ತಾಳಿಕೋಟಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕೆಯನ್ನು ಸಂತೋಷದಾಯಕ ಮತ್ತು ಆಕರ್ಷಿಕ ರೀತಿಯಲ್ಲಿ ಸುಧಾರಿಸಲು ಶಿಕ್ಷಣ ಇಲಾಖೆ ಜಾರಿಗೆ ತಂದ ಪ್ರಮುಖ ಕಾರ್ಯಕ್ರಮ “ಕಲಿಕಾ ಹಬ್ಬ” ವಾಗಿದೆ ಎಂದು ಕೊಣ್ಣೂರ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್ ಎಸ್ ಯಾಳವಾರ ಹೇಳಿದರು. ತಾಲೂಕಿನ ತಮದಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಣ್ಣೂರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿಕ್ಷಕ ಎಸ್ಎನ್ ಪಾಟೀಲ ಮಾತನಾಡಿ ಪ್ರತಿ ಶಾಲೆಯ ಮಗುವೂ ಮೂಲಭೂತ ಸಂಖ್ಯಾ ಜ್ಞಾನವನ್ನು ಸಾಧಿಸಲು ಎಫ್ ಎಲ್ ಏನ್ ಕಲಿಕ ಹಬ್ಬವನ್ನು ಜಾರಿಗೆ ತರಲಾಗಿದೆ ಇದರಲ್ಲಿ ಪ್ರಮುಖ ಏಳು ವಿಷಯಗಳ ಮೇಲೆ ಸ್ಪರ್ಧೆಗಳು ನಡೆಯುತ್ತವೆ ಇದರಲ್ಲಿ ಎಲ್ಲ ಮಕ್ಕಳು ಆಸಕ್ತಿಯಿಂದ ಭಾಗವಹಿಸಬೇಕು ಎಂದರು. ಶಿಕ್ಷಕ ನಿಂಗರಾಜ ನೀರಲಗಿ ಮಾತನಾಡಿದರು. ಮುಖ್ಯ ಗುರುಗಳಾದ ಎಲ್.ಎಸ್.ಗಸ್ತಿ ಸಮಾರಂಭವನ್ನು ಉದ್ಘಾಟಿಸಿದರು. ತಮ್ಮದಡ್ಡಿ ಎಚ್ ಪಿ ಎಸ್ ಮುಖ್ಯ ಗುರುಗಳಾದ ಐ.ಎಂ.ಮಡಿವಾಳರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎಸ್ ಬಿ ಹಾದಿಮನಿ ಕಾರ್ಯಕ್ರಮ ನಿರ್ವಹಿಸಿದರು.ಈ ಸಮಯದಲ್ಲಿ ಕ.ರಾ.ಪ್ರಾ.ಶಾ.ಶಿ.ಸಂಘದ ತಾಲೂಕಾ ಗೌರವ ಅಧ್ಯಕ್ಷ ಎಸ್ ಎಸ್ ತೀರ್ಥ, ಟೀಚರ್ಸ್ ಸೊಸೈಟಿ ಉಪಾಧ್ಯಕ್ಷ ಪಿ.ವೈ.ಚಲವಾದಿ, ಮುಖ್ಯ ಗುರುಗಳಾದ ಅಶೋಕ್ ಕೆ ನಾಯಕ, ಶ್ರೀಮತಿ ಕೆ.ಎ.ಹಿರೇಗೌಡರ,ವಿ.ಸಿ. ಕವಡಿಮಟ್ಟಿ,ಸಹ ಶಿಕ್ಷಕ ಎಸ್ಎನ್. ಪಾಟೀಲ್, ಸಹ ಶಿಕ್ಷಕಿ ಶ್ರೀಮತಿ ಕೆ.ಜಿ. ತುಂಬಗಿ, ಶಿಕ್ಷಕರಾದ ಎಸ್.ಎಂ.ಬಂಟನೂರ, ಎ.ಆರ್. ಸುಣದಳ್ಳಿ, ನಿಂಗರಾಜ್ ನೀರಲಗಿ, ಆರ್.ವಾಯ್.ಶಿವಯೋಗಿ,ವಿ.ಸಿ. ಕವಡಿಮಟ್ಟಿ,ಸಿದ್ದನಗೌಡ ಕಲಕೇರಿ, ಸಿದ್ದಣ್ಣ ನಾಗೂರ ಒಳಗೊಂಡು ಶಿಕ್ಷಕರು ಹಾಗೂ ಕೊಣ್ಣೂರು ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳು ಇದ್ದರು. ವೇದಿಕೆ ಕಾರ್ಯಕ್ರಮದ ನಂತರ ಕಲಿಕಾ ಹಬ್ಬದ 7 ವಿಷಯಗಳ ಮೇಲೆ ವಿದ್ಯಾರ್ಥಿಗಳ ಸ್ಪರ್ಧೆಗಳು ನಡೆದವು.

