ರಾಯಚೂರು ಫೆಬ್ರವರಿ 20 (ಕರ್ನಾಟಕ ವಾರ್ತೆ): ಗೃಹಲಕ್ಮೀ ಯೋಜನೆಯಡಿಯಲ್ಲಿ 2025-26ನೇ ಸಾಲಿನ ನಾಲ್ಕನೇ ಕಂತಿನ ಅನುದಾನದಲ್ಲಿ ರಾಯಚೂರು ಜಿಲ್ಲೆಯ 4,37,601 ಫಲಾನುಭವಿಗಳಿಗೆ 87,53,22,000 ರೂ.ಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ರಾಯಚೂರು ಅವರ ಮೂಲಕ ಡಿಬಿಟಿ ಪ್ರಕ್ರಿಯೆ ಚಾಲ್ತಿ ಮಾಡಲಾಗಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮಾವಾಗುತ್ತದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷರಾದ ಪಾಮಯ್ಯ ಮುರಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *