ತಾಳಿಕೋಟಿ: ಸ್ವಾಮಿ ವಿವೇಕಾನಂದರು ಮಹಾನ್ ಸಂತ, ದೇಶಪ್ರೇಮಿ, ಯುವಕರ ಕಣ್ಮಣಿ ಸೂರ್ಯನಂತೆ ಬೆಳಗಿ ಭಾರತದಲ್ಲಿ ಮುಸುಕಿದ ಕತ್ತಲೆಯೂ ದೂರ ಸರಸಿದ ಪುಣ್ಯಾತ್ಮ ಎಂದು ಸ್ಥಳೀಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಂ.ಬಂಟನೂರ ಹೇಳಿದರು. ಸೋಮವಾರ ಎಸ್ ಕೆ ಶಿಕ್ಷಣ ಮಹಾವಿದ್ಯಾಲಯದಲ್ಲಿ “ರಾಷ್ಟ್ರೀಯ ಯುವ ದಿನ ” ಸ್ವಾಮಿ ವಿವೇಕಾನಂದರ 163ನೇ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿಮ್ಮ ನಗರಗಳನ್ನು ಬಲಗೊಳಿಸಿರಿ ನಮಗೆ ಉಕ್ಕಿನ ನರಗಳುಳ್ಳ ಕಬ್ಬಿಣದ ಅಂತಹ ಮನುಷ್ಯರು ಬೇಕಾಗಿದ್ದಾರೆ. ಇಲ್ಲಿಯವರೆಗೆ ದೀನರಾಗಿ ವರ್ತಿಸಿದ್ದೀರಿ ಇನ್ನು ಇದು ಯೋಗ್ಯ ಮನುಷ್ಯನನ್ನು ನಿರ್ಮಿಸಬಲ್ಲ ಮಾನವ ಧರ್ಮ ನಮಗೆ ಬೇಕಾಗಿದೆ ಅದಕ್ಕಾಗಿ ಎದ್ದೇಳಿ ಎಂದು ಸ್ವಾಮಿ ವಿವೇಕಾನಂದರು ಕರೆ ನೀಡಿದ್ದರು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಐಕ್ಯುಎಸಿ ಸಂಯೋಜಕ ಉಮೇಶ ಮಂಗೊಂಡ ಅವರು ಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತಗಳುನ್ನು ಮೈಗೂಡಿಸಿಕೊಂಡು ಬದುಕು ಸಾಗಿಸಬೇಕು, ಧರ್ಮ ದೇಶಭಕ್ತಿಯನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಉಪನ್ಯಾಸಕ ಗಂಗನಗೌಡರ ಮಾತನಾಡಿ ಭಾರತವನ್ನು ತಿಳಿದುಕೊಂಡು ಅರ್ಥೈಸಿಕೊಳ್ಳುವ ಮೊದಲು ಸ್ವಾಮಿ ವಿವೇಕಾನಂದರ ಜೀವನ ಅವರ ತತ್ವಗಳನ್ನ ತಿಳಿದು ಓದಿ ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸಕ ಮನೋಹರ
ಪೋತದಾರ ಅವರು ಸ್ವಾಮಿ ವಿವೇಕಾನಂದರು ಮಹಾನ್ ಮಾನವತಾವಾದಿ ದಾರ್ಶನಿಕ ನವ ಭಾರತದ ನಿರ್ಮಾಪಕ ವೇದಾಂತ ಕೇಸರಿ ವೀರ ಸನ್ಯಾಸಿ ಸನಾತನ ಧರ್ಮ ಪರಿಪಾಲಕ ಯುವಕರ ಕಣ್ಮಣಿ ಯುವಕರಿಗೆ ಸ್ಪೂರ್ತಿದಾಯಕ ರಾಗಿದ್ದರು ಎಂದು ಹೇಳಿದರು.
ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಾದ ಕು. ಕು.ಸುಮಂಗಲಾ ಕು. ಲಷ್ಮೀ ಬಡಿಗೇರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕು.ಸಾವಿತ್ರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕು.ಮದು ನಾಡಗೌಡ ಸ್ವಾಗತಿಸಿ ಪರಿಚಯಿಸಿದರು.ಬಸವರಾಜ ವಂದಿಸಿದರು. ಕುಮಾರಿ ಅನ್ನಪೂರ್ಣೇಶ್ವರಿ ನಿರೂಪಿಸಿದರು.

