ಬಳಗಾನೂರಿನ ಟ್ಯೂಷನ್ ಗುರುಗಳಾದ ಆಲಂ ಭಾಷಾ ಸರ್ ಹಾಗೂ ಇರ್ಫಾನಾ ಬೇಗಂ ಮ್ಯಾಡಂ ಅವರಿಗೆ 2005–06ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಭಾವಪೂರ್ಣ ಗುರು ವಂದನೆ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಗುರುಗಳಾದ ಎಂ.ಡಿ. ಆಲಂ ಭಾಷಾ ಸರ್ ಹಾಗೂ ಇರ್ಫಾನಾ ಬೇಗಂ ಮ್ಯಾಡಂ ಅವರಿಗೆ ಶಾಲ್, ಹಾರ ಮತ್ತು ಪೇಟಾ ಹಾಕಿ ಗೌರವಪೂರ್ವಕವಾಗಿ ಸನ್ಮಾನಿಸಿದರು.
ಕಾರ್ಯಕ್ರಮದ ವೇಳೆ ಗುರುಗಳು ತಮ್ಮ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಆಗಿನ ವಿದ್ಯಾರ್ಥಿ ಜೀವನ ಮತ್ತು ಇಂದಿನ ಜೀವನದ ಅನುಭವಗಳನ್ನು ಹಂಚಿಕೊಂಡರು. ಅವರ ಮಾತುಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಮೂಡಿಬಂದವು.
ಈ ಗುರು ವಂದನೆ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ
ಇಮ್ರಾನ್, ಸದ್ದಾಂ, ನವೀನ್ ಕುಮಾರ್, ಮರಿಬಸವ, ಅನಿಲ್ ಕುಮಾರ್, ಪ್ರಭಾನಂದ ಶಾಸ್ತ್ರಿ, ರುದ್ರಗೌಡ, ಅಮರೇಶ್ ಕೊಪ್ಪರದ, ರಾಘವೇಂದ್ರ ಪ್ಯಾಟಿಗೌಡ, ಮೌನೇಶ್ ಕೊಂಡಕುಂದಿ, ಶಂಕರ್ ಕರಡಕಲ್ ಹಾಗೂ ಶಿವಶರಣ ಉಪ್ಪಾರ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಗೌರವ ಹೆಚ್ಚಿಸಿದರು.

Leave a Reply

Your email address will not be published. Required fields are marked *