ಜನವರಿ 26,,, ಕ್ಯಾಲೆಂಡರ್‌ನಲ್ಲೊಂದು ದಿನ ಮಾತ್ರವಲ್ಲ…
ಇದು ಭಾರತದ ಆತ್ಮ ಎಚ್ಚರಗೊಳ್ಳುವ ದಿನ.
1947ರಲ್ಲಿ ನಾವು ಸ್ವಾತಂತ್ರ್ಯ ಪಡೆದರೂ,
1950ರ ಜನವರಿ 26ರಂದು
ನಾವು ನಮ್ಮದೇ ಸಂವಿಧಾನಕ್ಕೆ ಬದ್ಧರಾದ ರಾಷ್ಟ್ರವಾಗಿದ್ದೇವೆ.
ಅಂದು ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ
ರೂಪುಗೊಂಡ ಸಂವಿಧಾನ
ಇಂದು 77 ವರ್ಷಗಳನ್ನು ದಾಟಿ
ಜನತಂತ್ರದ ಮಹಾವೃಕ್ಷವಾಗಿ ಬೆಳೆದಿದೆ.
ಸಂವಿಧಾನ ಕಾಗದದ ಪುಸ್ತಕವಲ್ಲ,ಬದುಕಿನ ಮಾರ್ಗದರ್ಶಿ
ಭಾರತದ ಸಂವಿಧಾನ
ಕೇವಲ ಕಾನೂನುಗಳ ಸಂಕಲನ ಅಲ್ಲ…
ಅದು ಸಮಾನತೆ, ಸ್ವಾತಂತ್ರ್ಯ, ಸಹೋದರತ್ವದ ಘೋಷಣೆ.
ಜಾತಿ–ಧರ್ಮ–ಭಾಷೆ–ಪ್ರಾಂತಗಳನ್ನು ಮೀರಿಸಿ
ಒಬ್ಬ ಭಾರತೀಯನನ್ನು
ಗೌರವದಿಂದ ಬದುಕಲು ಅವಕಾಶ ಕೊಟ್ಟ ಮಹಾಗ್ರಂಥ.
ಗ್ರಾಮದ ಬಡ ಮಗನಿಗೂ
ನಗರದ ಶ್ರೀಮಂತನ ಮಗನಿಗೂ
ಒಂದೇ ಹಕ್ಕು, ಒಂದೇ ಭರವಸೆ.
77 ವರ್ಷಗಳ ಪಯಣ ನೋವು, ನಂಬಿಕೆ ಮತ್ತು ನವಭಾರತ
ಸ್ವಾತಂತ್ರ್ಯ ನಂತರ
ಬಡತನ,ಅನಕ್ಷರತೆ, ಅಸಮಾನತೆ –
ಎಷ್ಟೋ ಸವಾಲುಗಳನ್ನು ಎದುರಿಸಿಯೇ
ಭಾರತ ಮುಂದೆ ನಡೆದು ಬಂದಿದೆ.
ಹೊಲದಲ್ಲಿ ಸುರಿದ ರೈತನ ಬೆವರು,
ಗಡಿಯಲ್ಲಿ ಹರಿದ ಸೈನಿಕನ ರಕ್ತ,
ಕಾರ್ಮಿಕನ ಕೈಯ ಶ್ರಮ,
ಶಿಕ್ಷಕನ ಜ್ಞಾನದ ಬೆಳಕು –
ಇವೆಲ್ಲ ಸೇರಿ
ಇಂದು ಭಾರತವನ್ನು ಕಟ್ಟಿವೆ.
ಅಸಲಿ ಗಣರಾಜ್ಯೋತ್ಸವದ ನಾಯಕರು
ಗಣರಾಜ್ಯೋತ್ಸವ ಎಂದರೆ
ಪಥಸಂಚಲನ ಮಾತ್ರವಲ್ಲ…
ಗಡಿಯಲ್ಲಿ ನಿಲ್ಲುವ ಸೈನಿಕ
ಜೀವ ಉಳಿಸುವ ವೈದ್ಯ
ಭವಿಷ್ಯ ರೂಪಿಸುವ ಶಿಕ್ಷಕ
ಅನ್ನ ನೀಡುವ ರೈತ
ಕಾನೂನು ಕಾಪಾಡುವ ಪೊಲೀಸ್
ಕನಸು ಕಟ್ಟುವ ಯುವಕ
ಇವರೆಲ್ಲರೂ ಈ ಗಣರಾಜ್ಯದ ನಿಜವಾದ ಹೀರೋಗಳು.
ಭವಿಷ್ಯದ ಆಶಾಕಿರಣ
ಇಂದು ಭಾರತದ ಯುವಕರು
ಜ್ಞಾನದಲ್ಲಿ ಮುಂಚೂಣಿ,
ತಂತ್ರಜ್ಞಾನದಲ್ಲಿ ಶಕ್ತಿ,
ನವೀನತೆಯಲ್ಲಿ ವಿಶ್ವಕ್ಕೆ ಮಾದರಿ.
ಆದರೆ ನೆನಪಿರಲಿ…
ಸ್ವಾತಂತ್ರ್ಯ ಉಚಿತವಾಗಿ ಬಂದದ್ದಲ್ಲ.
ಸಂವಿಧಾನವೂ ಸ್ವಯಂ ರಕ್ಷಿಸುವುದಿಲ್ಲ.
ಅದನ್ನು ಕಾಪಾಡಬೇಕಾದ ಜವಾಬ್ದಾರಿ
ನಮ್ಮೆಲ್ಲರ ಮೇಲಿದೆ.
77ನೇ ಗಣರಾಜ್ಯೋತ್ಸವದ ಈ ಪವಿತ್ರ ದಿನದಲ್ಲಿ
ನಾವೆಲ್ಲರೂ ಪ್ರತಿಜ್ಞೆ ಮಾಡೋಣ…
ದೇಶದ ಏಕತೆಯನ್ನು ಕಾಪಾಡೋಣ
ಸಂವಿಧಾನ ಮೌಲ್ಯಗಳನ್ನು ಗೌರವಿಸೋಣ
ಭ್ರಷ್ಟಾಚಾರ, ದ್ವೇಷ, ಅಸಮಾನತೆಗೆ ತಡೆ ನೀಡೋಣ
ಸತ್ಯ, ನ್ಯಾಯ, ಸಮಾನತೆಗೆ ಬೆಂಬಲವಾಗಿ ನಿಲ್ಲೋಣ
ಜೈ ಜವಾನ್… ಜೈ ಕಿಸಾನ್… ಜೈ ಸಂವಿಧಾನ…
ಜೈ ಹಿಂದ್.
ಸ್ಟೋರಿ,ಸುರೇಶ ಬಳಗಾನೂರು.


