ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂ.10ಕ್ಕೆ, ಭಾರತದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ ಎಂಬ ದಾಖಲೆ ಬರೆದಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ನಗರ ಮಂಡಲದ ಅಧ್ಯಕ್ಷ ಸಿದ್ರಾಮೇಶ ಮನ್ನಾಪೂರು ಹೇಳಿದರು.

 

ನಗರದ ಆದಿಶೇಷನ ದೇವಸ್ಥಾನದಲ್ಲಿ ಬಿಜೆಪಿ ನಗರ ಮಂಡಲದ ವತಿಯಿಂದ ವಿಶೇಷ ಪೂಜೆ ಮತ್ತು ಮಂಗಳಾರತಿ ಮಾಡುವುದರ ಮೂಲಕ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿ, ನಂತರ ತಮ್ಮ ಬಿಜೆಪಿ ಕಚೇರಿಯಲ್ಲಿ ಮಾತನಾಡಿದರು.

ಪ್ರದಾನ ಮಂತ್ರಿ ನರೇಂದ್ರ ಮೋದಿಯವರು 26 ಮೇ 2014ರಂದು ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಇಲ್ಲಿತನಕ 4,399 ದಿನಗಳನ್ನು ಪೂರೈಸಿ ಜವರಲಾಲ್ ನೆಹರು ಅವರ 4,398 ದಿನಗಳ ಅವಧಿಯ ದಾಖಲೆಯನ್ನು ಮೀರಿಸಿರುವುದು ನಮಗೆಲ್ಲ ಹೆಮ್ಮೆ ತರುವ ವಿಷಯವಾಗಿದೆ.

 

12 ವರ್ಷಗಳ ಸೇವೆ ಇದು 2014 ರಿಂದ 2026ರ ವರೆಗಿನ ಸತತ ಮೂರು ಅವಧಿಗಳ ಆಡಳಿತ ನಡೆಸಿದ ಅವಧಿಯಲ್ಲಿ ಜನಕಲ್ಯಾಣ ಕೇಂದ್ರಿತ ಯೋಜನೆಗಳು ಇದರ ಅಡಿಯಲ್ಲಿ ಜನಧನ್, ಯೋಜನೆ ಸ್ವಚ್ಛ ಭಾರತ್ ಮಿಷನ್, ಪ್ರಧಾನಮಂತ್ರಿ ಅವಾಸ್ ಯೋಜನೆ, ಜಲಜೀವನ್ ಮಷಿನ್, ಆಯುಷ್ಮಾನ್ ಭಾರತ, ಬಡತನ ನಿವಾರಣೆಗಾಗಿ ಕಳೆದ 12 ವರ್ಷಗಳಿಂದ ಸುಮಾರು 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಅಂತ್ಯೊದಯ ತತ್ವ ಈ ದೇಶದ ಬಡತನ ರೇಖೆಗಿಂತ ಹಿಂದೆ ಇರುವ ಕೊನೆಯ ವ್ಯಕ್ತಿಯ ಅಭಿವೃದ್ಧಿಯ ಫಲ ತಲುಪಿಸುವ ಉದ್ದೇಶವಾಗಿದೆ ಎಂದರು.

 

ಗ್ರಾಮೀಣ ಮಂಡಲದ ಅಧ್ಯಕ್ಷ ಯಂಕೋಬ ರಾಮತ್ನಾಳ್ ಮಾತನಾಡಿ, ಸ್ವಾತಂತ್ರ್ಯ ನಂತರ ಜನಿಸಿದ ಮೊದಲ ಪ್ರಧಾನಿ ರಾಜಕೀಯ ಅಂಶವಿಲ್ಲದೆ ಸಾಧಾರಣ ಹಿನ್ನೆಲೆಯಿಂದ ಬಂದು ದೇಶದ ಅತ್ಯುನ್ನತ ಉದಾಹರಣೆಯಾಗಿದೆ.ಮುಂದಿನ ದಿನಮಾನಗಳಲ್ಲಿ ದೇಶದ  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಹಾಗೂ ಜನರ ಸೇವೆಗಾಗಿ ಇನ್ನೂ ನೂರು ವರ್ಷಗಳ ಕಾಲ ಬಾಳಲಿ ಆ ದೇವರು ಅವರಿಗೆ ಆಯುಷ್ಯ ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡಲೆಂದರು.

 

ಈ ಸಂದರ್ಭದಲ್ಲಿ: ಕೆ.ರಾಜಶೇಖರ, ಮಧ್ವುರಾಜ ಆಚಾರ್ಯ, ನಿರುಪಾದೆಪ್ಪ ಜೋಳದರಾಶಿ, ಸಿರಾಜ ಪಾಷಾ, ಟಿ ಸುಬ್ಬರಾವ್, ಶೈಲಜಮ್ಮ ಷಡಕ್ಷರಪ್ಪ ನಾಗಲಪುರ, ರವಿ ರಾಠೋಡ್, ರವಿ ಉಪ್ಪಾರ,  ಶರಣಬಸವ ದುಮತಿ, ಸೋಮನಾಥ ಪತ್ತಾರ್, ನಾಗರಾಜ ದೇವರಗುಡಿ, ಪ್ರಶಾಂತ ಶೆಟ್ಟಿ, ಫಕೀರಪ್ಪ ಬಾಗೋಡಿ ತಿಡಿಗೋಳ, ಶಿವು ಹಿರೇಮಠ, ರಾಮಕೃಷ್ಣ ಉಪ್ಪಾರ, ಶರಣಪ್ಪ ಬಂಡಿ, ಹಸೇನಪ್ಪ ಸೂಲಂಗಿ, ಬಸವರಾಜ ನಾಯಕ, ಮುದಿಯಪ್ಪ ಕಟ್ಟಿಮನಿ, ಅಂಬರೀಶ ಕಡಬೂರು, ನಾಗರಾಜ ಕಡಬೂರು, ಮೌನೇಶ ಹೊಸಮನೆ, ಕಾಶಿನಾಥ ಹಿರೇಮಠ, ಶ್ರೀನಿವಾಸ್ ಮೇಸ್ತ್ರಿ,  ಯಲ್ಲುಸಾ ಬದಿ, ಆನಂದಯ್ಯ ಕೊಂಡ, ಸಂಗಪ್ಪ ಬೊಮ್ಮನಾಳ, ರಾಮು, ಸಹನಾ ಹಿರೇಮಠ, ಮಮತಾ ಹಿರೇಮಠ, ಶಿವಮ್ಮ ಅಂಬಿಗರ, ರೇಣಮ್ಮ ನಾಯಕ, ಯಮನಮ್ಮ, ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *