ರಾಯಚೂರು ಫೆಬ್ರವರಿ 03 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಅಂಗವಾಗಿ ಫೆ.05ರಂದು ಕೃಷಿ ವಿಶ್ವವಿದ್ಯಾಲಯದ ಮುಖ್ಯ ವೇದಿಕೆಯಲ್ಲಿ ಸಂಜೆ 5.30ಕ್ಕೆ ಮುಖ್ಯ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾವಾರು ಶ್ರೇಷ್ಠ ಕೃಷಿಕ, ಕೃಷಿಕ ಮಹಿಳೆ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಪುರಸ್ಕೃತರ ಪರಿಚಯ ಕೃಷಿ ತಾಂತ್ರಿಕತೆಗಳ ಕೈಪಿಡಿ, ಹಸ್ತ ಪ್ರತಿ ಪ್ರಕಟಣೆಗಳ ಬಿಡುಗಡೆ ನಡೆಯಲಿದೆ.
ಸಂಜೆ 6.55ಕ್ಕೆ ಫೈರ್ ಶೋ ನಡೆಯಲಿದೆ. ಸಂಜೆ 7 ಗಂಟೆಗೆ ಎಕ್ಸಟೆಸ್ಸಿ ತಂಡದಿಂದ ನೃತ್ಯ ಕಾರ್ಯಕ್ರಮ, ಸಂಜೆ 7.15 ರಿಂದ 9.15ವರೆಗೆ ಸವಾರಿ ತಂಡದವರಿಂದ ಕಾರ್ಯಕ್ರಮ, ರಾತ್ರಿ 9.15 ರಿಂದ 9.30 ರವರೆಗೆ ಎಕ್ಸ್ಟೆಸ್ಸಿ ತಂಡದಿಂದ ನೃತ್ಯ ಕಾರ್ಯಕ್ರಮ ಹಾಗೂ ರಾತ್ರಿ 9.40 ರಿಂದ 11.00 ರವರೆಗೆ ಸಂಜಿತ್ ಹೆಗಡೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
