ಶಾಲೆಯ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವಂತಹ ಸ್ತಂಭಗಳಾದರೆ, ಪಾಲಕರು ಶಾಲೆಯ ಅಭಿವೃದ್ಧಿಯ ಆಧಾರ ಸ್ತಂಭಗಳು. ಪಾಲಕರು ಶಾಲೆಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸಹಕರಿಸಿ ಮಕ್ಕಳ ಹೋಮ ವರ್ಕ್, ಪ್ರಗತಿ ಪರಿಶೀಲಿಸುವುದರಿಂದ ಮಕ್ಕಳಲ್ಲಿನ ಗುಣಮಟ್ಟ ಹೆಚ್ಚಿಸಿ ಆ ಶಾಲೆಯ ಅಭಿವೃದ್ಧಿ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಕೇವಲ ೪೦ ಮಕ್ಕಳಿಂದ ಪ್ರಾರಂಭವಾದ ಈ ರಾಜ್ವಿಕಾ ಶಾಲೆಯಲ್ಲಿ ಈಗ ೨೦೦ಕ್ಕಿಂತಲೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಇದರಲ್ಲಿ ಶಿಕ್ಷಕರ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಜಯದೇವ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಡಾ. ರುದ್ರಪ್ಪ ಗುಗ್ಗವಾಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಿನಾಂಕ: ೨೫.೦೧.೨೦೨೬ ರಂದು ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಲ್ಲಿರುವ ವಿದ್ಯಾನಗರದ ರಾಜ್ವಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶಿಕ್ಷಣ ಒಂದೆ ಸಿಕ್ಕರೆ ಸಾಲದು ಅದರ ಜೊತೆ ಇನ್ನು ಅನೇಕ ಅಂಶಗಳನ್ನು ಬಾಲ್ಯದಿಂದಲೇ ರೂಢಿಸಿಕೊಂಡರೇ ಆತ ಯಶಸ್ವಿ ವಿದ್ಯಾರ್ಥಿಯಾಗಲು ಸಾಧ್ಯ. ರಾಜ್ವಿಕ ಶಾಲೆಯಲ್ಲಿ ವರ್ಷದುದ್ದಕ್ಕು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ನಿರಂತರವಾಗಿ ನಡೆಯುತ್ತಿವೆ. ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗೂ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ಮಾತನಾಡಿದರು. ವೇದಿಕೆ ಮೇಲೆ ಶ್ರೀದೇವಿ ಕವಡಿಮಠ, ಶೋಭಾ ಓಕಳಿ, ಸುಹಾಸಿನಿ ಸಿಂಗ್ ಉಪಸ್ಥಿತರಿದ್ದರು.
ರಾಜ್ವಿಕಾ ಶಾಲೆ ಹಂತ ಹಂತವಾಗಿ ಬೆಳೆಯುತ್ತಿದೆ ಮುಂದಿನ ದಿನಗಳಲ್ಲಿ ಸಿ.ಬಿ.ಎಸ್.ಸಿ. ಪ್ರಗತಿ ಹೊಂದುವಂತಹ ಹಂತದಲ್ಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ಶಾಲೆಯ ಅಧ್ಯಕ್ಷ ಸಂಜಯ್ ಸಿಂಗ್ ರವರು ಮಾತನಾಡಿದರು. ಮಕ್ಕಳಿಂದ ನೃತ್ಯ, ಹಾಡು ಮತ್ತು ಸಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಪ್ರಾರಂಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶಿಲ್ಪಾ ಕೋಟೆ ಸ್ವಾಗತಿಸಿದರು. ಸಮನ್ವಿ ಮತತ್ತು ಸುಮಯ್ಯ ಕಾರ್ಯಕ್ರಮ ನಿರೂಪಿಸಿದರು, ರಾಜೇಶ್ವರಿ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಅಭಯ ಸಿಂಗ್, ನಸೀಮಾ, ನಿರ್ಮಲಾ, ದೀಪಿಕಾ ಅನ್ನಪೂರ್ಣ, ಸುವಾಸಿನಿ ಸಿಂಗ್, ಮಕ್ಕಳು ಹಾಗು ಪಾಲಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *