ಲಿಂಗಸಗೂರು : ಜ 31
ತಾಲೂಕು ಕಾನೂನು ಸೇವಾ ಸಮಿತಿ, ಹಾಗೂ ವಕೀಲರ ಸಂಘ, ಪುರಸಭೆ, ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನವನ್ನು ಪ್ರತಿವರ್ಷದಂತೆ ಜನವರಿ 30 ರಂದು ‘ರಾಷ್ಟ್ರೀಯ ಸ್ವಚ್ಛತಾ ದಿನ’ವನ್ನು ನ್ಯಾ. ಉಂಡಿ ಮಂಜುಳಾ ಶಿವಪ್ಪ. ನ್ಯಾಯಾಲಯದ ಸಂಕೀರ್ಣ ಮತ್ತು ವಕೀಲರ ಭವನ ಸುತ್ತಮುತ್ತ ಸ್ವಚ್ಛ ಮಾಡುವದರ ಮೂಲಕ ಚಾಲನೆ ನೀಡಿಮಾತನಾಡಿದ ಅವರು .

ಕೆಲಸದ ಸ್ಥಳ, ಮನೆಗಳು ಅಥವಾ ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಉದ್ಯಾನವನಗಳು ಇತರ ಸಾರ್ವಜನಿಕ ಸ್ಥಳಗಳಲ್ಲೂ ಸ್ವಚ್ಛತೆ ಕಾಪಾಡಲು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಇಂದು ‘ರಾಷ್ಟ್ರೀಯ ಸ್ವಚ್ಛತಾ ದಿನ ಮಹಾತ್ಮ ಗಾಂಧಿ ಕಂಡ ಸ್ವಚ್ಛ ಭಾರತದ ಕನಸು ನನಸು ಮಾಡಲು ಪ್ರತಿಯೊಬ್ಬ ನಾಗರೀಕರು ಮುಂದಾಗಬೇಕಿದೆ ಎಂದು ಹೇಳಿದರು, ಈ ಸಂದರ್ಭದಲ್ಲಿ ಭೂಪನಗೌಡ ಪಾಟೀಲ್, ಅಧ್ಯಕ್ಷರು ವಕೀಲರ ಸಂಘ, ನಟರಾಜ ಪುರಸಭೆ ಮುಖ್ಯಾಧಿಕಾರಿ , ಬಸಲಿಂಗಪ್ಪ , ಬಾಲರಾಜ ಸಾಗರ ಮಾನಮಟ್ಟಿ , ದೇವೆಂದ್ರ ನಾಯಕ , ಹನುಮಂತ ರೆಡ್ಡಿ , ನ್ಯಾಯಾಲಯದ ಎಲ್ಲ ಸಿಬ್ಬಂದಿಗಳು, ವಕೀಲರು ಹಾಗೂ ಪುರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಸ್ವಚ್ಛತಾ ಸಿಬ್ಬಂದಿಗಳು, ಭಾಗವಹಿಸಿದ್ದರು.

Leave a Reply

Your email address will not be published. Required fields are marked *