ತಾಳಿಕೋಟಿ: ಪಟ್ಟಣದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಆಯ್ಕೆ ಮಾಡಿದ ಸ್ಥಳ ಬಹುದೂರ ಇರೋದ್ರಿಂದ ಅದನ್ನು ರದ್ದುಗೊಳಿಸಿ ಪಟ್ಟಣದ ಸಮೀಪದಲ್ಲಿಯೇ ಸ್ಥಳ ಆಯ್ಕೆ ಮಾಡಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ತಾಲೂಕ ಹೋರಾಟ ಸಮಿತಿ ಪದಾಧಿಕಾರಿಗಳು ವಿಜಯಪುರ ಉಸ್ತುವಾರಿ ಸಚಿವ ಎಂ ಬಿ ಪಾಟೀಲರಿಗೆ ಮನವಿ ಸಲ್ಲಿಸಿದರು. ಸೋಮವಾರ ವಿಜಯಪುರ ನಗರದಲ್ಲಿ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರಿಗೆ ಭೇಟಿ ಮಾಡಿದ ತಾಲೂಕ ಹೋರಾಟ ಸಮಿತಿಯ ಪದಾಧಿಕಾರಿಗಳು ಪ್ರಜಾ ಸೌಧ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಆಯ್ಕೆ ಮಾಡಿದ ಸ್ಥಳ ದೂರದಲ್ಲಿರುವುದರಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಹಾಗೂ ಪಟ್ಟಣದಲ್ಲಿ ಸರ್ಕಾರಿ ಸ್ಥಳಗಳು ಲಭ್ಯವಿದ್ದು ಅವುಗಳನ್ನು ಆಯ್ಕೆ ಮಾಡಲು ಇರುವ ಅವಕಾಶಗಳ ಕುರಿತು ಸಚಿವರೊಂದಿಗೆ ಚರ್ಚಿಸಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಉಸ್ತುವಾರಿ ಸಚಿವರು ಸದರಿ ವಿಷಯದ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು. ಈ ಸಮಯದಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಆರ್ ಎಸ್ ಪಾಟೀಲ ಕೂಚಬಾಳ, ಕಾಶಿನಾಥ ಮುರಾಳ, ಎಂಎಸ್ ಸರಶೆಟ್ಟಿ, ಮುತ್ತಪ್ಪ ಚಮಲಾಪೂರ, ಪ್ರಕಾಶ ಹೆಜೇರಿ, ಮಾಸೂಮಸಾಬ ಕೆಂಭಾವಿ, ವಿಜಯಸಿಂಗ್ ಹಜೇರಿ, ಅಮಿತಸಿಂಗ್ ಮನಗೂಳಿ, ಜೈಭೀಮ ಮುತ್ತಗಿ, ನಾಗೇಶ್ ಕಟ್ಟಿಮನಿ, ರವಿ ಕಟ್ಟಿಮನಿ, ಮಂಜುನಾಥ ಶೆಟ್ಟಿ, ಸಿರಸಕುಮಾರ ಹಜೇರಿ, ಮುದುಕಪ್ಪ ಬಡಿಗೇರ, ಶರಣು ಗೊಟಖಂಡಕಿ,ನಿತಿನ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *