ತಾಳಿಕೋಟಿ:ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕ ಆಡಳಿತ ಹಾಗೂ ಭೋವಿ ಸಮಾಜದ ಸಹಯೋಗದಲ್ಲಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಅವರ 853ನೇ ಜಯಂತಿಯನ್ನು ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ತಹಸಿಲ್ದಾರ್ ಡಾ.ವಿನಯಾ ಹೂಗಾರ ಶ್ರೀ ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪ ನಮನ ಸಲ್ಲಿಸಿ ತಾಲೂಕಿನ ಜನತೆಗೆ ಜಯಂತಿಯ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಮಹಾಪುರುಷರ, ಶರಣರ ಹಾಗೂ ದಾರ್ಶನಿಕರ ಕೇವಲ ಜಯಂತಿಗಳನ್ನು ಆಚರಿಸಿದರೆ ಸಾಲದು ಅವರ ಬದುಕಿನ ಆದರ್ಶಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದರು. ಕ್ಷೇತ್ರ ಸಮನ್ವಯಾಧಿಕಾರಿ ಆರ್ ಬಿ ದಮ್ಮೂರ ಮಠ ಮಾತನಾಡಿ ಶಿವಯೋಗಿ ಸಿದ್ದರಾಮೇಶ್ವರ ಅವರು ಕೆಟ್ಟುಹೋದ ಸಮಾಜವನ್ನು ಶ್ರೇಷ್ಠ ಚಿಂತನೆಗಳ ಮೂಲಕ ಸರಿ ದಾರಿಗೆ ತರುವ ಕೆಲಸ ಮಾಡಿದರು ನಾವು ಕೇವಲ ಅವರ ಭಾವಚಿತ್ರದ ಪೂಜೆ ಮಾಡಿದರೆ ಸಾಲದು ಅವರ ಜೀವನದ ಚಿಂತನೆಗಳನ್ನೂ ಅರಿಯುವ ಕೆಲಸ ಮಾಡಬೇಕಾಗಿದೆ ಎಂದರು. ಪ್ರೌಢಶಾಲೆ ಶಿಕ್ಷಕರ ಸಂಘದ ಉಪಾಧ್ಯಕ್ಷ ಆನಂದ ಕಟ್ಟಿಮನಿ ಮಾತನಾಡಿ ತಮ್ಮ ಅಪಾರ ಸೇವಾ ಕಾರ್ಯಗಳಿಂದಾಗಿ ಕಾಯಕಯೋಗಿ ಎಂದೆನಿಸಿಕೊಂಡು ಶಿವಯೋಗಿ ಸಿದ್ದರಾಮೇಶ್ವರ ಅವರು ವಚನ ಕ್ರಾಂತಿಗೆ ಸಾಕಷ್ಟು ಶ್ರಮಿಸಿದವರಾಗಿದ್ದಾರೆ ಎಂದರು. ವೇದಿಕೆ ಕಾರ್ಯಕ್ರಮ ಮುನ್ನ ಪಟ್ಟಣದ ಬಸ್ ನಿಲ್ದಾಣ ಹತ್ತಿರವಿರುವ ಶ್ರೀ ಸಿದ್ದರಾಮೇಶ್ವರ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಸಮಾಜದ ವತಿಯಿಂದ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಭೋವಿ ಸಮಾಜದ ತಾಲೂಕ ಅಧ್ಯಕ್ಷ ದ್ಯಾವಪ್ಪ ಕೂಚಬಾಳ,ನಗರ ಅಧ್ಯಕ್ಷ ಹಣಮಂತ ಕಟ್ಟಿಮನಿ, ಉಪಾಧ್ಯಕ್ಷ ದುರ್ಗಪ್ಪ ಕುಲಕರ್ಣಿ, ಗೌರವ ಅಧ್ಯಕ್ಷ ಭೀಮಣ್ಣ ಕಟ್ಟಿಮನಿ, ಯುವ ಮುಖಂಡ ಶ್ರೀನಿವಾಸ್ ಕುಲಕರ್ಣಿ, ಪ್ರಮುಖರಾದ ಎಚ್ ಎನ್ ಕಟ್ಟಿಮನಿ, ದುರ್ಗಪ್ಪ ಕಾರ್ಕೂರ, ಮುದಕಪ್ಪ ಢವಳಗಿ, ಹುಲಿಗೆಪ್ಪ ಕಟ್ಟಿಮನಿ ನಾಗಪ್ಪ ಬಳವಾಟ, ಬಸವರಾಜ ಎಚ್.ಕಟ್ಟಿಮನಿ, ಭೀಮಸಿ ಕಾರ್ಕೂರ, ಶ್ರೀಕಾಂತ ಚಿಂಚೋಳಿ, ಪ್ರಕಾಶ ಕೂಚಬಾಳ, ಪರುಶರಾಮ ನಾಲತವಾಡ, ನ್ಯಾಯವಾದಿ ಕಾರ್ತಿಕ್ ಕಟ್ಟಿಮನಿ, ರಾಮಣ್ಣ ಕಟ್ಟಿಮನಿ, ಸಂಜೀವಪ್ಪ ಬರದೇನಾಳ, ಪರಶುರಾಮ್ ಹಗರಟಗಿ, ವೆಂಕಟೇಶ ಹಗರಟಗಿ, ದೇವಪ್ಪ ಬಂಡಿವಡ್ಡರ, ಅನಿಲ್ ಕಟ್ಟಿಮನಿ, ಹುಲಿಗೆಪ್ಪ ಕಟ್ಟಿಮನಿ, ರಾಜು ಹಾದಿಮನಿ, ಕಾಶಿನಾಥ ಕಟ್ಟಿಮನಿ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *