ರಾಯಚೂರು ಫೆಬ್ರವರಿ 03 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ವೇದಿಕೆಯಲ್ಲಿ ಫೆ.5ರ ಸಂಜೆ 4 ತಂಟೆಯಿಂದ 5.30ರವರೆಗೆ ಪಂಡಿತ ನರಸಿಂಹಲು ವಡವಟ್ಟಿ ಅವರಿಂದ ಕ್ಲಾರಿನೇಟ್ ವಾದನ, ಶರಣಪ್ಪ ಗೋನಾಳ ಅವರಿಂದ ಜಾನಪದ ಗಾಯನ, ವೀರುಪಾಕ್ಷ ವಂದಲಿ ಅವರಿಂದ ಹಿಂದೂಸ್ಥಾನಿ ಶಾಸ್ತಿçಯ ಸಂಗೀತ, ಸೂಗೂರೇಶ ಅಸ್ಕಿಹಾಳ ಅವರಿಂದ ಹಿಂದುಸ್ಥಾನಿ ಶಾಸ್ತಿçಯ ಸಂಗೀತ, ನಬಿ ಬೇಗ್ ರಾಯಚೂರು ಅವರಿಂದ ಗಜಲ್, ಮುದ್ದುಮೋಹನ ರಾಯಚೂರು ಅವರಿಂದ ಹಿಂದುಸ್ಥಾನಿ ಸಂಗೀತ, ಶ್ರೇಯಸ್ ಜೋಷಿ ಅವರಿಂದ ಭರತನಾಟ್ಯ, ಗೋಪಾಲ ಗುಡಿಬಂಡಿ ರಾಯಚೂರು ಅವರಿಂದ ತಬಲಾವಾದನ, ವಿಷ್ಣುದೇಸಾಯಿ ಅವರಿಂದ ಏಕಪಾತ್ರಭಿನಯ, ಶಾಂತಕುಲಕರ್ಣಿ ಶಕ್ತಿನಗರ ಅವರಿಂದ ಜಾನಪದ ಸಂಗೀತ ನಡೆಯಲಿವೆ.
ಮುರಳಿಧರ ಕುಲಕರ್ಣಿ, ಮರಿಮಳ ದಿಕ್ಷೀತ್, ಭಾವನಿ ಲೋಕೇಶ ಅವರು ನಿರೂಪಿಸುವರು.
