2025-26ನೇ ಸಾಲಿನಲ್ಲಿ ರಾಸಾಯನಿಕ ಗೊಬ್ಬರದ ಬೆಲೆಗಿಂತ ಈಗ ಪ್ರತಿ ಕ್ವಿಂಟಾಲ್ ಗೆ 250 ರಿಂದ 300 ರೂಪಾಯಿವರೆಗೆ ಹೆಚ್ಚಿಗೆಯಾಗಿದ್ದು, ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ. ಜೊತೆಗೆ ರೈತರು ಬೆಳೆದಂತಹ ಭತ್ತ, ತೊಗರಿ, ಜೋಳ, ಹೆಸರು, ಮೆಕ್ಕೆಜೋಳ, ಮೆಣಸಿನ ಕಾಯಿ, ಹತ್ತಿ, ಬೆಳೆಗೆ ಬೆಂಬಲ ಬೆಲೆಗಾಗಿ ಆಯೋಗ ರಚನೆ ಮಾಡಬೇಕೆಂದು ಜೈ ಜವಾನ್ ಜೈ ಕಿಸಾನ್ ಜನಸೇವಾ ಸಂಘದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ವೀರಭದ್ರಯ್ಯ ಎಸ್ ಸರ್ಕಾರಕ್ಕೆ ಒತ್ತಾಯ ಮಾಡಿದರು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮಾಡಿ ಪ್ರತಿಭಟಿಸಿ, ತಾಲೂಕು ತಹಶೀಲ್ದಾರ್ ಕಚೇರಿಯವರಿಗೆ ಆಗಮಿಸಿ ಶಿರೇಸ್ತದಾರ ಅಂಬಾದಾಸ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿ ಮಾತನಾಡಿದ ಅವರು,
ಕಳಪೆ ಬೀಜ, ಕಳಪೆ ರಸಗೊಬ್ಬರದ ಮಾರಾಟವನ್ನು ತಡೆಯಬೇಕು. ಮಳೆ, ಗಾಳಿ ಬಿರುಗಾಳಿಗೆ ಹಾನಿಯಾದ ರೈತರಿಗೆ ಎಕರೆಗೆ 25 ಸಾವಿರ ಪರಿಹಾರ ಕೊಡಬೇಕು.
ತುಂಗಭದ್ರಾ ಡ್ಯಾಂ ನೀರಾವರಿ ಸಲಹಾ ಸಮಿತಿ ಸಭೆ ಮುನಿರಬಾದ್ ನಲ್ಲಿ ಮಾಡಬೇಕು. ನೀರು ಹರಿಸುವ ಕಾಲುವೆಗಳಿಗೆ ಚರಂಡಿ ನೀರು ಬಿಡದಂತೆ ಕಟ್ಟೆಚ್ಚರ ವಹಿಸಬೇಕು ಎಂದರು
ನಂತರ ಕ.ಕ.ರೈತ ಬಣದ ವರಿಷ್ಠರು ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷ ಹನುಮಂತಪ್ಪ ಉಳೇನೂರು, ಹಾಗೂ ಕ.ಕ.ಅಧ್ಯಕ್ಷರಾದ ಮಲ್ಲಿಕಾರ್ಜುನ ರೆಡ್ಡಿ ಸಾಸಲಮರಿ, ಮಹಿಳಾ ಜಿಲ್ಲಾಧ್ಯಕ್ಷೆ ಸಿದ್ದೇಶ್ವರಿ ಸೇರಿದಂತೆ ಅನೇಕರು ಮಾತನಾಡಿ, ನವಲಿ ಸಮಾನಾಂತರ ಜಲಾಶಯವನ್ನು ಒಂದು ವರ್ಷದಲ್ಲಿ ಜಾರಿಗೆಗೊಳಿಸತಕ್ಕದ್ದು, ಸಣ್ಣ ಸಣ್ಣ ರೈತರಿಗೆ 100 ರಷ್ಟು ಸಬ್ಸಿಡಿ ಮೂಲಕ ಬೋರವೆಲ್ ಹಾಗೂ ಸೋಲಾರ್ ವ್ಯವಸ್ಥೆ ಮಾಡಬೇಕು. ಕೊಪ್ಪಳ, ವಿಜಯನಗರ, ಬಳ್ಳಾರಿ, ಸಂಡೂರು ನಲ್ಲಿ ಫ್ಯಾಕ್ಟರಿಯ ದುಷ್ಪರಿಣಾಮ ತನಿಖೆ ನಡೆಸಿ ಶೀಘ್ರದಲ್ಲಿ ವರದಿ ನೀಡಬೇಕು.
ರೈತರು ಹೊಲದಲ್ಲಿ ವ್ಯವಸಾಯ ಮಾಡುವ ವೇಳೆ ಹಾವು ಸೇರಿದಂತೆ ವಿಷಜಂತುಗಳು ಕಡಿದಲ್ಲಿ ರೈತರಿಗೆ ತುರ್ತು ಎಮರ್ಜೆನ್ಸಿ ಕಿಟ್ ವಿತರಣೆ ಮಾಡಬೇಕು. ರೈತರಿಗೆ ರಸಗೊಬ್ಬರ ವಿತರಿಸಲು ಐಡೆಂಟಿಟಿ ಕಾರ್ಡ್ ಕೊಡಬೇಕು. ಹೊಲ-ಗದ್ದೆ ಇಲ್ಲದ ರೈತರಿಗೆ ಗುತ್ತಿಗೆ ಮಾಡುವ ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ವಿತರಿಸಬೇಕು. ಕ್ಯಾನ್ಸರ್ ಗೆ ತುತ್ತಾಗಿ ಸಾವಿಗೀಡಾಗುವ ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ಹಣದ ಸಹಾಯ ಮಾಡಬೇಕು. ಸಣ್ಣ ಅತಿ ಸಣ್ಣ ರೈತರ ಸಾಲದಲ್ಲಿ ಶೇ.50 ರಷ್ಟು ಸಬ್ಸಿಡಿ ಜೊತೆಗೆ ಉಳುಮೆಯ ಸಲಕರಣೆಗಳಿಗೆ ಶೇ.80 ರಷ್ಟು ಸಬ್ಸಿಡಿ ನೀಡಬೇಕು. ಸಣ್ಣ ಹಾಗೂ ಅತಿ ಸಣ್ಣ ರೈತರ ಸಾಲಮನ್ನಾ ಮಾಡಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಜೀವನೋಪಾಯಕ್ಕೆ ಧನ ಸಹಾಯ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ: ಕ.ಕ.ಗೌರವ ಅಧ್ಯಕ್ಷ ವೆಂಕಯ್ಯ ಶ್ರೇಷ್ಠಿ, ಕ.ಕ.ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಸಾಸಲಮರಿ, ರಾಜ್ಯ ಕಾರ್ಯಾಧ್ಯಕ್ಷ ರುದ್ರೇಶಗೌಡ ಮಾಜಿ ಸೈನಿಕರು,
ಜಿಲ್ಲಾ ಗೌರವ ಅಧ್ಯಕ್ಷ ಗೌಡಪ್ಪಗೌಡ ಯಾಪಲಪರ್ವಿ,
ತಾಲೂಕು ಅಧ್ಯಕ್ಷ ಹನುಮಂತ ರೈತನಗರ ಕ್ಯಾಂಪ್, ಮಹಿಳಾ ತಾಲೂಕು ಅಧ್ಯಕ್ಷೆ ವಿಶಾಲಾಕ್ಷಿ ಎಚ್.ಎಮ್, ರೈತ ಮುಖಂಡರಾದ ವೆಂಕನಗೌಡ್ರು, ಹನುಮಂತಪ್ಪ ನಾಯಕ, ಸುರೇಶ, ನಾರಾಯಣ, ಪದಾಧಿಕಾರಿಗಳಾದ ಸಿದ್ದನಗೌಡ ಕೊಕ್ಕರಗೋಳ, ಅಮರೇಗೌಡ ಬಾದರ್ಲಿ, ಮಲ್ಲಿಕಾರ್ಜುನ ಪಲ್ಲೇದ್, ಸೇರಿದಂತೆ ಅನೇಕರಿದ್ದರು.

