ರಾಯಚೂರು : ಮುನ್ನೂರು ಕಾಪು ಸಮಾಜ ಶ್ರೀಕೃಷ್ಣದೇವರಾಯ ಜಯಂತಿ ಆಚರಣೆ ಮಾಡುವ ಮೂಲಕ ಇತಿಹಾಸ ಪರಂಪರೆಯನ್ನು ಪರಿಚಯಿಸುವ ಕಾರ್ಯ ಮಾಡುತ್ತಿದೆ’ ಎಂದು ಸಚಿವ ಎನ್. ಎಸ್. ಬೋಸರಾಜು ಹೇಳಿದರು.
ನಗರದ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಮುನ್ನೂರು ಕಾಪು ಸಮಾಜದ ವತಿಯಿಂದ ಆಯೋಜಿಸಿದ್ದ ಕೃಷ್ಣದೇವರಾಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಕೃಷ್ಣದೇವರಾಯ ಜಯಂತಿ ಸಮಿತಿ ಅಧಕ್ಷ ಎ.ಪಾಪಾರೆಡ್ಡಿ ಮಾತನಾಡಿ, ‘ಹಿಂದಿನ ಕಾಲದಲ್ಲಿ ಮುನ್ನೂರು ಕಾಪು ಸಮಾಜವರು ಖಡ್ಗ ಹಿಡಿದು ಯುದ್ಧಗಿಳಿಯುತ್ತಿದ್ದರು. ಇಂದು ಶಿಕ್ಷಣದ ಮೂಲಕ ಪ್ರಗತಿ ಸಾಧಿಸಿ ವ್ಯಾಪಾರಸ್ಥರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ’ ಎಂದು ತಿಳಿಸಿದರು.

ಡಾ.ಎ ಜಿ ಶ್ರೀನಿವಾಸ್ ರೆಡ್ಡಿ, ಉಪನ್ಯಾಸಕಿ ರೇಣುಕಾ ಪಾಟೀಲ ಮಾತನಾಡಿದರು. ಅಭಿನವ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಮೆರವಣಿಗೆ: ಶ್ರೀಕೃಷ್ಣದೇವರಾಯ ಭಾವಚಿತ್ರದ ಮೆರವಣಿಗೆ ನಗರದ ಲಕ್ಷ್ಮಿ ಕಲ್ಯಾಣ ಮಂಟಪದ ಆವರಣದಿಂದ ಹೊರಟು ಸರ್ದಾರ್ ವಲ್ಲಭಬಾಯಿ ವೃತ್ತ, ಬಸವಣ ಭಾವಿ ವೃತ್ತ ಮಾರ್ಗವಾಗಿ ವೀರಾಂಜನೇಯ ಕಲ್ಯಾಣ ಮಂಟಪದ ಆವರಣಕ್ಕೆ ಬಂದು ಸಮಾರೋಪಗೊಂಡಿತು.

ಮೆರವಣಿಗೆಯಲ್ಲಿ ಆಕರ್ಷಕ ಡೊಳ್ಳು ಕುಣಿತ ಹಾಗೂ ನಂದಿ ಕೋಲು ಕುಣಿತ ಪ್ರೇಕ್ಷಕರ ಗಮನ ಸೆಳೆಯಿತು.

ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಿ.ಶೇಖರ ರೆಡ್ಡಿ, ಬಂಗಿ ನರಸರೆಡ್ಡಿ, ಕುಕ್ಕ ನರಸಿಂಹಲು,ಬೆಲ್ಲಂ ನರಸರೆಡ್ಡಿ, ಚನ್ನಬಸಯ್ಯ ಹಿರೇಮಠ, ಎ.ಜಿ. ಶ್ರೀನಿವಾಸ, ಕೃಷ್ಣಮೂರ್ತಿ, ಶೇಖರ ರೆಡ್ಡಿ, ಕೆ‌. ನರಸಿಂಹಲು, ನರಸ ರೆಡ್ಡಿ, ಜಿ.ಬಿ. ಲಕ್ಷ್ಮೀರೆಡ್ಡಿ, ಶ್ರೀನಿವಾಸರೆಡ್ಡಿ,ಚಂದ್ರಶೇಖರ ರೆಡ್ಡಿ, ಗುಡ್ಸಿ ಪ್ರತಾಪ ರೆಡ್ಡಿ, ಜಿ.ನರಸರೆಡ್ಡಿ, ಎಸ್. ಜನಾರ್ದನ ರೆಡ್ಡಿ,ಎನ್.ಕೇಶವರೆಡ್ಡಿ, ಭೀಮಾರೆಡ್ಡಿ,ಲಿಂಗಾರೆಡ್ಡಿ, ಅಂಗಡಿ ತಿಮ್ಮಾರೆಡ್ಡಿ, ಭಂಗಿ ತಿಮ್ಮಾರೆಡ್ಡಿ, ಜಂಪಾರೆಡ್ಡಿ,ಜಿ.ನಾಗರಾಜ,ಮಹೇಂದ್ರರೆಡ್ಡಿ, ಪುಂಡ್ಲ ರಾಜೇಂದ್ರರೆಡ್ಡಿ, ನಿಂಬೆಕಾಯಿ ಭೀಮರೆಡ್ಡಿ, ಉಟುಕೂರು ಗಣೇಶರೆಡ್ಡಿ, ಬಂಗಿ ಮುನಿರೆಡ್ಡಿ, ಅಲ್ಲಾಪಾಡು ಜಿ.ಗೋಪಾಲರೆಡ್ಡಿ, ಬೆಲ್ಲಂ ಶ್ರೀಧರ ರೆಡ್ಡಿ, ಕೆ.ರಾಜು ಕೆಪಿಸಿಸಿ, ಪ್ರಸಾದ ರೆಡ್ಡಿ,ಕೆ.ಅಮರೇಶರೆಡ್ಡಿ,ಗಜ್ಜು ನಾಗರಾಜ, ಬಿ. ರಾಜು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *