ದೇವದುರ್ಗ : ಮಾ 02 ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬದ ಅಂಗವಾಗಿ ಶಾಂತಿ ಸಭೆ ನಡೆಯಿತು. ಸಭೆಗೆ ಜಾಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ವೈಶಾಲಿ ಜಳಕಿ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಊರಿನ ಹಿರಿಯ ಮುಖಂಡರಾದ ವೀರಣ್ಣ ಬಳೆ ಸಾಹುಕಾರ ಮಾತನಾಡಿ, ಜಾಲಹಳ್ಳಿ ಹಾಗೂ ದೇವದುರ್ಗ ತಾಲೂಕಿನಲ್ಲಿ ಹೋಳಿ ಹಬ್ಬದಂದು ಬಣ್ಣ ಆಡುವ ಪದ್ಧತಿ ಇಲ್ಲ. ಯುಗಾದಿ ಹಬ್ಬದಂದು ಮಾತ್ರ ಬಣ್ಣ ಹಾಕುವ ಸಂಪ್ರದಾಯವಿದೆ ಎಂದು ತಿಳಿಸಿದರು. ರಂಜಾನ್ ಹಬ್ಬವನ್ನು ಜಾಲಹಳ್ಳಿಯಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಲಾಗುತ್ತದೆ. ಮುಸ್ಲಿಂ ಬಾಂಧವರು ಈ ಸಂದರ್ಭದಲ್ಲಿ ಬಡವರಿಗೆ ದಾನಧರ್ಮಗಳನ್ನು ನಿರಾಡಂಬರವಾಗಿ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.
ನಮ್ಮ ಊರಲ್ಲಿ ಯಾವುದೇ ಭೇದಭಾವವಿಲ್ಲದೆ ಎಲ್ಲಾ ಸಮಾಜದವರು ಒಂದಾಗಿ ಎಲ್ಲಾ ಹಬ್ಬಗಳನ್ನು ಆಚರಿಸುವ ಸಂಪ್ರದಾಯವಿದೆ. ಹಬ್ಬದ ದಿನಗಳಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಪರಸ್ಪರ ಮನೆಗಳಿಗೆ ತೆರಳಿ ಊಟ ಮಾಡುವ ಸಂಪ್ರದಾಯ ಸಾಮಾನ್ಯವಾಗಿದೆ. ಆದ್ದರಿಂದ ನಮ್ಮ ಊರಲ್ಲಿ ಶಾಂತಿ ಸಭೆ ಮಾಡುವ ಅವಶ್ಯಕತೆಯೇ ಇಲ್ಲ, ಏಕೆಂದರೆ ನಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.

ಸಾಬಣ್ಣ ಕಮಲದಿನ್ನಿ ಮಾತನಾಡಿ, ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇಲ್ಲಿ ಎಲ್ಲಾ ಜಾತಿ-ಧರ್ಮದವರು ಒಂದಾಗಿ ಬಾಳುತ್ತಿದ್ದು, ಹಿಂದೂ–ಮುಸ್ಲಿಂ ಎಂಬ ಭೇದಭಾವ ಇಲ್ಲ ಎಂದು ಹೇಳಿದರು.

ಬಾಳಪ್ಪ (ಡಿಎಸ್ಎಸ್ ಮುಖಂಡರು) ಮಾತನಾಡಿ, ಜಾಲಹಳ್ಳಿ ವ್ಯಾಪ್ತಿಯಲ್ಲಿ ಎಲ್ಲಾ ಜಾತಿಯವರು ಒಟ್ಟಾಗಿ ಎಲ್ಲಾ ಹಬ್ಬಗಳನ್ನು ಆಚರಿಸುತ್ತೇವೆ ಎಂದರು.
ಬಾಬಾ ಮೆಡಿಕಲ್ ಹಾಗೂ ರೈತ ಸೇನೆಯ ಮುಖಂಡರಾದ ಮಹಾದೇವಪ್ಪ ಯಾದವ್ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪಿಎಸ್ಐ ವೈಶಾಲಿ ಜಳಕಿ ಮಾತನಾಡಿ, ಜಾಲಹಳ್ಳಿ ವ್ಯಾಪ್ತಿಯ ಹಿರಿಯರು ತಮ್ಮ ತಮ್ಮ ಊರಿನ ಯುವಕರು ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸುವಂತೆ ಗಮನ ವಹಿಸಬೇಕು ಎಂದು ಸಲಹೆ ನೀಡಿದರು. ಹೋಳಿ ಹಾಗೂ ರಂಜಾನ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ತಿಮ್ಮಣ್ಣ ದಿವಾನ್, ಮಕತುಂ ಪರಾಶಿ, ಸಲಬಣ್ಣ ಹಂಪರಗುಂದಿ ಹಾಗೂ ರಮೇಶ್ ತೆಗ್ಗಳ್ಳಿ ಉಪಸ್ಥಿತರಿದ್ದರು.

ಹಿರಿಯ ಮುಖಂಡರಾದ ವೀರಣ್ಣ ಬಳೆ ಸಾಹುಕಾರ, ವೆಂಕೋಬ ಪೂಜಾರಿ, ಚನ್ನಮ್ಮಠ ತಾತನವರು, ವೆಂಕೋಬ ತೋಟ, ಶಂಕರಗೌಡ ಮಾಲಿ ಪಾಟೀಲ್, ಸಾಬಣ್ಣ ಕಮಲದಿನ್ನಿ, ರಂಗಣ್ಣ ಕೋಲ್ಗಾರ್, ಮುದರಂಗಪ್ಪ ವಠಾರ , ಶರಣಗೌಡ ಕಂಬಲದಿನ್ನಿ, ಬಾಳಪ್ಪ ಡಿಎಸ್ಎಸ್, ಜಾಕಿರ್ ಹುಸೇನ್ ಆರ್ತಿ, ಕುರಿಸಿದ ಪಟೇಲ್, ಚನ್ನಪ್ಪ ಭವಾನಿ, ಮಾಲಿಂಗ ದೊಡ್ಮನೆ, ಸುರೇಶ್ ಪೂಜಾರಿ, ರಂಗಪ್ಪ ಬಂಡಿ, ಅಮೀರ್ ಪಟೇಲ್, ಇಮ್ರಾನ್ ಖಾನ್, ಬಾಬು ರೈತ ಸಂಘದ ಮುಖಂಡರಾದ ಮಲ್ಲಿಕಾರ್ಜುನ್ ಪಾಟೀಲ್, ಮಹಾದೇವಪ್ಪ ಯಾದವ್, ರಂಗಪ್ಪದೊರೆ, ಮಕತುಂ, ಜಹೀರ್ ಮುರ್ಸೇದ್ ಸೇರಿದಂತೆ ಜಾಲಹಳ್ಳಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಭಾಗವಹಿಸಿದ್ದರು. ಜಾಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು

Leave a Reply

Your email address will not be published. Required fields are marked *