ತಾಳಿಕೋಟಿ: ಪಟ್ಟಣದಲ್ಲಿ ಇತ್ತೀಚಿಗೆ ನಡೆದ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಕ್ಕರೆ ಜವಳಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಇವರನ್ನು ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪೂಜ್ಯ ಇಂಗಳೇಶ್ವರ ಸ್ವಾಮೀಜಿ,ಶ್ರೀ ಸಿದ್ದಲಿಂಗ ದೇವರು, ಶಾಸಕ, ಕೆ.ಎಸ್.ಡಿ.ಎಲ್.ಅಧ್ಯಕ್ಷರಾದ ಸಿ.ಎಸ್. ನಾಡಗೌಡ(ಅಪ್ಪಾಜಿ), ವಿಡಿಸಿಸಿ ಬ್ಯಾಂಕ ನಿರ್ದೇಶಕ ಬಿ.ಎಸ್.ಪಾಟೀಲ ಯಾಳಗಿ,ವಿ.ವಿ.ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ, ಮುರಿಗೆಪ್ಪ ಸರಶಟ್ಟಿ, ಅಶೋಕ ಜಾಲವಾದಿ,ಸಹಕಾರಿ ಸಂಘದ ಅಧ್ಯಕ್ಷ ಕಾಶಿನಾಥ ಮುರಾಳ, ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

