ರಾಯಚೂರು ಫೆಬ್ರವರಿ 05 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ನಗರದ ಕೃಷಿ ವಿವಿಯ ಮುಖ್ಯ ವೇದಿಕೆ 01ರಲ್ಲಿ ಫೆಬ್ರವರಿ 07ರಂದು ಸಂಜೆ 4ರಿಂದ ರಾತ್ರಿ 7ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅಂಬಯ್ಯ ನುಲಿ ಮಾನ್ವಿ ಅವರಿಂದ ವಚನ ಗಾಯನ, ನರಸಿಂಹಲು ಅಸ್ಕಿಹಾಳ ಅವರಿಂದ ಸುಗಮ ಸಂಗೀತ, ಸರಸ್ವತಿ ಹೆಚ್ ಅವರಿಂದ ಶಾಸ್ತ್ರೀಯ ಸಂಗೀತ, ಹನುಮಂತ್ ಕುಮಾರ ಚಿಕ್ಕ ಕೋಟೆಕಲ್ ಅವರಿಂದ ತಬಲಾ ವಾದನ, ಪಂಡಿತ ಅಮರೇಶ್ ಗವಾಯಿಗಳು ಚಿಕ್ಕ ಕೋಟ್ನೆಕಲ್ ಅವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ನಾರಾಯಣಪ್ಪ ಮಾಡಸಿರವಾರ ಅವರಿಂದ ಜನಪದ ಗಾಯನ, ಸುಮಂಗಲಾ ಡಿ. ಮೈಸೂರು ಅವರಿಂದ ಹಿಂದುಸ್ಥಾನಿ ಶಾಸ್ತಿçಯ ಸಂಗೀತ, ವಿಶ್ವನಾಥ ರಾಯಚೂರು ಅವರಿಂದ ಜನಪದ ಗೀತೆ, ಶ್ರೀನಿವಾಸ ಖಾನಪೂರ (ಶ್ಯಾಮ್) ಅವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ಸವಿತಾ ಅಮರೇಶ ನುಗಡೋಣಿ ಅವರಿಂದ ದಾಸವಾಣಿ, ವೇಣುಗೋಪಾಲ ವರಪ್ಪ ಅವರಿಂದ ದಾಸವಾಣಿ, ಜಯಪ್ಪ ಪಟ್ಟಿ ವಿಜಯನಗರ ಅವರಿಂದ ಸಮೂಹ ನೃತ್ಯ, ನಾಗೇಂದ್ರ ವಂತಿ ನೃತ್ಯ ಕಲಾ ಸಂಘ ರಾಯಚೂರು ಅವರಿಂದ ಸಮೂಹ ನೃತ್ಯ, ಚಂದ್ರಶೇಖರ ರಾಯಚೂರು ಅವರಿಂದ ಸಮೂಹ ನೃತ್ಯ, ವಿಜಯಲಕ್ಷ್ಮೀ ಮೋನಿಕಾ ನೃತ್ಯಕಲಾ ಸಂಸ್ಥೆ ರಾಯಚೂರು ಅವರಿಂದ ಸಮೂಹ ನೃತ್ಯ, ಕೋಟ್ರೇತ ಸಿಂಧನೂರು ಅವರಿಂದ ತೊಗಲು ಗೊಂಬೆಯಾಟ, ತಿಮ್ಮಪ್ಪ ಇಟೇಕರ ರಾಯಚೂರು ಅವರಿಂದ ಸುಗಮ ಸಂಗೀತ, ರಾಜಶೇಖರ ನುಲಿ ಅವರಿಂದ ಮೂಲಕಪ್ಪ ಹೆಚ್. ರಾಯಚೂರು ಅವರಿಂದ ಕನ್ನಡ ಗೀತೆಗಳು ನಡೆಯಲಿವೆ.
ಗೀತಾರಾಣಿ ರಾಯಚೂರು ಹಾಗೂ ಡಾ.ಬಿ.ವಿಜಯರಾಜೇಂದ್ರ ರಾಯಚೂರು ಅವರು ನಿರೂಪಣೆ ಮಾಡಲಿದ್ದಾರೆ.

Leave a Reply

Your email address will not be published. Required fields are marked *