ತಾಲೂಕಿನ ಶ್ರೀನಿವಾಸ ಕ್ಯಾಂಪಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಮತ್ತು 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಶಿಕ್ಷಕರಾದ ದುರುಗಪ್ಪ ಗುಡದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಶಿಕ್ಷಕರಿಗೆ, ನೂತನ ಎಸ್.ಡಿ.ಎಮ್.ಸಿ ಸದಸ್ಯರಿಗೆ ಹಾಗೂ ಅಡುಗೆ ಮಾಡುವ ಸಿಬ್ಬಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ: ಎಸ್.ಡಿ.ಎಂ.ಸಿ ಅಧ್ಯಕ್ಷ ಹುಚ್ಚಾರೆಡ್ಡಿ ಬಾಗಲವಾಡ, ಉಪಾಧ್ಯಕ್ಷ ಅಯ್ಯಪ್ಪ ಕೂಡ್ಲೂರು, ಸದಸ್ಯರಾದ ಮಲ್ಲೇಶ ನಾಯಕ, ಬಸವರಾಜ, ಲಕ್ಕಪ್ಪ, ಹನುಮಂತ, ಅಮರೇಶ, ಗ್ರಾಮ ಪಂಚಾಯಿತಿ ಸದಸ್ಯ ಟಿ.ವೆಂಕಟರೆಡ್ಡಿ, ಮುಖಂಡರಾದ ತಿಪ್ಪಣ್ಣ, ಸಂಗಪ್ಪ ಜೂಲಗುಡ್ಡ, ಜಲಾಲಪ್ಪ ಪನ್ನೂರು, ಕನಕದಾಸ ಸಂಘದ ಅಧ್ಯಕ್ಷ ದುರುಗಪ್ಪ ಮಾನೇಗಾರ, ಹಾಗೂ ಮಲ್ಲಿಕಾರ್ಜುನ, ಅಯ್ಯಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಕುಲಕರ್ಣಿ, ಕಾರ್ಯದರ್ಶಿ ಅಮರೇಶ,
ಶಿಕ್ಷಕರಾದ ಯಮನೂರಪ್ಪ, ವೀರೇಶ, ತಿಮ್ಮಮ್ಮ, ಶ್ರೀದೇವಿ, ಹಾಗೂ ವಿದ್ಯಾರ್ಥಿಗಳು ಇದ್ದರು.

