ಬಳಗಾನೂರು,ಫೆ,1:- ದಿನಾಂಕ 5:2:2026 ರ ಬೆಳಿಗ್ಗೆ 9-00 ಗಂಟೆಯಿಂದ ಮದ್ಯಾಹ್ನ 1:30 ರ ವರೆಗೆ ಜಿಲ್ಲಾ ಕಾರಾಗೃಹ ರಾಯಚೂರು ಹತ್ತಿರ, ರಾಯಚೂರು ತಾಲೂಕು ತಹಸೀಲ್ದಾರ ಕಚೇರಿ ರಸ್ತೆಯ

ನಗರದ ಮಹಿಳಾ ಸಮಾಜ ಆವರಣದಲ್ಲಿ ನಡೆಯುವ ಕವಿಗೋಷ್ಠಿ-01 ರಲ್ಲಿ ಮಸ್ಕಿ ತಾಲೂಕಿನ ಕವಿ,ವರದಿಗಾರ,ಉಪನ್ಯಾಸಕ ಸುರೇಶ ಬಳಗಾನೂರು ಆಯ್ಕೆಯಾಗಿದ್ದಾರೆ.

ಈ ಕಾರ್ಯಕ್ರಮದ ಉದ್ಘಾಟಕರಾಗಿ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ರಂಗಣ್ಣ ಪಾಟೀಲ್,ಅಳ್ಳುಂಡಿ ಆಗಮಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಿಂಗಸುಗೂರಿನ ಸಾಹಿತಿಗಳಾಗಿರುವ ಗಿರಿರಾಜ ಹೊಸಮನಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ

ರಾಯಚೂರು ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾಗಿರುವ ಶಿವಾನಂದ,ರಾಯಚೂರು ಜಿಲ್ಲಾ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿರುವ

ಈರಣ್ಣ ಬಿರಾದಾರ, ಸಾಹಿತಿಗಳಾಗಿರುವ ಬಿ.ಜಿ.ಹುಲಿ,

ರಾಯಚೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಡಾಕ್ಟರ್,ಬಿ.ವಿಜಯ ರಾಜೇಂದ್ರ,

ಸಿಂಧನೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಹೆಚ್,ಎಫ್ ಮಸ್ಕಿ ಆಗಮಿಸಲಿದ್ದಾರೆ.

ರಾವುತ್ ರಾವ್ ಬರೂರ್ ಈ ಕವಿಗೋಷ್ಟಿಗೆ ಸ್ವಾಗತಿಸಲಿದ್ದಾರೆ ನಿರೂಪಣೆಯನ್ನು

ಅಣ್ಣಪ್ಪ ಮೇಟಿಗೌಡ ಮಾಡಲಿದ್ದಾರೆ,ವಿಜಯಲಕ್ಷ್ಮೀ ಅಸ್ಕಿಹಾಳ ವಂದಿಸಲಿದ್ದಾರೆ.

ನಿರ್ವಹಣೆ ನಾಗಪ್ಪ ಹೊರಪ್ಯಾಟಿ ಕಾರ್ಯಕ್ರಮದ ನಿರ್ವಹಣೆ ಮಾಡಲಿದ್ದಾರೆ.

Leave a Reply

Your email address will not be published. Required fields are marked *