ತಾಳಿಕೋಟಿ: ಪಟ್ಟಣದ ತಾಲೂಕ ಆಡಳಿತದ ವತಿಯಿಂದ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರದೀಪ ದೇವಗಿರಿ ತಹಶೀಲ್ದಾರ್ ಗ್ರೇಡ್- 2 ಅವರು ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಎಲ್ಲರಿಗೂ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳು ಮಾತನಾಡಿ ಶ್ರೀ ರೇಣುಕಾಚಾರ್ಯರು ಇಡೀ ಮನುಕುಲದ ಏಳಿಗೆಯನ್ನು ಬಯಸಿದವರು ಅವರು ಧರ್ಮದಿಂದಲೇ ಜಗತ್ತಿಗೆ ಶಾಂತಿ ಲಭಿಸುತ್ತದೆ ಎಂಬ ಸಂದೇಶವನ್ನು ನೀಡಿದ್ದಾರೆ ಅವರ ಬದುಕಿನ ಆದರ್ಶಗಳ ಪ್ರಾಮಾಣಿಕ ಅನುಸರಣೆಯನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬೇಡ ಜಂಗಮ ಸಮಾಜದ ತಾಲೂಕ ಘಟಕದ ಅಧ್ಯಕ್ಷರಾದ ಶರಣಯ್ಯ ಹಿರೇಮಠ, ಶ್ರೀ ಗುರು ಹಿರೇಮಠ, ಶಿವಶಂಕರಯ್ಯ ಹಿರೇಮಠ, ಉಪಾಧ್ಯಕ್ಷ ಶಿವಲಿಂಗಯ್ಯ ಹಿರೇಮಠ, ಕಾರ್ಯದರ್ಶಿ ಈರಯ್ಯ ಹಿರೇಮಠ, ಸಂಘಟನಾ ಕಾರ್ಯದರ್ಶಿ ಗಜದಂಡಯ್ಯ ಹಿರೇಮಠ, ಸಮಾಜದ ಸದಸ್ಯರು ಗಣ್ಯರು ಹಿರಿಯರು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *