ರಾಯಚೂರು ಫೆಬ್ರವರಿ 20 (ಕರ್ನಾಟಕ ವಾರ್ತೆ): ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿ ಸೆಪ್ಟಿಕ್ ಟ್ಯಾಂಕ್ ವಾಹನಗಳು ಅನಧಿಕೃತವಾಗಿ ಸ್ವಚ್ಛಮಾಡುತ್ತಿರುವುದು ಕಂಡುಬಂದಿರುತ್ತದೆ. ಆದ್ದರಿಂದ, ಖಾಸಗಿ ಡಿಸ್ಲಡ್ಜಿಂಗ್ ವಾಹನಗಳ ಮಾಲೀಕರು ರಾಯಚೂರು ಮಹಾನಗರ ಪಾಲಿಕೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ತಪ್ಪಿದ್ದಲ್ಲಿ, ಮಹಾನಗರ ಪಾಲಿಕೆ ಅಧಿನಿಯಮ 1976 ರ ಪ್ರಕಾರ ಕ್ರಮ ಕೈಗೊಳ್ಳುವುದಲ್ಲದೇ ಮತ್ತು ಪ್ರೊಹಿಬಿಷನ್ ಆಫ್ ಎಂಪ್ಲಾಯ್ಮೆಂಟ್ ಆಸ್ ಮ್ಯಾನುವಲ್ ಸ್ಕ್ಯಾವೆಂಜರ್ಸ ಅಂಡ್ ಧೇರ್ ರಿಹ್ಯಾಬಿಟೇಶನ್ ಆಕ್ಟ್ -2023 (Prohibition of employment as manual scavengers and their rehabilitation act 2013) ರಡಿ ತಮ್ಮ ಮೇಲೆ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಮತ್ತು ಪಾಲಿಕೆಯ ಡಿಸ್ಲಡ್ಜಿಂಗ್ ವಾಹನಗಳು ಅಥವಾ ಪಾಲಿಕೆಯಿಂದ ನೋಂದಾಯಿತ ಡಿಸ್ಲಡ್ಜಿಂಗ್ ವಾಹನಗಳಿಂದ ಮಾತ್ರ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಿಕೊಳ್ಳಲು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ. ಆದ್ದರಿಂದ ದಿ:23-02-2026 ರಂದು ಪಾಲಿಕೆಯ ಸಭಾಂಗಣದಲ್ಲಿ (ಹಳೆ ಜಿಲ್ಲಾಧಿಕಾರಿಗಳ ಕಛೇರಿ) ಸಮಯ ಬೆಳಗ್ಗೆ 11 ಗಂಟೆಗೆ ಡಿಸ್ಲಡ್ಜಿಂಗ್ ವಾಹನ ಮತ್ತು ದಾಖಲಾತಿಗಳೊಂದಿಗೆ ಸಭೆಗೆ ಹಾಜರಾಗಲು ಮತ್ತು ದಿ:28-02-2026 ರೊಳಗಾಗಿ ಡಿಸ್ಲಡ್ಜಿಂಗ್ ವಾಹನಗಳನ್ನು ಪಾಲಿಕೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *