ಸಿಂಧನೂರು : ಶಾಲಾ ಶಿಕ್ಷಣ ಇಲಾಖೆ ಮಾರ್ಗದರ್ಶನದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಸಿಂಧನೂರು ಸಮೂಹ ಸಂಪನ್ಮೂಲ ಕೇಂದ್ರ (ಟಿ.ಬಿ.ಪಿ. ಕ್ಯಾಂಪ್) ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುರುಸಿದ್ದಯ್ಯನಮಠ ಇವರ ಸಹಯೋಗದಲ್ಲಿ,
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುರುಸಿದ್ದಯ್ಯನಮಠ, ಉಪ್ಪಾರವಾಡಿ ವಾರ್ಡ್ ನಂ–5, ಸಿಂಧನೂರಿನಲ್ಲಿ “ಕಲಿಕಾ ಹಬ್ಬ”ವನ್ನು ಫೆ 22 ರಂದು ಉತ್ಸಾಹಭರಿತವಾಗಿ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನಡೆದ ಪ್ರಮುಖ ಚಟುವಟಿಕೆಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳ ಸಾಧನೆಗಳು
📚 ರಸಪ್ರಶ್ನೆ ಸ್ಪರ್ಧೆ : ಪ್ರಶಾಂತ್ ಮತ್ತು ತಂಡ ದ್ವಿತೀಯ 5 ನೇ ತರಗತಿ
🥗 ಆಹಾರ ಮತ್ತು ಪೌಷ್ಠಿಕಾಂಶ ಕುರಿತ ಜಾಗೃತಿ ಕಾರ್ಯಕ್ರಮ : ಪ್ರಥಮ : ಈಶ್ವರಿ 4ನೇ ತರಗತಿ
🧠 ಮೆಮೊರಿ ಪರೀಕ್ಷೆ : ಪ್ರಥಮ : ವೈಷ್ಣವಿ 5ನೇ ತರಗತಿ
📖 ಕಥೆ ಹೇಳುವಿಕೆ : ದ್ವಿತೀಯ : ದ್ವಿತೀಯ : ರೋಹನ್ ಕುಮಾರ ಬಿ 5ನೇ ತರಗತಿ
✍ ಕೈಬರಹ ಮತ್ತು ಕ್ಯಾಲಿಗ್ರಫಿ ಸ್ಪರ್ಧೆ :ತೃತೀಯ : ತೃತೀಯ ಸ್ಥಾನ : ಅಮೃತಾ 4ನೇ ತರಗತಿ
➗ ಸಂತೋಷದಾಯಕ ಗಣಿತ ಚಟುವಟಿಕೆಗಳು : ಪ್ರಥಮ : ಸಮರ್ಥ 5ನೇ ತರಗತಿ
👨👩👧 ಪೋಷಕರು–ಮಕ್ಕಳ ಸಹಸಂಬಂಧ ಕಾರ್ಯಕ್ರಮ : ದ್ವಿತೀಯ ಸ್ಥಾನ : ಅನ್ವಿತಾ ಮತ್ತ ತಾಯಿ : ನಿವೇದಿತಾ 2ನೇ ತರಗತಿ
🎭 ಛದ್ಮವೇಶ ಸ್ಪರ್ಧೆ :ದ್ವಿತೀಯ : ವಿಜಯಲಕ್ಷ್ಮೀ 4 ನೇ ತರಗತಿ.
ಕಲಿಕಾ ಹಬ್ಬ-2025-26 ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ 100 ಮಕ್ಕಳಿಗೆ ವಸಿಷ್ಠಧಾಮದ ಗುರುಗಳಾದ ಸನ್ಮಾನ್ಯ ಭೀಮಸೇನಾಚಾರ್ಯ ನವಲಿ ದಂಪತಿಗಳು ಜಾಮಿಟ್ರಿ ಬಾಕ್ಸ್ ಮತ್ತು ನಮ್ಮ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ಬಾಟಲ್ ವಿತರಿಸಿದರು. ಹಾಗೂ ಇಂದು ನಮ್ಮ ಶಾಲೆಯ ಎಸ್ ಡಿ ಎಂ ಸಿ ಆದ್ಯಕ್ಷರ ಮಗನಾದ ಕು. ರೋಹನ್ ಕುಮಾರ್ ಬಿ ಅಂಗವಾಗಿ ನಮ್ಮ ಶಾಲೆಯ ಎಲ್ಲಾ ಸಿಹಿ ಊಟ ಮಾಡಿಸಿ. ಮಕ್ಕಳಿಗೆ ಅಂಕಲಿಪಿ ಮತ್ತು ಜಾಮಿಟ್ರಿ ಬಾಕ್ಸ್ ವಿತರಿಸಿದರು. ನಮ್ಮ ಶಾಲೆಯ ಪರವಾಗಿ ಕೊಡುಗೆಯಾಗಿ ನೀಡಿದ ಎಸ್ ಡಿ ಎಂ ಸಿ ಅಧ್ಯಕ್ಷರಿಗೆ ಮತ್ತು ಭೀಮಸೇನಾಚಾರ್ಯ ದಂಪತಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಸನ್ಮಾನ ಸ್ವೀಕರಿಸಿದ ಭೀಮಸೇನಾಚಾರ್ಯ ನವಲಿಯವರು ಮಾತನಾಡಿ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರೂ ನಮ್ಮ ಕಡೆಯಿಂದ ಸಹಾಯ ಸಹಕಾರ ಇರುತ್ತದೆ ಎಂದು ತಿಳಿಸಿದರು.
ಒಟ್ಟು ಆಯೋಜನೆ ಮಾಡಿದ 8 ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು
ಪ್ರಥಮ ಸ್ಥಾನ : 03
ದ್ವೀತೀಯ ಸ್ಥಾನ : 04
ತೃತೀಯ ಸ್ಥಾನ : 01
ಕಲಿಕಾ ಹಬ್ಬದಲ್ಲಿ ಆಯೋಜನೆ ಮಾಡಿದ ಎಲ್ಲಾ 8 ಕಲಿಕಾ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿಯ್ನು ಪಡೆದಿರುವುದು ವಿಶೇಷ .
ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು .
ಶುಭಕೋರುವವರು
ಮುಖ್ಯೋಪಾಧ್ಯಾಯರು, ಶಿಕ್ಷಕರು
SDMC ಅಧ್ಯಕ್ಷರು, ಸದಸ್ಯರು, ನಗರಸಭೆ ಸದಸ್ಯರು, ಹಳಯೆ ವಿದ್ಯಾರ್ಥಿಗಳು, ವಾರ್ಡ್ ನಂ-05 ರ ಎಲ್ಲಾ ಗುರು-ಹಿರಿಯರು ಪಾಲಕ –ಪೋಷಕರು, ಶಿಕ್ಷಣ ಪ್ರೇಮಿಗಳು

