ನಾವು ಆಚರಿಸುವ ಜಾತ್ರೆ, ಹಬ್ಬ, ಉತ್ಸವಗಳು ನಮ್ಮ ಸಂಸ್ಕ್ರತಿ, ಸಮಾಜಿಕ ಪರಂಪರೆಯ ಭಾಗವಾಗಿದ್ದು, ಲಕ್ಷಾಂತರ ಜನ ಸೇರುವ ಪ್ರಮುಖ ಜಾತ್ರೆ, ಉತ್ಸವಗಳ ಆವರಣದಲ್ಲಿ ನೈರ್ಮಲ್ಯ ಕಾಪಾಡುವ, ಶುದ್ದ ನೀರು, ಆಹಾರ, ಸೇವನೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಾತ್ರಾ ಸಮಿತಿ ಮೂಲಕ ಸೂಚಿಸುವ ಮಾಹಿತಿಯನ್ನು ಭಕ್ತರು ಅನುಸರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರಬಾಬು ವಿನಂತಿಸಿದರು.
ಲಿಂಗಸೂಗೂರು ತಾಲ್ಲೂಕಿನ ಸುಪ್ರಸಿದ್ಧ ಗುರಗುಂಟಾ ಅಮರೇಶ್ವರ ಜಾತ್ರಾ ಹಿನ್ನೆಲೆಯಲ್ಲಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಕೆ, ರವರ ನೇತೃತ್ವದಲ್ಲಿ ಇಂದು ದೇವಸ್ಥಾನದ ಆವರಣದ ಬಜಾರ್ ಭಾವಿ, ಕೆರೆಬಾವಿ, ಹಾಗೂ ಗುರಗುಂಟಾ ಅಡವಿಯಲ್ಲಿರುವ ಎರಡು ಬೋರ್‌ವೆಲ್‌ಗಳ ನೀರು ಕ್ಲೋರಿನೆಷನ್ ಕೈಗೊಂಡಿರುವುದನ್ನು ಪರಿಶೀಲಿಸಿದ ಹಿನ್ನಲೆ ಮಾಹಿತಿ ನೀಡಿ, ಈಗಾಗಲೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಾರ್ಗದರ್ಶನದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ, ಗುರಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಆರೋಗ್ಯ ನಿರಿಕ್ಷಣಾಧಿಕಾರಿ, ಎಪಡಮಲಾಜಿಸ್ಟ್ ತಂಡವು ಜಾತ್ರಾ ಹಿನ್ನಲೆಯಲ್ಲಿ ಎಲ್ಲ ನೀರಿನ ಮೂಲಗಳನ್ನು ಗ್ರಾಮ ಪಂಚಾಯತ ಸಿಬ್ಬಂದಿಯ ಮೂಲಕ ಪರೀಕ್ಷೆ ಕೈಗೊಂಡು ನಿರಂತರ ಕ್ಲೋರಿನೆಷನ್ ಮಾಡಲಾಗುತ್ತಿದ್ದು, ಎಲ್ಲಾ ನೀರಿನ ಮೂಲಗಳ ಮಾದರಿಗಳನ್ನು ಸಂಗ್ರಹಿಸಿ ಜೈವಿಕ ಪರೀಕ್ಷೆಗೆ ಒಳಪಡಿಸಲಾಗಿದ್ದು, ಫಾಂಗಿಂಗ್ ನಿರಂತರವಾಗಿ ಮಾಡಕಾಗುತ್ತಿದ್ದು, ಇಂದಿನಿಂದಲೆ ಜಾತ್ರೆಗಳಲ್ಲಿ ಹಾಕಲಾಗುವ ಹೋಟೆಲ್, ತಿಂಡಿ ತಿನಿಸು ಮಾರಾಟಗಾರರಿಗೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಬಳಸಲು ಸೂಚಿಸಲಾಗುತ್ತಿದೆ ಅಲ್ಲದೆ ದೇವಸ್ಥಾನದ ಸುತ್ತಮುತ್ತಲಿನ ಆವರಣದಲ್ಲಿ ಯಾವುದೇ ತ್ಯಾಜ್ಯ ಬಿಸಾಕದಂತೆ ಜನತೆಗೆ ಜಾಗೃತಿಯನ್ನು ಜಾತ್ರಾ ಸಮಿತಿಯ ಮೂಲಕ ನೀಡಲಾಗುವುದು ಎಂದು ಕರೆಯಲಾಗುತ್ತದೆ ತಿಳಿಸಿದರು.
ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಕೆ, ಮಾತನಾಡಿ ಸಾರ್ವಜನಿಕರು ತೆರೆದಿಟ್ಟ ಆಹಾರ ಸೇವಿಸದಂತೆ, ಜಾತ್ರಾ ಸಮಿತಿಯ ಮೂಲಕ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಸ್ವಚ್ಚ ಹಾಗೂ ಶುದ್ಧವಾದ ಕ್ಲೋರಿನೇಷನ್ ಮಾಡಿ ಸರಬುರಾಜು ಮಾಡುವ ನೀರನ್ನು ಮಾತ್ರ ಕುಡಿಯಲು ಬಳಸುವಂತೆ ಜಾಗೃತಿ ನೀಡಲಾಗುತ್ತಿದ್ದು, ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಲು, ಮಲ, ಮೂತ್ರ ವಿಸರ್ಜನೆಗಾಗಿ ಶೌಚಾಲಯ ಬಳಸಲು. ತಂಗಳು ಆಹಾರವನ್ನು ಸೇವಿಸದೇ ಬಿಸಿಯಾದ ಆಹಾರ ಮಾತ್ರ ಸೇವಿಸಲು ಜಾಗೃತಿ ನೀಡಲು ತಂಡಗಳನ್ನು ರಚಿಸಲಾಗಿದ್ದು, ಜಾತ್ರಾ ಸಮಿತಿಯ ಮೂಲಕ ನಿರಂತರ ಪ್ರಚಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಕ್ಕಳ ಆರೋಗ್ಯಕ್ಕೆ ಸುರಕ್ಷತೆ:
ಅಲ್ಲದೆ ಮಕ್ಕಳಿಗೆ ಅನಗತ್ಯವಾಗಿ ಹೊರಗಿನ ಆಹಾರ ಪದಾರ್ಥ ಕೊಡದೆ ಮನೆಯ ಆಹಾರಕ್ಕೆ ಆದ್ಯತೆ ನೀಡಬೇಕು. ಜಾತ್ರೆಯಲ್ಲಿ ವಸತಿ ಮಾಡುವ ಸ್ಥಳದ ಸುತ್ತಲೂ ಸ್ವಚ್ಛತೆ ಕಾಪಾಡಿ ನೊಣ, ಹುಳ ಹುಪ್ಪಡಿಗಳಾದಂತೆ ನೋಡಿಕೊಳ್ಳಲು ತಿಳಿಸಿದರು.
ಜಾತ್ರೆಯಲ್ಲಿ ಬಿಸಿಲಿನ ತಾಪಮಾನದಿಂದ ರಕ್ಷಣೆ
ಬಿಸಿಲು ಹೆಚ್ಚಿದ್ದರೆ ಟೋಪಿ/ಛತ್ರಿ ಬಳಸಿ ಸಾಕಷ್ಟು ನೀರು ಕುಡಿಯಿರಿ, ದೇಹಕ್ಕೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಸಮಸ್ಯೆಗಳಿದ್ದರೆ ನಿಯಮಿತವಾಗಿ ಸೇವಿಸುವ ಅಗತ್ಯ ಔಷಧಿಗಳನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಜ್ವರ, ಅಸ್ವಸ್ಥತೆ ಇದ್ದರೆ ವಿಶ್ರಾಂತಿ ತೆಗೆದುಕೊಳ್ಳಬೇಕು. ದೂಳಿನ ಅಲರ್ಜಿ, ಕೆಮ್ಮು, ಇದ್ದರೆ ಮಾಸ್ಕ್ ಧರಿಸಬೇಕು.
ತುರ್ತು ಚಿಕಿತ್ಸಾ ಕೇಂದ್ರ ಹಾಗೂ ಆ್ಯಂಬುಲೇನ್ಸ್ ಸೇವೆ:
ಯಾವುದೇ ಅರೋಗ್ಯ ಸಮಸ್ಯೆ ಕಂಡುಂಬಂದರೆ ಜಾತ್ರಾ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.
ಜನಸಂದಣಿ ಸುರಕ್ಷತೆ: ಮಕ್ಕಳನ್ನು ಮತ್ತು ಹಿರಿಯರನ್ನು, ಗಮನದಲ್ಲಿಟ್ಟುಕೊಂಡು ಹೆಚ್ಚು ಜನಜಂಗುಳಿ ಸ್ಥಳಗಳಲ್ಲಿ ಆರೋಗ್ಯದ ಸಮಸ್ಯೆಯಾದಂತೆ ಜಾಗರೂಕತೆ ವಹಿಸಲು ತಿಳಿಸಿದರು.


