ಹಾಲಾಪೂರ: ಗ್ರಾಮದಲ್ಲಿರುವ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯ ಅಂಗವಾಗಿ ಪೂಜಾ ಕಾರ್ಯಕ್ರಮವನ್ನು ಬಸವಲಿಂಗಸ್ವಾಮಿ ನಂದಿಹಾಳ ನೆರವೇರಿಸಿದರು. ನಂತರ ಉಪನ್ಯಾಸಕ ಸಿದ್ದಾರ್ಥ ಪೊ. ಪಾ ಮಾತನಾಡಿ ಹಿಂದುಸ್ತಾನವನ್ನು ಒಗ್ಗೂಡಿಸಲು ಬಹಳಷ್ಟು ಶ್ರಮವಹಿಸಿದವರು ಛತ್ರಪತಿ ಶಿವಾಜಿಯವರು, ಅನೇಕ ಕೋಟೆಗಳನ್ನು ಗೆದ್ದು ಇಡೀ ಭಾರತವನ್ನು ತಮ್ಮ ಆಳ್ವಿಕೆಗೆ ತಂದರು, ಅವರ ಶೌರ್ಯ ಸಾಹಸ ರಾಷ್ಟ್ರಭಕ್ತಿ ಆಡಳಿತಗಾರರಾಗಿ ಭಾರತ ಚರಿತ್ರೆಯಲ್ಲಿ ಅಗ್ರಪಂಕ್ತಿ ನಾಯಕರಾಗಿ ಇಂದಿಗೂ ಜನಮನದಲ್ಲಿ ಹಚ್ಚಹಸಿರಾಗಿ ಉಳಿದಿರುವ ಮಹಾನ್ ಪ್ರಸಿದ್ಧ ಪುರುಷರು, ಮೂಲ ಅವರಿಗೆ ಪ್ರೇರಣೆ ಎಂದರೆ ತಂದೆ ತಾಯಿ ಹಾಗೂ ಸಮರ್ಥ ಗುರುಗಳ ಆಶೀರ್ವಾದ, ಅತ್ಯುತ್ತಮ ಆದರ್ಶ ಕಥೆಗಳು, ಅವರಿಗೆ ಭವಿಷ್ಯದಲ್ಲಿ ಬದಲಾವಣೆಗೆ ಪೂರಕ ಶಕ್ತಿಯಾಗಿ ಬೆಳೆದರೂ ಎಂದು ಹೇಳಿದರು. ಈ ವೇಳೆಯಲ್ಲಿ ಮೌನೇಶ ಮರಾಠ, ಬಸವರಾಜ ಗಜೇಂದ್ರಗಡ, ಚನ್ನಬಸವ ಮಾ.ಪಾ, ತೇನ್ ಸಿಂಗ ಮರಾಠ, ಅಮರೇಶ ಸೂಸೈಟಿ,ಶಾ೦ತಪ, ನಾಗರಾಜ ತುಂಟಾಪುರ, ಗ೦ಗಾಧರ ಮಡಿವಾಳ, ಅಮರೇಶ ಏಳುಕುರಿ, ಮೌಲಸಾಬ, ಬಸವರಾಜ ಮರಾಠ, ಫಯಾಜ, ದುರಗೇಶ, ಬಸವರಾಜ ಇನ್ನಿತರರು ಇದ್ದರು.

