ಮಸ್ಕಿ ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಜುನಾಥ ಭೋಗವತಿ ತಹಸಿಲ್ದಾರರು ಇವರ ಅಧ್ಯಕ್ಷತೆಯಲ್ಲಿ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ನಂತರ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಪ್ರತಿ ಹೋಬಳಿಗೆ ಒಬ್ಬರಂತೆ ಬಿ ಎಲ್ ಓ ಹಾಗೂ ಇಬ್ಬರು ಬಿ ಎಲ್ ಓ ಮೇಲ್ವಿಚಾರಕರು ರವರಿಗೆ ಸನ್ಮಾನಿಸಿ ಪ್ರಶಂಸನಾ ಪತ್ರ, ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಣೆ ಸಾಂಕೇತಿಕವಾಗಿ ಬಿ ಎಲ್ ಓ ರವರಿಗೆ ಕಿಟ್ ವಿತರಣೆ ಮಾಡಿ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡುತ್ತಾ ಪ್ರತಿಯೊಬ್ಬರು ಚುನಾವಣೆಯಲ್ಲಿ ಮತದಾನ ಮಾಡಬೇಕು ಅದು ನಮ್ಮ ಹಕ್ಕು. ನಮಗೆ ಸಂವಿಧಾನ ಕೊಟ್ಟಿರುವ ಅತ್ಯಂತ ಮಹತ್ವದ ಜವಾಬ್ದಾರಿ ಅದಕ್ಕಾಗಿ ಎಲ್ಲರೂ ಪಾಲನೆ ಮಾಡಬೇಕು ಎಂದು ಹೇಳಿದರು . ಈ ಸಂದರ್ಭದಲ್ಲಿ ಸ್ವೀಪ್ ನೋಡಲ್ ಆಫೀಸರ್ ಹಾಗೂ ತಾಪ೦ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ ಯಾದವ, ನರಸರೆಡ್ಡಿ ಪುರಸಭೆ ಮುಖ್ಯಾಧಿಕಾರಿ , ಸರ್ಕಲ್ ಇನ್ಸ್ಪೆಕ್ಟರ ರವರು, ಡಾ. ಮಹಾ೦ತಗೌಡ ಪಾಟೀಲ್ ಪ್ರಾಂಶುಪಾಲರು, ಹಾಗೂ ವಿವಿಧ ಕಾಲೇಜುಗಳ ಪ್ರಾಚಾರ್ಯರು, ವಿವಿಧ ಇಲಾಖೆಗಳ ಸಿಬ್ಬಂದಿಗಳು, ಅಪಾರ ಸಂಖ್ಯೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

