ನದಿಗಳು ಭೂಮಿಯ ಮೇಲಿನ ನೀರಿನ ಪ್ರಾಥಮಿಕ ಮೂಲಗಳಲ್ಲಿ ಒಂದಾಗಿದೆ. ನದಿಗಳು ಕೈಗಾರಿಕೆ, ಕೃಷಿ, ವಿದ್ಯುತ್ ಉತ್ಪಾದನೆ ಸಾರಿಗೆ, ಮೀನುಗಾರಿಕೆಂತಹ ಅನೇಕ ಅಗತ್ಯತೆಗಳಿಗೆ ಮೂಲವಾಗಿದೆ. ಮಾನವರಿಗೆ ಕುಡಿಯಲು ನದಿಗಳು ನೀರನ್ನು ಒದಗಿಸುತ್ತವೆ. ಇಂತಹ
ನದಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನವದೆಹಲಿ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ ಸಂಚಾಲಕ ಲೋಕೇಶ ಹೇಳಿದರು.
ನಗರದ ಎಲ್.ಬಿ.ಕೆ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಲ್ಲಿ ನದಿಯ ಸ್ವಚ್ಛತೆಯ ಕುರಿತು ಜಾಗೃತಿಯನ್ನು ಮೂಡಿಸಲು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನವದೆಹಲಿ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ, ಕರ್ನಾಟಕ ಪರ್ಯಾವರಣ ಟ್ರಸ್ಟ್ ಶಿವಮೊಗ್ಗ ಸಹಯೋಗದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ, ಮೂರನೇ ಹಂತದ ಜಲಜಾಗೃತಿ, ಜನಜಾಗೃತಿ, ಪಾದಯಾತ್ರೆಯಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ರಾಷ್ಟ್ರಮಟ್ಟದ ಸಂಸ್ಥೆ, ಪ್ರಕೃತಿ ಕೇಂದ್ರಿತವಾದ ವಿಕಾಸ ಮಾಡುವ ತತ್ವದ ಮೇಲೆ ಕಾರ್ಯ ನಿರ್ವಹಿಸುವ ಬೃಹತ್ ಸಂಸ್ಥೆಯಾಗಿದೆ.
ಈ ಸಂಸ್ಥೆ ಚೇರ್ಮನ್ ಗೋವಿಂದ ಆಚಾರ್ಯ, ಸಂಯೋಜಕರು ಮಾಧವನ್ ವೀರಾಪುರ, ಕರ್ನಾಟಕದ ಸಂಯೋಜಕರು ಬಾಲಕೃಷ್ಣ, ನಿರ್ಮಲ ತುಂಗಭದ್ರಾ ಅಭಿಯಾನದ ರಾಜ್ಯದ ಸಂಚಾಲಕರು ದೇಹತ್ ಪಟೇಲ್ ಅವರ ಮಗ ಮಹಿಮಾ ಪಟೇಲ್, ಮೂರು ನದಿಗಳ ಸ್ವಚ್ಛತೆ ಕಡೆ ರಾಷ್ಟ್ರಗಳ ಸಂಸ್ಥೆ ಅಡಿಯಲ್ಲಿ ನಾವು ಇವತ್ತು ಈ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದ ಎರಡು ನದಿಗಳು ಕಾವೇರಿ ಮತ್ತು ತುಂಗಭದ್ರಾ, ಕಾವೇರಿ ನದಿ ಬಗ್ಗೆ ಈಗಾಗಲೇ ಸದ್ಗುರುಗಳು ಸ್ವಚ್ಛತೆ ಬಗ್ಗೆ ಕೆಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಬಹಳ ಪ್ರಮುಖವಾದದ್ದು ತುಂಬಾ ಉದ್ದವಾಗಿ ಹರಿಯುವ ತುಂಗಭದ್ರಾ ನದಿಯ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಪಾದಯಾತ್ರೆ ಮಾಡುತ್ತಿದ್ದೇವೆ.
ಈಗಾಗಲೇ ನಾವು ಹಲವು ಮಾರ್ಗದ ಉದ್ದಕ್ಕೂ ನಡೆಸುತ್ತಿದ್ದೇವೆ. ಅನೇಕ ಶಾಲಾ ಕಾಲೇಜಿನ ಮಕ್ಕಳು ಭಾಗವಹಿಸಿದ್ದಾರೆ. ಗ್ರಾ.ಪಂ.ಸದಸ್ಯರು ಅನೇಕ ಪರಿಸರ ಪ್ರೇಮಿಗಳು ಭಾಗವಹಿಸಿದ್ದಾರೆ. ಸೌರವ್ಯೂಹದಲ್ಲಿ ಜೀವಿಗಳನ್ನು ಹೊಂದಿರುವ ಒಂದು ಗ್ರಹ ಭೂಮಿ. ಭೂಮಿಯಲ್ಲಿ ಬದುಕುವಂತಹ ಜೀವರಾಶಿಗಳಿಗೆ ಪಂಚಭೂತಗಳಲ್ಲಿ ಒಂದಾದ ನೀರು ಅತ್ಯವಶ್ಯಕ, ಭೂಮಿಯಲ್ಲಿ 73 ರಷ್ಟು ನೀರು, 27 ಭಾಗದಷ್ಟು ಭೂಭಾಗ ಇದೆ. ನಾವು ಭೂಮಿಯನ್ನು ಖಂಡಗಳಾಗಿ ವಿಭಾಗ ಮಾಡಿದ್ದೇವೆ. ಅದರಲ್ಲಿ ಭಾರತ ವಿಶಿಷ್ಟವಾದ ಸ್ಥಾನವನ್ನು ಗಳಿಸಿಕೊಂಡಿದ್ದೇವೆ.
ನೀರು ನಮ್ಮ ಉಪಯೋಗಕ್ಕೆ 97 ರಷ್ಟು ಬರುವುದಿಲ್ಲ 2 ರಷ್ಟು ಭಾಗ ಹಿಮಾಲಯದಲ್ಲಿ ಹೆಪ್ಪುಗಟ್ಟಿದೆ. ಇನ್ನು ಉಳಿದ 1 ರಷ್ಟು ಭಾಗ ಮಾತ್ರ ಉಪಯೋಗಕ್ಕೆ ಬಳಸುತ್ತಿದ್ದೇವೆ. ಇಂತಹ 1 ರಷ್ಟು ನೀರು ಮಾಲಿನ್ಯಕ್ಕೆ ಒಳಗಾಗಿದೆ. ನೀರಿನ ಬಳಕೆ ಮತ್ತು ಸಮರ್ಪಕದ ಬಗ್ಗೆ ನಾವೆಲ್ಲರೂ ಯೋಚಿಸುವ ಸ್ಥಿತಿಯಲ್ಲಿದ್ದೇವೆ. ನದಿಯ ನೀರನ್ನು ನಾವು ಕೈಗಾರಿಕೆಗಳ ಮೂಲಕ ರಾಸಾಯನಿಕ ವಸ್ತುಗಳಿಂದ ಅಶುದ್ಧಗೊಳಿಸುತ್ತಿದ್ದೇವೆ. ಇದೇ ನದಿಯ ನೀರು ಕೃಷಿಗೂ ಬಳಕೆಯಾಗುತ್ತದೆ. ಆಹಾರದ ಮೂಲಕ ನಮ್ಮೊಳಗೆ ಸೇರಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ ಎನ್ನುವ ಗಂಭೀರ ಸಂಗತಿಯನ್ನು ಮರೆಯುತ್ತಿದ್ದೇವೆ.
ನಾವು ನದಿಯನ್ನು ಸ್ವಚ್ಚ ಮಾಡದೇನೆ, ತನ್ನಂತ ತಾನೆ ನದಿ ಸ್ವಚ್ಛ ಹಾಗುವುದಿಲ್ಲ. ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾಗ್, ಇನ್ನಿತರೆ ವಸ್ತುಗಳನ್ನು ಬಳಸುವುದು ಕಡಿಮೆ ಮಾಡಬೇಕು. ಪ್ರತಿ ನಗರ ಊರುಗಳಲ್ಲಿ ಇವತ್ತು ಆಸ್ಪತ್ರೆಗಳು ಹೆಚ್ಚಾಗಿವೆ ಆದರೆ ನೀರು ಶುದ್ಧೀಕರಣ ಘಟಕಗಳು ಇಲ್ಲ. ನೀರಿನ ಶುದ್ದೀಕರಣ ಘಟಕಗಳನ್ನು ಸ್ಥಾಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಎಲ್.ಬಿ.ಕೆ ಮತ್ತು ನೊಬಲ್ ಕಾಲೇಜಿಗೆ ಆಗಮಿಸಿ ತುಂಗಾಭದ್ರಾ ನದಿಯ ಸ್ಥಿತಿಗತಿಯ ಬಗ್ಗೆ ಜಾಗೃತಿ ಮೂಡಿಸುವ ಸಂಚಾಲಕರಿಗೆ ಸನ್ಮಾನಿಸಲಾಯಿತು
ಪರಶುರಾಮ ಮಲ್ಲಾಪುರ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಈ ಅಭಿಯಾನಕ್ಕೆ ಕಳಿಸುತ್ತೇವೆಂದು ಎಲ್ಲರೂ ಸೇರಿ ತುಂಗಭದ್ರೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕಾರ್ಯಶೀಲರಾಗೋಣ ಎಂದರು. ಪ್ರಾಸ್ತಾವಿಕವಾಗಿ ಕಾಲೇಜಿನ ಕಾರ್ಯದರ್ಶಿ ಡಾ.ಅರುಣಕುಮಾರ ಬೇರ್ಗಿ ಮಾತನಾಡಿದರು. ಹೊನ್ನಪ್ಪ ಬೆಳಗುರ್ಕಿ, ಎನ್.ಎಸ್.ಎಸ್ ಕಾರ್ಯಕ್ರಮದ ಅಧಿಕಾರಿಗಳು ನಿರೂಪಿಸಿದರು.
ಈ ವೇಳೆ: ನೊಬಲ್ ಕಾಲೇಜಿನ ಉಪಾಧ್ಯಕ್ಷ ಶಂಕ್ರಪ್ಪ ಪತ್ತಾರ್, ಎಲ್.ಬಿಕೆ ಕಾಲೇಜಿನ ಪ್ರಿನ್ಸಿಪಾಲ್ ಶಿವಕುಮಾರ ಬಿಂಗಿ, ನೊಬಲ್ ಕಾಲೇಜ ಪ್ರಿನ್ಸಿಪಾಲ್ ಐಶ್ವರ್ಯ ದಳವಾಯಿ, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

