ಬಾಲಕ ರೆಹಾನಖಾನಗೆ ಪೊಲೀಸ್ ವರಿಷ್ಠಾಧಿಕಾರಿಯಿಂದ ಸನ್ಮಾನ ತಾಳಿಕೋಟಿ: ಸಮೀಪದ ಕೊಡೆಕಲ್ಲ ಗ್ರಾಮದ ಪೊಲೀಸ್ ಠಾಣೆಯಲ್ಲಿ ಹಿರಿಯ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ಅಯ್ಯೂಬ ಖಾನ್ ಇವರ ಏಳು ವರ್ಷದ ಮಗನಾದ ರೆಹಾನಖಾನ್ ಈತನು ಸೈಡ್ ಸಿಟ್ ಅಪ್ ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಕ್ಕಾಗಿ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಾಲಕ ರೆಹಾನ್ ಖಾನ್ ನನ್ನು ತಮ್ಮ ಕಾರ್ಯಾಲಯಕ್ಕೆ ಆಮಂತ್ರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ನಮ್ಮ ಇಲಾಖೆಯ ಸಿಬ್ಬಂದಿಯ ಮಗನ ಈ ಸಾಧನೆ ನಮ್ಮೆಗೆಲ್ಲರಿಗೂ ಹೆಮ್ಮೆಯೆ ವಿಷಯವಾಗಿದೆ ಅವನು ಜೀವನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ, ಕ್ರೀಡೆಯೊಂದಿಗೆ ಶಿಕ್ಷಣಕ್ಕೂ ಅಷ್ಟೇ ಮಹತ್ವ ನೀಡಬೇಕೆಂದು ನಾನು ಬಾಲಕನ ತಂದೆಗೆ ಹೇಳಲು ಬಯಸುತ್ತೇನೆ ಎಂದರು. ಈ ಸಮಯದಲ್ಲಿ ತರಬೇತುದಾರ ಹಾಗೂ ಇಲಾಖೆಯ ಸಿಬ್ಬಂದಿಗಳು ಬಾಲಕ ರೆಹಾನ್ ಖಾನ್ ತಂದೆಯಾದ ಅಯ್ಯು ಖಾನ್, ಇದ್ದರು.

Leave a Reply

Your email address will not be published. Required fields are marked *