ಲಿಂಗಸುಗೂರು : ಪಾರಂಪರಿಕ ವೈದ್ಯ ಪದ್ಧತಿಯು ಭಾರತೀಯ ವೈದ್ಯ ಪರಂಪರೆಯ ಮೂಲ ಪದ್ಧತಿಯಾಗಿದ್ದು,ನಮ್ಮ ನಾಟಿ ವೈದ್ಯ ಪದ್ದತಿಯ ಪರವಾಗಿ ನೀವು ಅಧಿವೇಶನದಲ್ಲಿ ಧ್ವನಿ ಎತ್ತಿ ಮಾತನಾಡಿ ಎಂದು ಶಾಸಕರಾದ ಮಾನಪ್ಪ ವಜ್ಜಲ್ ಅವರಿಗೆ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ತಾಲೂಕ ಘಟಕದ ವತಿಯಿಂದ ಮನವಿ ಪತ್ರದ ಮೂಲಕ ಒತ್ತಾಯಿಸಿದರು.
ಈ ಪದ್ಧತಿ ಪ್ರಾಚೀನ ಕಾಲದಿಂದಲು ದೇಶದಲ್ಲಿ ಪಾರಂಪರಿಕ ವೈದ್ಯ ಪದ್ಧತಿ ಇದೆ.ನಮ್ಮ ಪೂರ್ವಜರು ನಾಟಿ ವೈದ್ಯ ಪದ್ದತಿಯ ಮೂಲಕ ಎಷ್ಟೋ ರೋಗಗಳನ್ನು ಗುಣಪಡಿಸಿದ ಉದಾಹರಣೆಗಳು ಇವೆ.ಕೂರೋಣ ಸಂದರ್ಭದಲ್ಲಿ ಕೂಡಾ ನಾವು ಗಿಡಮೂಲಿಕೆಗಳ ಮೊರೆ ಹೋಗಿದ್ದೇವೆ ಆದ್ದರಿಂದ ನಾನು ಬೆಳಗಾವಿಯಲ್ಲಿ ನೆಡೆಯುವ ಚಳಿಗಾಲದ ಅಧಿವೇಶನದಲ್ಲಿ ನಿಮ್ಮ ಪರವಾಗಿ ಧ್ವನಿ ಎತ್ತುತ್ತೆನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷ ಆನಂದ್ ಹೇರೂರು, ರಾಜ್ಯ ಕಾರ್ಯದರ್ಶಿ ಕುಮಾರಸ್ವಾಮಿ ಕಸಬಾಲಿಂಗಸ್ಗೂರು,ತಾಲೂಕು ಅಧ್ಯಕ್ಷ ಪರಮನಗೌಡ, ಕಾರ್ಯದರ್ಶಿ ಸಹದೇವಪ್ಪ, ರಮೇಶ್ ಎಂ ಮಟ್ಟೂರ, ಮೌನೇಶ್ ಉಪ್ಪೇರಿ,ಹನುಮಂತ್ ಮಟ್ಟೂರು, ದೇವೇಂದ್ರಪ್ಪ ಬಡಿಗೇರ್, ಮೌನೇಶ್ ಬಡಿಗೇರ್, ಸುರೇಶ್ ಮದುಗಲ್, ವಿರೂಪಾಕ್ಷಪ್ಪ, ಹನುಮಂತ್ ರಾಯ ಸೇರಿ ಅನೇಕರು ಇದ್ದರು.

 

Leave a Reply

Your email address will not be published. Required fields are marked *