ಮೊಘಲರ ಮತ್ತು ಸುಲ್ತಾನರ ವಿರುದ್ದ ತನ್ನ ಚಿಕ್ಕ ಸೈನ್ಯವನ್ನು ಒಗ್ಗೂಡಿಸಿಕೊಂಡು ಪರಿಮಿತವಾದ ಸಂಪನ್ಮೂಲಗಳನ್ನು ಬಳಸಿಕೊಂಡು ಅವರ ವಿರುದ್ದ ಹೋರಾಡಿದ ಪರಾಕ್ರಮಿ ನಾಯಕ ಛತ್ರಪತಿ ಶಿವಾಜಿ ಎಂದು ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಛತ್ರಪತಿ ಶಿವಾಜಿಯವರ 399ನೇ ಜಯಂತಿಯನ್ನು ಹಮ್ಮಿಕೊಂಡು ಅತ್ಯಂತ ಸರಳ ಮತ್ತು ಅರ್ಥಪೂರ್ಣವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಆಚರಿಸಿ ಮಾತನಾಡಿದ ಅವರು, ಭಾರತೀಯತೆ ಮತ್ತು ಸ್ವದೇಶಿ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿದ್ದರು. ದಕ್ಷಿಣ ಭಾಗವನ್ನು ಕೈವಶ ಮಾಡಿಕೊಂಡು ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಜೊತೆಜೊತೆಗೆ ಭವ್ಯ ಭಾರತ ನಿರ್ಮಾಣದ ಕನಸನ್ನು ಆ ಕಾಲದಲ್ಲೇ ಕಂಡಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನೀವೆಲ್ಲರೂ ನಡೆಯೋಣ ಅವರ ಭವ್ಯ ಭಾರತದ ಕನಸನ್ನು ನನಸಾಗಿಸೋಣ ಎಂದರು.
ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾತನಾಡಿ, ದೇಶ ಭಕ್ತಿ ಶಿವಾಜಿ ಮಹಾರಾಜರಿಗೆ ಅಪಾರವಾಗಿತ್ತು. ಅವರ ಕೆಚ್ಚೆದೆಯ ಹೋರಾಟ ಯುವಕರಿಗೆ ಸ್ಪೂರ್ತಿ, ನಮ್ಮ ದೇಶದ ಸ್ವತಂತ್ರವನ್ನು ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಹೋರಾಡಿದ ಹೋರಾಟ ಜಗತ್ತಿಗೆ ಆದರ್ಶಪ್ರಾಯವಾಗಿದೆ. ಯುವಕರು ಶಿವಾಜಿಯಂತಹ ದೇಶ ಭಕ್ತನನ್ನ ಆದರ್ಶವಾಗಿಟ್ಟುಕೊಂಡು ಭವ್ಯ ಭಾರತದ ನಿರ್ಮಾಣಕ್ಕಾಗಿ ಸಂಕಲ್ಪತೊಡಬೇಕು ಎಂದರು.
ನಂತರ ಗಂಗಾವತಿ ರಸ್ತೆ ರೈಲ್ವೆ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿರುವ ಶಿವಾಜಿ ಮಹಾರಾಜರ ಪುತ್ಥಳಿಗೆ ಶರಣರು, ಮುಖಂಡರು, ಸಮಾಜದ ಬಂಧುಗಳು ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕುವ ಮೂಲಕ ಗೌರವ ಸಮರ್ಪಣೆ ಸಲ್ಲಿಸಿದರು.
ಇದೇ ವೇಳೆ: ಬಂಗಾರಿ ಕ್ಯಾಂಪ್ ಸದಾನಂದ ಶರಣರು, ಕಾಂಗ್ರೆಸ್ ಮುಖಂಡ ಸೋಮನಗೌಡ ಬಾದರ್ಲಿ, ಪಂಪನಗೌಡ ಬಾದರ್ಲಿ, ಪೌರಾಯುಕ್ತ ಪಾಂಡುರಂಗ ಇಟಗಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡಬಸವರಾಜ, ಜೆಡಿಎಸ್ ಯುವ ಮುಖಂಡ ಅಭಿಷೇಕ ನಾಡಗೌಡ, ಬಿಜೆಪಿ ಮುಖಂಡ ಹನುಮೇಶ, ಮರಾಠಾ ಸಮಾಜದ ಜಿಲ್ಲಾಧ್ಯಕ್ಷ ನಾಗೋಜಿರಾವ್ ಮರಾಠ, ತಾಲೂಕು ಅಧ್ಯಕ್ಷ ಶ್ರೀನಿವಾಸ ಮರಾಠ, ಶೇಖರ್ ಪವಾರ್, ನಾರಾಯಣರಾವ್ ಪವಾರ್, ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಸೇವಾ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಚೌಧರಿ, ಪ್ರಧಾನ ಕಾರ್ಯದರ್ಶಿ ದೇವರಾಜ ಪಾಟೀಲ್, ಉಪಾಧ್ಯಕ್ಷರಾದ ಶಶಿಧರ, ಉಮೇಶ ಪವಾರ್, ಹಾಗೂ ಮಹಾವೀರ, ಕಾರ್ಯದರ್ಶಿ ಕೆ.ಜಗದೀಶ, ಸಹ ಕಾರ್ಯದರ್ಶಿ ರವಿ ಉಪ್ಪಾರ್, ಖಜಾಂಚಿ ಕಿಶೋರ್, ಸಹ ಖಜಾಂಚಿ ನಾಗೇಶ ಪವಾರ್, ಕಾನೂನು ಸಲಹೆಗಾರ ಗಿರೀಶ ಇಚನಾಳ, ಕಾರ್ಯಕಾರಿ ಮಂಡಳಿ ಸದಸ್ಯ ಸುಕರಾಜ್, ಟ್ರಸ್ಟಿನ ಸದಸ್ಯರಾದ ವಿನೋದ್ ಬಾಂಡ್ ಗೆ, ಸುಭಾಷ್ ಪವಾರ್, ಮನೋಹರ ಹಿರೇಮಠ, ಶಿವಕುಮಾರ, ವೀರೇಶ, ಉದಯಕುಮಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


