ರಾಯಚೂರು ಜನವರಿ 30 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಕಡಲೇಕಾಳು ಉತ್ಪನ್ನವನ್ನು ಖರೀದಿಸಲು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ರೈತರು ಸರ್ಕಾರದ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಕೋರಿದ್ದಾರೆ.
ಸರ್ಕಾರದ ಆದೇಶದಂತೆ 2025-26ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕಡಲೇಕಾಳು ಉತ್ಪನ್ನವನ್ನು ಪ್ರತಿ ಎಕರೆಗೆ 4.00 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಟ 40 ಕ್ವಿಂಟಾಲ್ ನಂತೆ ಖರೀದಿಸಲು ಫ್ರೂಟ್ಸ್ ತಂತ್ರಾAಶದಲ್ಲಿ ಲಭ್ಯವಾಗುವ ರೈತರು ಕಡಲೇಕಾಳು ಬೆಳೆದ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗುವಂತೆ ಖರೀದಿ ಪ್ರಮಾಣ ನಿಗದಿಪಡಿಸಿದ್ದು, ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್ ಗೆ ರೂ.5,875 ರಂತೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲಾಗುವುದು.
ದಿನಾಂಕ: 29-01-2026 ರಿಂದ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ನೋಂದಣಿ ಮಾಡಿಕೊಳ್ಳತಕ್ಕದ್ದು. ನೋಂದಣಿ ಕಾರ್ಯದ ಜೊತೆಗೆ ಖರಿದಿ ಪ್ರಕ್ರಿಯೆಯನ್ನು 90 ದಿನಗಳವರೆಗೆ ಖರೀದಿ ಮಾಡಲಾಗುವುದು. ರೈತರಿಂದ ಕಡಲೇಕಾಳು ಖರೀದಿಸುವ ಸಂಬAಧ ಈ ಕೆಳಕಂಡ ಖರೀದಿ ಕೇಂದ್ರಗಳನ್ನು ತೆರೆಯಾಲಾಗಿದ್ದು, ರೈತ ಬಾಂಧವರು ಫ್ರೂಟ್ಸ್ ಐ.ಡಿ ಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿ ಕಡಲೇಕಾಳು ಮಾರಾಟ ಮಾಡಿ ಸರ್ಕಾರದ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಜಿಲ್ಲೆಯ ರೈತ ಬಾಂಧವರಲ್ಲಿ ಕೋರಲಾಗಿದೆ.
ಖರೀದಿ ಕೇಂದ್ರಗಳು: ರಾಯಚೂರು ತಾಲೂಕಿನಲ್ಲಿ ಖರೀದಿ ಕೇಂದ್ರಗಳಾದ ರಾಯಚೂರ ಒಕ್ಕುಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ,ನಿ ಮೊ.ನಂ: 9611493098, ಯರಗೇರಾ ವಿ.ಪ್ರಾ.ಗ್ರಾ.ಕೃ.ಸ.ಸಂ.ನಿ ಮೊ.ನಂ. 9663802434, ಕಲ್ಮಲಾ ಓ.ಜಿ.ಸಿ.ಎಸ್ ಮೊ.ನಂ: 8073143738, ಗಿಲ್ಲೆಸ್ಗೂರ ವಿ.ಪ್ರಾ.ಗ್ರಾ.ಕೃ.ಸ.ಸಂ.ನಿ ಮೊ.ನಂ. 9901492394, ಗೋನಾಳ ಎಫ್.ಪಿ.ಓ(ಗೋನಾಳ) ಮೊ.ನಂ: 9008079008, ಜಾಗಿರ ವೆಂಕಟಾಪೂರ ಎಫ್.ಪಿ.ಓ(ಮರಡಿ ಗಂಗಾಧರ) ಮೊ.ನಂ: 6360410635, ಹುಣಸಿಹಾಳಹುಡಾ ಕ್ಯಾಂಪ್ ಓ.ಜಿ.ಸಿ.ಎಸ್ ಮೊ.ನಂ: 9743695467, ದೇವಸೂಗೂರ ವಿ.ಪ್ರಾ.ಗ್ರಾ.ಕೃ.ಸ.ಸಂ.ನಿ ಮೊ.ನಂ: 9880005759, ಸುಲ್ತಾನಪುರ ವಿ.ಪ್ರಾ.ಗ್ರಾ.ಕೃ.ಸ.ಸಂ.ನಿ ಮೊ.ನಂ: 8310542322ಗೆ ರೈತರು ಸಂಪರ್ಕ ಮಾಡಬಹುದಾಗಿದೆ.
ದೇವದುರ್ಗ ತಾಲೂಕಿನಲ್ಲಿ ಖರೀದಿ ಕೇಂದ್ರಗಳಾದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಾಕರ ಸಂಘ.ನಿ.ದೇವದುರ್ಗ ಮೊ.ನಂ:9901195725, ಪ್ರಾ.ಕೃ.ಪ.ಸ.ಸಂಘ.ನಿ. ಜಾಲಹಳ್ಳಿ. ಮೊ.ನಂ: 8792840625, ಪ್ರಾ.ಕೃ.ಪ.ಸ.ಸಂಘ.ನಿ. ಅರಕೇರಾ ಮೊ.ನಂ: 9008504467, ಎಫ್.ಪಿ.ಒ ಮದರಕಲ್ ಮೊ.ನಂ: 8904175493, ದೇವದುರ್ಗ ಎಫ್.ಪಿ.ಒ ಗಬ್ಬೂರು ಮೊ.ನಂ: 9591411492,8431710456, ಪ್ರಾ.ಕೃ.ಪ.ಸ.ಸಂಘ.ನಿ. ಮಸರಕಲ್ ಮೊ.ನಂ: 9900772919ಗೆ ರೈತರು ಸಂಪರ್ಕ ಮಾಡಬಹುದಾಗಿದೆ.
ಮಾನವಿ ತಾಲೂಕಿನಲ್ಲಿ ಖರೀದಿ ಕೇಂದ್ರಗಳಾದ ಟಿ.ಎ.ಪಿ.ಸಿ.ಎಂ.ಎಸ್ ಮಾನವಿ ಮೊ.ನಂ: 9845014825, ಪ್ರಾ.ಕೃ.ಪ.ಸ.ಸಂಘ.ನಿ. ಕುರ್ಡಿ ಮೊ.ನಂ: 9900993648, ಪ್ರಾ.ಕೃ.ಪ.ಸ.ಸಂಘ.ನಿ.ಅನ್ವರಿ ಮೊ.ನಂ: 7090239798, ಪ್ರಾ.ಕೃ.ಪ.ಸ.ಸಂಘ.ನಿ. ಬ್ಯಾಗವಾಟ ಮೊ.ನಂ: 9902943958, ಪ್ರಾ.ಕೃ.ಪ.ಸ.ಸಂಘ.ನಿ. ತೋರಣದಿನ್ನಿ ಮೊ.ನಂ: 9900834083, ಪ್ರಾ.ಕೃ.ಪ.ಸ.ಸಂಘ.ನಿ. ಎನ್.ಹೊಸೂರು ಮೊ.ನಂ: 9900991282, ಎಫ್.ಪಿ.ಒ(ಸುಬೀಕ್ಷ) ಪೋತ್ನಾಳ ಮೊ.ನಂ: 9986363250ಗೆ ರೈತರು ಸಂಪರ್ಕ ಮಾಡಬಹುದಾಗಿದೆ.
ಲಿಂಗಸೂಗುರು ತಾಲೂಕಿನಲ್ಲಿ ಖರೀದಿ ಕೇಂದ್ರಗಳಾದ ಟಿ.ಎ.ಪಿ.ಸಿ.ಎಂ.ಎಸ್ ಲಿಂಗಸುಗುರು ಮೊ.ನಂ: 9964851546, ಪ್ರಾ.ಕೃ.ಪ.ಸ.ಸಂಘ.ನಿ. ಮುದಗಲ್ ಮೊ.ನಂ: 9980681521, ಕರಡಕಲ್ ವಿ.ಪ್ರಾ.ಗ್ರಾ.ಕೃ.ಸ.ಸಂನಿ ಮೊ.ನಂ: 9632103535, ಪ್ರಾ.ಕೃ.ಪ.ಸ.ಸಂಘ.ನಿ.ಗೆಜ್ಜಲಗಟ್ಟ. ಮೊ.ನಂ: 9739253619, ಪ್ರಾ.ಕೃ.ಪ.ಸ.ಸಂಘ.ನಿ. ಮಾವಿನ ಬಾವಿ ಮೊ.ನಂ: 9902814649, ಪ್ರಾ.ಕೃ.ಪ.ಸ.ಸಂಘ.ನಿ. ಬಯ್ಯಾಪೂರು ಮೊ.ನಂ: 7259575910, ಪ್ರಾ.ಕೃ.ಪ.ಸ.ಸಂಘ.ನಿ. ನಾಗಲಪೂರು ಮೊ.ನಂ: 9972382185, ಅರೂಡ ಎಫ್.ಪಿ.ಒ ಗುಡದನಾಳ ಮೊ.ನಂ: 9880668127, ಪ್ರಾ.ಕೃ.ಪ.ಸ.ಸಂಘ.ನಿ. ಚಿಕ್ಕಹೆಸರೂರು ಮೊ.ನಂ: 9008650141, ಪ್ರಾ.ಕೃ.ಪ.ಸ.ಸಂಘ.ನಿ.ಗುರುಗುAಟಾ ಮೊ.ನಂ: 9972501671, ಮಾಕಾಪುರ ವಿ.ಪ್ರಾ.ಗ್ರಾ.ಕೃ.ಸ.ಸಂ.ನಿ ಮೊ.ನಂ.: 9380120752, ಪ್ರಾ.ಕೃ.ಪ.ಸ.ಸಂಘ.ನಿ. ಹೊನ್ನಳ್ಳಿ. ಮೊ.ನಂ: 8147192737, ಪ್ರಾ.ಕೃ.ಪ.ಸ.ಸಂಘ.ನಿ ಗೌಡೂರು ಮೊ.ನಂ: 9481674336, ಅಮದಿಹಾಳ ವಿ.ಪ್ರಾ.ಗ್ರಾ.ಕೃ.ಸ.ಸಂ.ನಿ ಮೊ.ನಂ: 8197259538, ಎಫ್.ಪಿ.ಒ ಹಟ್ಟಿ ಮೊ.ನಂ: 9632194714, ದೇವರಭೂಪುರ ವಿ.ಪ್ರಾ.ಗ್ರಾ.ಕೃ.ಸ.ಸಂ.ನಿ ಮೊ.ನಂ: 9902216032, ಮುದಗಲ್ ಎಫ್.ಪಿ.ಓ (ಶ್ರೀಸದ್ಗುರು) ಮೊ.ನಂ: 9980681521ಗೆ ರೈತರು ಸಂಪರ್ಕ ಮಾಡಬಹುದಾಗಿದೆ.
ಮಸ್ಕಿ ತಾಲೂಕಿನಲ್ಲಿ ಖರೀದಿ ಕೇಂದ್ರಗಳಾದ ಪ್ರಾ.ಕೃ.ಪ.ಸ.ಸಂಘ.ನಿ.ಮಸ್ಕಿ ಮೊ.ನಂ: 99022040282, ಪ್ರಾ.ಕೃ.ಪ.ಸ.ಸಂಘ.ನಿ. ಮಟ್ಟೂರು ಮೊ.ನಂ: 7259482300, ಪ್ರಾ.ಕೃ.ಪ.ಸ.ಸಂಘ.ನಿ. ಮೆದಿಕಿನಾಳ ಮೊ.ನಂ: 9164116935, ಪ್ರಾ.ಕೃ.ಪ.ಸ.ಸಂಘ.ನಿ. ಗುಡದೂರು ಮೊ.ನಂ: 9448914106, ಪ್ರಾ.ಕೃ.ಪ.ಸ.ಸಂಘ.ನಿ. ಪಮನಕಲ್ಲೂರು ಮೊ.ನಂ: 9731559317, ಪ್ರಾ.ಕೃ.ಪ.ಸ.ಸಂಘ.ನಿ. ಸಂತೆಕಲ್ಲೂರು ಮೊ.ನ:.8123755868, ಬ್ರಹ್ಮಶ್ರೀ ಎಫ್.ಪಿ.ಒ ಗುಂಢಾ ಮೊ.ನಂ: 9449064099, ಉದ್ಬಾಳ ವಿ.ಪ್ರಾ.ಗ್ರಾ.ಕೃ.ಸ.ಸಂ.ನಿ ಮೊ.ನಂ: 9740583413, ಹಂಪನಾಳ ಪ್ರಾ.ಗ್ರಾ.ಕೃ.ಸ.ಸಂ.ನಿ. ಮೊ.ನ: 6360444352, ದಿನಸಮುದ್ರ ವಿ.ಪ್ರಾ.ಗ್ರಾ.ಕೃ.ಸ.ಸಂ.ನಿ ಮೊ.ನಂ: 9916996619ಗೆ ರೈತರು ಸಂಪರ್ಕ ಮಾಡಬಹುದಾಗಿದೆ.
ಸಿಂಧನೂರು ತಾಲೂಕಿನಲ್ಲಿ ಖರೀದಿ ಕೇಂದ್ರಗಳಾದ ಟಿ.ಎ.ಪಿ.ಸಿ.ಎಂ.ಎಸ್. ಸಿಂಧನೂರು.ಮೊ.ನA: 9071004444, ಪ್ರಾ.ಕೃ.ಪ.ಸ.ಸಂಘ.ನಿ.ಜವಳಗೇರಾ ಮೊ.ನಂ: 9742036608, ಪ್ರಾ.ಕೃ.ಪ.ಸ.ಸಂಘ.ನಿ. ಬಳಗನೂರು ಮೊ.ನಂ: 7259992555, ಚೌಡೇಶ್ವರಿ ಎಫ್.ಪಿ.ಒ. ತುರ್ವಿಹಾಳ ಮೊ.ನಂ: 9742366679, ಪ್ರಾ.ಕೃ.ಪ.ಸ.ಸಂಘ.ನಿ. ಬಾದರ್ಲಿ ಮೊ.ನಂ: 9008555540, ಚಿಕ್ಕಬೇರ್ಗಿ ಎಫ್.ಪಿ.ಒ ಮೊ.ನಂ: 8746046467, ಧಾನ್ಯ ಎಫ್.ಪಿ.ಒ. ಕಲಮಂಗಿ ಮೊ.ನಂ: 8722880240, ತಾಲೂಕು ಕೃಷಿ ಸಂಸ್ಕರಣ ಮತ್ತು ಮಾರಾಟ ಸಹಾಕರ ಸಂಘ ನಿ. ಅರಗಿನ ಮರ ಕ್ಯಾಂಪ್ ಮೊ.ನಂ:9972697653, ಅಕ್ಷಯ ಎಫ್.ಪಿ.ಒ ಹತ್ತಿಗುಡ್ಡ, ಮೊ.ನಂ:9741610266, ಉಮಲೂಟಿ ಪ್ರಾ.ಕೃ.ಪ.ಸ.ಸಂಘ.ನಿ. ಮೊ.ನಂ: 9845020712, ಎಫ್.ಪಿ.ಒ (ಭೀಮಲಿಂಗೇಶ್ವರ) ಗೊಬ್ಬರಕಲ್ ಮೊ.ನಂ: 9449244102ಗೆ ರೈತರ ಸಂಪರ್ಕ ಮಾಡಬಹುದಾಗಿದೆ.
ಸಿರವಾರ ತಾಲೂಕಿನಲ್ಲಿ ಖರೀದಿ ಕೇಂದ್ರಗಳಾದ ಪ್ರಾ.ಕೃ.ಪ.ಸ.ಸಂಘ.ನಿ. ಸಿರವಾರ ಮೊ.ನಂ: 9972961199, ಪ್ರಾ.ಕೃ.ಪ.ಸ.ಸಂಘ.ನಿ. ಕವಿತಾಳ ಮೊ.ನಂ:7259842464, ಪ್ರಾ.ಕೃ.ಪ.ಸ.ಸಂಘ.ನಿ. ಹಿರೆಹಣಗಿ ಮೊ.ನಂ: 9845809972, ಪ್ರಾ.ಕೃ.ಪ.ಸ.ಸಂಘ.ನಿ. ಹರವಿ ಮೊ.ನಂ: 9739752256, ಪ್ರಾ.ಕೃ.ಪ.ಸ.ಸಂಘ.ನಿ., ಕಲ್ಲೂರು ಮೊ.ನಂ: 6360823550, ಅತ್ತನೂರು ಪ್ರಾ.ಕೃ.ಪ.ಸ.ಸಂಘ.ನಿ. ಮೊ.ನಂ: 9743125282ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *