ರಾಯಚೂರು ಫೆಬ್ರವರಿ 05 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಅಂಗವಾಗಿ ಫೆ.07ರಂದು ಕೃಷಿ ವಿಶ್ವವಿದ್ಯಾಲಯದ ಮುಖ್ಯ ವೇದಿಕೆಯಲ್ಲಿ ಸಂಜೆ 6.55 ರಿಂದ 7ರವರೆಗೆ ಫೈರ್ ಶೋ, ಸಂಜೆ 7.00 ರಿಂದ 7.30ರವರೆಗೆ ಎಂ.ಜೆ ತಂಡದಿಂದ ನೃತ್ಯ ಕಾರ್ಯಕ್ರಮ, ಸಂಜೆ 7.30 ರಿಂದ 9ವರೆಗೆ ಅಲ್ ಓಕೆ ತಂಡದವರಿಂದ ಸಂಗೀತ ಕಾರ್ಯಕ್ರಮ, 9ರಿಂದ 930ರವರೆಗೆ ಎಂ.ಜೆ. 5 ತಂಡದಿಂದ ಸಂಗೀತ ಕಾರ್ಯಕ್ರಮ, ರಾತ್ರಿ 9.30ರಿಂದ 11.10ರವರೆಗೆ ವಿಜಯ ಪ್ರಕಾಶ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿವೆ.

