ತಾಳಿಕೋಟಿ: ಪಟ್ಟಣ ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದು ಇಲ್ಲಿರುವ ಎಲ್ಲಾ ಸಹಕಾರಿ ಸಂಘಗಳು ಆರ್ಥಿಕವಾಗಿ ಸದೃಢವಾಗಿವೆ ಸಹಕಾರಿ ರಂಗಕ್ಕೆ ಈ ಪಟ್ಟಣದ ಕೊಡುಗೆ ಅಪಾರವಾಗಿದೆ ಎಂದು ಸಕ್ಕರೆ ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು. ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಈ ಸಂಘವು ಹೆಮ್ಮರವಾಗಿ ಬೆಳೆದು ಸತತ 6 ವರ್ಷಗಳಿಂದ ಸಹಕಾರಿ ಕ್ಷೇತ್ರದ ಪ್ರಶಸ್ತಿಯನ್ನು ಪಡೆಯುತ್ತಾ ಬಂದಿದೆ, ಇಲ್ಲಿ ಆದಷ್ಟು ಬೇಗ ಒಂದು ಸುಂದರ ಸುಸಜ್ಜಿತವಾದ ಬ್ಯಾಂಕ್ ಕಟ್ಟಡ ನಿರ್ಮಾಣವಾಗಿ ಶಾಸಕ ಅಪ್ಪಾಜಿ ನಾಡಗೌಡರ ಅಮೃತ ಹಸ್ತದಿಂದಲೇ ಇದು ಉದ್ಘಾಟನೆ ಗೊಳ್ಳುವಂತಾಗಲಿ ಎಂದ ಅವರು ಇಲ್ಲಿಯ ಎಪಿಎಂಸಿ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ 10 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತೇನೆ. ಈ ಬ್ಯಾಂಕು ಶತಾಯುಷವಾಗಿ ಬೆಳೆದು ಬದುಕಲೆಂದು ಹಾರೈಸುತ್ತೇನೆ ಎಂದರು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಅಪ್ಪಾಜಿ ನಾಡಗೌಡರು ನಿರ್ಮಾಣವಾಗಲಿರುವ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿದರು. ಸಂಘದ ಅಧ್ಯಕ್ಷ ಬಸವರಾಜ ಎನ್.ಹಿಪ್ಪರಗಿ ಅಧ್ಯಕ್ಷತೆ ವಹಿಸಿದ್ದರು. ಇಂಗಳೇಶ್ವರದ ಪೂಜ್ಯ ಡಾ.ಸಿದ್ದಲಿಂಗ ಸ್ವಾಮೀಜಿ ಹಾಗೂ ಶ್ರೀ ಖಾಸ್ಗತೇಶ್ವರ ಮಠದ ಪೂಜ್ಯ ಸಿದ್ದಲಿಂಗ ದೇವರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ,ವಿಡಿಸಿಸಿ ಬ್ಯಾಂಕ ನಿರ್ದೇಶಕ ಬಿಎಸ್ ಪಾಟೀಲ (ಯಾಳಗಿ), ಸಹಾಯಕ ನಿಬಂಧಕ ಚೇತನ್ ಭಾವಿಕಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಗುರು ತಾರನಾಳ, ಮಲ್ಲನಗೌಡ ಯಾತಗಿರಿ, ಎಪಿಎಂಸಿ ಕಾರ್ಯದರ್ಶಿ ಆರ್ ಎಸ್ ರಾಥೋಡ, ಸಂಘದ ಉಪಾಧ್ಯಕ್ಷ ರವೀಂದ್ರನಾಥ ಪಾಟೀಲ,ಪ್ರಭುಗೌಡ ಮದರ್ಕಲ್, ಸಿದ್ದನಗೌಡ ಪಾಟೀಲ ನಾವದಗಿ,ಸಿ.ಬಿ.ಅಸ್ಕಿ, ಸಂಗನಗೌಡ ಅಸ್ಕಿ, ಮಾಸೂಮಸಾಬ ಕೆಂಭಾವಿ, ನೀಲಮ್ಮಗೌಡತಿ ಪಾಟೀಲ, ರೋಶನ ಡೋಣಿ, ಇಬ್ರಾಹಿಂ ಮನ್ಸೂರ, ನಿರ್ದೇಶಕರಾದ ಹಣಮಗೌಡ ಗೂಗಲ್, ಶರಣಗೌಡ ಇಬ್ರಾಹಿಂಪುರ,ಚಿನ್ನಪ್ಪ ಗೌಡ ಮಾಳಿ, ಸುಭಾಸಚಂದ್ರ ಗುರಡ್ಡಿ ಶಾಂತಗೌಡ ಪಾಟೀಲ, ಶಾಂತಾ ಕಂತಲಗಾವಿ ಸುಜಾತಾ ಮಂಗಳೂರ, ರಮೇಶ್ ನಾಯಕ ವ್ಯವಸ್ಥಾಪಕ ಚಂದ್ರಶೇಖರ ಎನ್ ಪಾಟೀಲ ಮತ್ತಿತರರು ಇದ್ದರು. ಶ್ವೇತಾ ಯರಗಲ್ ಪ್ರಾರ್ಥಿಸಿದರು. ಸಂಗಮೇಶ ದೇಸಾಯಿ ಸ್ವಾಗತಿಸಿದರು. ಸಾಹಿತಿ ಶ್ರೀಕಾಂತ ಪತ್ತಾರ ನಿರೂಪಿಸಿದರು. ನಿರ್ದೇಶಕ ಪ್ರಭುಗೌಡ ಮದರ್ಕಲ್ ವಂದಿಸಿದರು.

Leave a Reply

Your email address will not be published. Required fields are marked *