ಮಾನ್ವಿ : ತಾಲ್ಲೂಕಿನ ಕುರ್ಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಕಾರ್ಯಾಲಯದಲ್ಲಿ ಶ್ರೀ ಮನೋಜ್ ಕುಮಾರ ಚಿಕ್ಕಗೌಡರ ಇವರ ಅಧ್ಯಕ್ಷತೆಯಲ್ಲಿ ಶ್ರೀಮಾನ್ ವಿಶ್ವಾನಾಥ ಪಾಟೀಲ್ ಅಧ್ಯಕ್ಷರು, ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ರಾಯಚೂರು ಮತ್ತು ಶ್ರೀ ಸಚಿನ್, ಜಿಲ್ಲಾ ವ್ಯವಸ್ಥಾಪಕರು, ಇಫ್ಕೊ ನವದೆಹಲಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭೆಯ ಉದ್ದೇಶಿಸಿ ಸಂಘದ ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ ಮಾತನಾಡಿ ನಮ್ಮ ಸಂಘದಲ್ಲಿ 8 ಜನ ರೈತ ಸದಸ್ಯರು ಮೃತ ಹೊಂದಿದ್ದು, ಅವರ ಸಾಲ ರೂ. 3.40 ಲಕ್ಷಗಳು ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ರಾಯಚೂರು ಇವರು ಕೊಡುವ ಮರಣೋತ್ತರ ಪರಿಹಾರ ನಿಧಿ ಅಡಿಯಲ್ಲಿ ಲಾಭಪಡೆದಿದ್ದಾರೆ. ಸದರಿ ಪರಿಹಾರ ಪಡೆದ ನಮ್ಮ ಸಂಘದ ರೈತ ಸದಸ್ಯರ ಪರವಾಗಿ ನಾವುಗಳು ಶ್ರೀ ವಿಶ್ವಾನಾಥ ಪಾಟೀಲ್ ಅಧ್ಯಕ್ಷರು ಆ‌ರ್.ಕೆ.ಡಿ.ಡಿ.ಸಿ ಬ್ಯಾಂಕ್ ಇವರನ್ನು ಸನ್ಮಾನಿಸಿದರು.ಅದರಂತೆ ನಮ್ಮ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು 2.21 ಕೋಟಿ ಮೊತ್ತದ ಗೊಬ್ಬರ ಮಾರಾಟ ಮಾಡಿದ್ದು, ಈ ಪೈಕಿ 21 ಲಕ್ಷ ರೂ. ಗಳ ದ್ರವ ರೂಪದ ಗೊಬ್ಬರ ಮಾರಾಟ ಮಾಡಿದ್ದರಿಂದ ಜಿಲ್ಲಾ ವ್ಯವಸ್ಥಾಪಕರು ಇಫ್ಕೊ ನವದೆಹಲಿ ಇವರನ್ನು ಸನ್ಮಾನಿಸಿದರು.
ನಂತರದಲ್ಲಿ ಮಾತನಾಡಿದ ಅವರು ಆರ್.ಕೆ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರು, ನಮ್ಮ ಬ್ಯಾಂಕ್ ರೈತರ ಪರವಾಗಿದ್ದು, ರೈತರ ಏಳಿಗೆಗಾಗಿ ಶ್ರಮಿಸಲಾಗುತ್ತಿದೆ. ಇತ್ತಿಚೀನ ದಿನಗಳಲ್ಲಿ ಸಾಲ ಪಡೆದ ರೈತರು ತಮ್ಮ ಆರ್ಥಿಕ ದೌರ್ಬಲ್ಯದಿಂದ ಸರಿಯಾದ ಸಮಯಕ್ಕೆ ಸಾಲ ತೀರಿಸಲು ಪರದಾಡುತ್ತಿದ್ದಾರೆ. ಕುಟುಂಬ ನಿರ್ವಹಣೆ ಮಾಡುವ ರೈತ ಆಕಸ್ಮಿಕ ಮರಣ ಹೊಂದಿದರೆ, ಅವರ ಕುಟುಂಬ ಆರ್ಥಿಕವಾಗಿ ದುರ್ಬಲಗೊಳ್ಳುವುದನ್ನು ಮನಗಂಡು ಈ ಯೋಜನೆಯಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆಯು ರೈತ ಕುಟುಂಬಕ್ಕೆ ಆರ್ಥಿಕವಾಗಿ ಸಾಂತ್ವಾನ ನೀಡಿದಂತಾಗುತ್ತದೆ ಎಂದು ತಿಳಿಸಿದರು, ಅದರಂತೆಯೆ ಕುರ್ಡಿ ಪ್ರಾಥಮಿಕ ಕೃಷಿ ಸಂಘವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ಮಂಡಳಿ ಮತ್ತು ಸಿಬ್ಬಂಧಿಗಳ ಕಾರ್ಯವನ್ನು ಶ್ಲಾಘಿಸಿದರು.

ಜಿಲ್ಲಾ ವ್ಯವಸ್ಥಾಪಕರಾದ ಶ್ರೀ ಸಚಿನ್ ಇಫ್ಕೋ ನವದೆಹಲಿ ಇವರು ಮಾತನಾಡಿ ಕೇಂದ್ರ ಸರ್ಕಾರವು ಯೂರಿಯಾ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ನಮ್ಮ ರೈತರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಗೊಬ್ಬರವನ್ನು ಬಳಸುತ್ತಿದ್ದಾರೆ. ಯೂರಿಯಾ ಗೊಬ್ಬರದ ಬಳಕೆಯನ್ನು ಮಿತಿಯಾಗಿಸಲು ನ್ಯಾನೋ ಯೂರಿಯಾ, ನ್ಯಾನೋ ಡಿ.ಎ.ಪಿ ದ್ರವ ರೂಪದ ಗೊಬ್ಬರಗಳನ್ನು ಕೇಂದ್ರ ಸರ್ಕಾರವು ಉತ್ತೇಜಿಸುತ್ತಿದೆ. ಹೀಗಾಗಿ ಕುರ್ಡಿ ಸಂಘವು ಸದರಿ ಸಾಲಿನಲ್ಲಿ ಒಟ್ಟು 21.00 ಲಕ್ಷ ರೂ.ಗಳ ದ್ರವ ರೂಪದ ಗೊಬ್ಬರ ಮಾರಾಟ ಮಾಡಿದ್ದು, ಜಿಲ್ಲೆಯಲ್ಲಿ ಮಾದರಿಯಾಗಿದೆ ಎಂದು ತಮ್ಮ ಅಭಿಪ್ರಾಯ ಪಟ್ಟರು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಶ್ರೀ ಭೀಮಯ್ಯ ಇವರು ಮಾತನಾಡುತ್ತಾ, ರಾ.ಜಿ.ಕೆ.ಸ.ಬ್ಯಾಂಕ್ ಅಧ್ಯಕ್ಷರು ಅನುಷ್ಟಾನಗೊಳಿಸಿದ ಮರಣೋತ್ತರ ಪರಿಹಾರ ನಿಧಿ ಯೋಜನೆಯು ದುರ್ಬಲ ವರ್ಗದ ರೈತರಿಗೆ ಆರ್ಥಿಕ ಬಲ ನೀಡಿದಂತಾಗುತ್ತದೆ. ಇದು ರಾಜ್ಯದಲ್ಲಿ ರೈತರಿಗೆ ಮಾದರಿ ಯೋಜನೆ ಎಂದು ಅಭಿಪ್ರಾಯ ಪಟ್ಟರು. ಅದರಂತೆ ಮಾನ್ಯ ಅಧ್ಯಕ್ಷರು ಇವರ ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಸಾಪ್ಟವೇರ್ ಯೋಜನೆ ಅಡಿಯಲ್ಲಿ ನಮ್ಮ ಜಿಲ್ಲೆಯು ರಾಜ್ಯದಲ್ಲಿ 2 ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಅದರಂತೆಯ ಮಾನ್ಯ ಅಧ್ಯಕ್ಷರು ಇವರ ಮಾರ್ಗದರ್ಶನದಲ್ಲಿ ಯುವ ನಿರ್ದೇಶಕರುಗಳಿಗೆ, ಸಿಬ್ಬಂಧಿಗಳಿಗೆ ತರಬೇತಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡು ಉತ್ತೇಜಿಸುವರು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ, ಶ್ರೀ ಪ್ರವೀಣ ಕುಮಾರ ಮಾತನಾಡಿ ಆ‌ರ್.ಕೆ.ಡಿ.ಸಿ.ಸಿ ಬ್ಯಾಂಕ್ ನೀಡುವ ಬೆಳೆ ಸಾಲ ಇನ್ನು ಹೆಚ್ಚಿಗೆ ನೀಡಬೇಕೆಂದು ಕೋರಿಕೊಂಡರು.

ಸಭೆಯಲ್ಲಿ ಮುಖಂಡರಾದ ಶ್ರೀ ಜಬ್ಬರಸಾಬ ಮಾತನಾಡಿ ನಮ್ಮ ಗ್ರಾಮದಲ್ಲಿ ಜಾತಿ, ಧರ್ಮ ಬದಿಗಿಟ್ಟು ಸೌಹಾರ್ದಯುತವಾಗಿ ಗ್ರಾಮದ ಏಳಿಗೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ಅದರಂತೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ರಮೇಶ ಇವರು ಮಾತನಾಡುತ್ತಾ ಒಂದು ಗ್ರಾಮವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರೆಯಬೇಕಾದರೆ ಗ್ರಾಮದಲ್ಲಿ ಗ್ರಾಮ ಪಂಚಾಯತ, ಸಹಕಾರ ಸಂಘ ಮತ್ತು ಶಾಲೆಗಳ ಮುಖ್ಯ ಪಾತ್ರ ವಹಿಸುತ್ತವೆ. ಈ ಮೂರು ಸಂಸ್ಥೆಗಳು ಗ್ರಾಮಕ್ಕೆ ಅತ್ಯಂತ ಹೆಚ್ಚಿನ ಕೊಡುಗೆಗಳು ನೀಡುತ್ತವೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಮನೋಜ್ ಕುಮಾರ ಚಿಕ್ಕೆಗೌಡರ್, ಉಪಾಧ್ಯಕ್ಷರಾದ ಶ್ರೀ ಯಲ್ಲಪ್ಪ ಗಟ್ಟು ಉಪಾಧ್ಯಕ್ಷರು, ನಿರ್ದೇಶಕರಾದ ಶ್ರೀ ಹಾಜೀ ಖಾಜಾರಹಮತಖಾನ್, ಶ್ರೀ ಬಸವರಾಜ ಗಟ್ಟು, ಶ್ರೀ ಅಬ್ದುಲ್ ರಜಾಕ್, ಶ್ರೀ ನಾಗರಾಜ ಹೂಗಾರ, ಶ್ರೀ ಭೀಮಯ್ಯ ಕೊಂಬಿನ್, ಶ್ರೀ ಸಣ್ಣ ಕರೆಪ್ಪ ಹೊಳೆಮ್ಮನವರ, ಶ್ರೀ ಗೋಪಾಲ ಯಾದವ, ಶ್ರೀಮತಿ ಸಾಜೀದಾಬೇಗಂ, ಶ್ರೀಮತಿ ಈರಮ್ಮ ತಿಕ್ಕಯ್ಯನಾಯಕ, ಶ್ರೀಮತಿ ಈರಮ್ಮ ಪೋಲಪ್ಪನವರ, ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ರಾಯನಗೌಡ, ಶ್ರೀ ಎಲ್. ಬದರಿನಾರಾಯಣ, ಶ್ರೀ ನಾಗೇಶ ಬಜಾರ, ಮಾಜಿ ಉಪಾಧ್ಯಕ್ಷರಾದ ಶ್ರೀ ಹನೀಫ್‌ ಸಾಬ, ಗ್ರಾಮದ ಹಿರಿಯ ಮುಖಂಡರಾದ ಶ್ರೀ ಸೂಗಪ್ಪ ಸಾಹುಕಾರ, ಶ್ರೀ ವೆಂಕನಗೌಡ ಗೋರ್ಕಲ್, ಶ್ರೀ ಶಿವರಾಜಪ್ಪ ಪಾಟೀಲ್ ಸುಂಕೇಶ್ವರ ಮತ್ತು ಕುರ್ಡಿ, ಗೋರ್ಕಲ್, ಆರೋಲಿ, ಬೈಲ್ ಮರ್ಚೆಡ್, ಸುಂಕೇಶ್ವರ ಗ್ರಾಮದ ಎಲ್ಲಾ ರೈತ ಬಾಂಧವರಿಗೆ, ಅಂತಿಮವಾಗಿ ಸಭೆಯ ವಂದನಾರ್ಪಣೆಯನ್ನು ಸಂಘದ ಮುಖ್ಯಕಾರ್ಯನಿರ್ವಾಹಕರು ಶ್ರೀ ಇಕ್ಬಾಲ್ ಇವರು ವಂದಿಸಿದರು.

Leave a Reply

Your email address will not be published. Required fields are marked *