ಮಸ್ಕಿ: ಸಿಂಧನೂರು- ಕುಷ್ಟಗಿ ರಸ್ತೆ ಗುಂಜಳ್ಳಿ ಗ್ರಾಮದ ಸಮೀಪದ ರಸ್ತೆಯಲ್ಲಿ ಭಾನುವಾರ ವಾಹನಗಳ ನಡುವೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರನ್ನು ಖಾದಿ ಗ್ರಾಮದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರವಿಹಾಳ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಪಘಾತದಲ್ಲಿ ವೆಂಕಟೇಶ್ ಹಾಗೂ ರತ್ನಮ್ಮ ಎಂಬುವವತಿಗೆ ತೀವ್ರ ಗಾಯಗಳಾಗಿ ನರಳಾಡುತ್ತಿದ್ದರು. ಇದೇ ಮಾರ್ಗವಾಗಿ ತೆರಳುತ್ತಿದ್ದ ಶಾಸಕರು ತಕ್ಷಣ ತಮ್ಮ ಕಾರು ನಿಲ್ಲಿಸಿ ಆ್ಯಂಬುಲೆನ್ಸ್ ಕರೆ ಮಾಡಿದ್ದಾರೆ. ಆ್ಯಂಬುಲೆನ್ಸ್ ಲಭ್ಯವಿಲ್ಲ ಬರಲು ತಡವಾಗುತ್ತದೆ ಎಂದು ತಿಳಿದು ಶಾಸಕರು ತಮ್ಮ ಸರ್ಕಾರಿ ಕಾರಿನಲ್ಲೇ ಅಪಘಾತದಲ್ಲಿ ಗಾಯಗೊಂಡ ಗಾಯಳುವಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ನಂತರ ಸ್ಥಳಕ್ಕೆ ಆಂಬುಲೆನ್ಸ್ ಬಂದು ರತ್ನಮ್ಮ ಎಂಬ ಗಾಯಳು ಅವರನ್ನು ಚಿಕಿತ್ಸೆ ಗೆ ಕರೆದುಕೊಂಡು ತೆರಳಿದರು. ನಂತರ ಶಾಸಕ ಆರ್. ಬಸನಗೌಡ ಅವರು ವೈದಾಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಶಾಸಕರ ಮಾನವೀಯ ಕಾರ್ಯಕ್ಕೆ ಗಾಯಾಳುಗಳು ಮತ್ತು ಸ್ಥಳದಲ್ಲಿದ್ದ ಸಾರ್ವಜನಿಕರು ಧನ್ಯವಾದ ಅರ್ಪಿಸಿದರು.

