ ಮಾಡಿ 9986116589

Leave a Reply

Your email address will not be published. Required fields are marked *