ಮುದಗಲ್: ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರು ತಾಲೂಕು ಕಮಿಟಿವತಿಯಿಂದ ಮುದಗಲ್ ಪಟ್ಟಣದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಅಂಜುಮನ್-ಎ-ಮುಸ್ಲಿಮೀನ್ ಮುದಗಲ್ ವಿಭಾಗದ ನೂತನ ಕಮಿಟಿಯನ್ನು ಸಮುದಾಯದವರ ಒಮ್ಮತದ ಅಭಿಪ್ರಾಯದ ಮೇರೆಗೆ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಮುದಗಲ್ ವಿಭಾಗದ ಕಮಿಟಿಯ ಅಧ್ಯಕ್ಷರಾಗಿ ಮಹ್ಮದ್ ರಸೂಲ್, ಉಪಾಧ್ಯಕ್ಷರಾಗಿ ಅರ್ಬಾಜ್ ಖಾನ್, ಪ್ರಧಾನ ಕಾರ್ಯದರ್ಶಿಯಾಗಿ ಅಸ್ಲಾಂ ಡೊಯಿ, ಖಜಾಂಚಿಯಾಗಿ ಆರಿಫ್ ಡೊಯಿ, ಕಾರ್ಯದರ್ಶಿಯಾಗಿ ಹುಸೇನ್ ಭಾಷಾ, ಜಂಟಿ ಕಾರ್ಯದರ್ಶಿಯಾಗಿ ಯಾಸೀನ್ ಪಾನ್ ವಾಲೆ, ಸಹ ಕಾರ್ಯದರ್ಶಿಯಾಗಿ ಅಬ್ರಾರ್ ಅವರನ್ನು ಆಯ್ಕೆ ಮಾಡಲಾಯಿತು.

ಇದಲ್ಲದೆ ಸದಸ್ಯರಾಗಿ ಮೈಬೂಬ್, ಶಾಹೀದ್, ರಾಜ್ ಮಹ್ಮದ್, ಖಾಸಿಂ ಅಲಿ ಡೊಂಗ್ರಿ ಹಾಗೂ ಭಾಷಾ ಆನೆಹೊಸೂರ ಅವರನ್ನು ಆಯ್ಕೆ ಮಾಡಲಾಯಿತು.

ಅದೇ ಸಂದರ್ಭದಲ್ಲಿ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರು ತಾಲೂಕು ಕಮಿಟಿಗೆ ಮುದಗಲ್ ವಿಭಾಗದಿಂದ ಜನಾಬ್ ರಹೀಮ್ ಶಾ ಮಕಾನದಾರ್, ಜನಾಬ್ ಮೋಹಿನುದ್ದಿನ್ ಭಂಡಾರಿ ಸಾಬ್, ಜನಾಬ್ ಅಬ್ದುಲ್ ಹಮೀದ್ ಹಾಗೂ ಜನಾಬ್ ಮೀರು ಹುಸೇನ್ ಮಕಾನದಾರ್ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಅಂಜುಮನ್ ಲಿಂಗಸೂಗೂರು ತಾಲೂಕು ಕಮಿಟಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮುದಗಲ್ ಪಟ್ಟಣದ ಸಮುದಾಯದ ಗುರುಹಿರಿಯರು ಮತ್ತು ಸಹೋದರರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭಾಶಯಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *