ತಾಳಿಕೋಟಿ: ಯಾವುದೇ ಒಂದು ಸಮಾಜ ಸರ್ವಾಂಗೀಣ ಪ್ರಗತಿಯನ್ನು ಕಾಣಬೇಕಾದರೆ ಆ ಸಮಾಜದ ಜನರು ಶಿಕ್ಷಣವಂತರಾಗಿರುವುದು ಅತ್ಯವಶ್ಯಕವಾಗಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ ಹೇಳಿದರು. ರವಿವಾರ ಪಟ್ಟಣದ ಶ್ರೀ ಖಾಸ್ಗತೇಶ್ವರ ಸಭಾಭವನದಲ್ಲಿ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇ ವಜೀರ ಸಮಾಜ ವಿಜಯಪುರ ಹಾಗೂ ತಾಳಿಕೋಟೆ ತಾಲೂಕ ಘಟಕವು ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಹಂಡೇ ವಜೀರ ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾದ ಸಮಾಜವಾಗಿದ್ದು ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಶಿಕ್ಷಣ ಸಂಸ್ಥೆಗಳನ್ನೂ ಆರಂಭಿಸಬೇಕು ಎಂದರು. ಸಮಾರಂಭ ಉದ್ಘಾಟಿಸಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್ ಎಸ್ ಪಾಟೀಲ ಕೂಚಬಾಳ ಮಾತನಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಭಾರತದ ಭವ್ಯ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಕಲಿಸಿಕೊಡಬೇಕು ಮಕ್ಕಳು ಸಮಾಜದ ಭವಿಷ್ಯ ವಾಗಿದ್ದಾರೆ ಅವರ ಕುರಿತು ಹೆಚ್ಚಿನ ಕಾಳಜಿ ಪಾಲಕರು ವಹಿಸಬೇಕು. ಹಂಡೇವಜೀರ ಸಮಾಜ ಎಲ್ಲರೊಂದಿಗೆ ಬೆರೆಯುವ ಸಮಾಜವಾಗಿದೆ ಸಮಾಜದ ಐಕ್ಯತೆಗೆ ಇಂಥಹ ಕಾರ್ಯಕ್ರಮಗಳು ಪೂರಕವಾಗುತ್ತವೆ ಎಂದರು. ಕಲಬುರ್ಗಿ ಯುವ ಸಂಶೋಧಕ ಡಾ.ಡಿ.ಎನ್. ಪಾಟೀಲ, ಡಾ.ಎಂ ಎಂ ಬೆಳಗಲ್, ಜಯಶ್ರೀ ದೇವಿ ರಾಜುಗೌಡ ಪಾಟೀಲ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಹಂಡೇ ವಜೀರ ಸಮಾಜದ ರಾಜ್ಯಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಸಮಾಜವನ್ನು ಸಂಘಟಿಸಲು ಹಲವಾರು ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿದ್ದೇವೆ ಈ ರೀತಿಯ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳ ಮೂಲಕ ಸಮಾಜದ ಪ್ರತಿಭಾವಂತರನ್ನು ಗುರುತಿಸುವ ಕಾರ್ಯಕ್ರಮ ಮಾಡುತ್ತಿದ್ದೇವೆ ಸಮಾಜದ ಏಳಿಗಾಗಿ ಇನ್ನು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಹಿರೂರ ಅನ್ನದಾನೇಶ್ವರ ಹಿರೇಮಠದ ಪೂಜ್ಯ ಜಯ ಗುರು ಸಿದ್ದೇಶ್ವರ ಮಹಾ ಸ್ವಾಮೀಜಿ, ಕರಿಭಂಟನಾಳದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಹಾಗೂ ಕಲ್ಕೇರಿಯ ಗುರು ಮಡಿವಾಳೇಶ್ವರ ಶಿವಾಚಾರ್ಯರು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ 2024 25ನೇ ವರ್ಷದ ಎಸ್ ಎಸ್ ಎಲ್ ಸಿ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ಸಮಾಜದ ಎಂಬಿಬಿಎಸ್ ಹಾಗೂ ಎಮ್.ಡಿ. ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಸಮಾಜದ ವತಿಯಿಂದ ಹೊರ ತಂದಿರುವ 2026ರ ನೂತನ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಯಿತು. ಈ ಸಮಯದಲ್ಲಿ ತಾಲೂಕ ಘಟಕದ ಅಧ್ಯಕ್ಷ ರಾಮನಗೌಡ ಸಂ. ಬಿರಾದಾರ(ಕರಭಂಟನಾಳ), ಸೋಮನಗೌಡ ಪಾಟೀಲ(ನಡಹಳ್ಳಿ), ಜಿಎನ್ ಪಾಟೀಲ, ಎಚ್.ಎಸ್.ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಎಸ್ ಪಾಟೀಲ (ಅಗಸಬಾಳ), ಜಿಲ್ಲಾ ಅಧ್ಯಕ್ಷ ಸಂಗನ ಗೌಡ ಕರಬಂಟನಾಳ, ಬಾಗಲಕೋಟ ಅಧ್ಯಕ್ಷ ವಿ.ಕೆ.ಪಾಟೀಲ,ಡಾ.ವಿ.ಎಸ್.ಕಾರ್ಚಿ,ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ, ಗೌರವಾಧ್ಯಕ್ಷ ಎಸ್.ಆರ್.ದೇಸಾಯಿ ಗೌಡ್ರು, ಮುತ್ತು ಬಿರಾದಾರ(ಚಬನೂರ), ಬಿಎಸ್ ಪಾಟೀಲ ಎಸ್ ಜಿ ಪಾಟೀಲ, ಆರ್ ಬಿ ಮ್ಯಾಗೇರಿ, ಶಂಕರಗೌಡ ರಾಯಗೊಂಡ,ಬಾಪುಗೌಡ ಬಿರಾದಾರ,ಎಸ್.ಜಿ.ಬಳವಾಟ, ಸಂಗನಗೌಡ ಪಾಟೀಲ,
ಕೆ.ಎಸ್.ಗೌಡರ,ಎಂ.ಬಿ.ಬಿರಾದಾರ, ಸಿದ್ದನಗೌಡ ಪಾಟೀಲ, ರಾಜಶೇಖರ ಪಾಟೀಲ,ಎಸ್ ಎಸ್ ಅವರಾದಿ, ಸಮಾಜದ ಹಿರಿಯರು ಗಣ್ಯರು ಇದ್ದರು.

Leave a Reply

Your email address will not be published. Required fields are marked *