ತಾಳಿಕೋಟಿ: ಯಾವುದೇ ಒಂದು ಸಮಾಜದಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ದೊಡ್ಡ ಕೆಲಸವನ್ನು ಮಾಡಲು ಸಾಧ್ಯ ಯಾರಿಂದಲೂ ಆರ್ಥಿಕ ನೆರವು ತೆಗೆದುಕೊಳ್ಳದೆ ಸಮಾಜದ ವತಿಯಿಂದಲೇ ಮಹಾರಾಣಾ ಪ್ರತಾಪ್ ಸಿಂಹ ಅವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ವೃತ್ತ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಸಕ್ಕರೆ ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು. ಸೋಮವಾರ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸಮಾಜ ಬಾಂಧವರ ವಿನಂತಿ ಮೇರೆಗೆ ಮಹಾರಾಣಾ ಪ್ರತಾಪ್ ಸಿಂಹ ವೃತ್ತದ ನಿರ್ಮಾಣ ಹಂತದ ಕಾರ್ಯವನ್ನು ವೀಕ್ಷಿಸಿ ಅವರು ಮಾತನಾಡಿದರು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡರು ಮಾತನಾಡಿ ವೃತ್ತದ ಸಂಪೂರ್ಣ ಕಾರ್ಯದ ನಂತರ ಇದರ ಅದ್ದೂರಿ ಉದ್ಘಾಟನೆಯ ಕಾರ್ಯಕ್ರಮ ಇಟ್ಟುಕೊಳ್ಳಿ ಇದಕ್ಕೆ ನಾನು ಮತ್ತು ಸಚಿವ ಶಿವಾನಂದ ಪಾಟೀಲರು ಆಗಮಿಸುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲ,ಶಾಸಕ ಅಪ್ಪಾಜಿ ನಾಡಗೌಡ ಹಾಗೂ ಬಿ.ಎಸ್.ಪಾಟೀಲ ಯಾಳಗಿ ಇವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿ
ಸಿಂಗ್ ಮೂಲಿಮನಿ, ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಪ್ರಕಾಶ ಹಜೇರಿ,ವಿಜಯಸಿಂಗ್ ಹಜೇರಿ,ರಘು ಹಜೇರಿ(ಶೇಠ), ಗೋವಿಂದಸಿಂಗ್ ಮೂಲಿಮನಿ, ಸುರೇಶ ಹಜೇರಿ,ಬಾಬು ಹಜೇರಿ, ವಿಠಲ್ ಬೆಕಿನಾಳ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹೆಬೂಬ ಕೆಂಭಾವಿ, ಬಸ್ಸು ಕೊಡೇಕಲ್, ರಮೇಶ ಗೌಡಗೇರಿ, ದಿಲೀಪ ಹಜೇರಿ,ಪಿಂಟು ಹಜೇರಿ, ನಿತಿನ್ ವಿಜಾಪುರ, ಪಿಂಟು ತಿವಾರಿ, ಸಂದೀಪ ಬನ್ಸಿ, ಸಂತೋಷ ಹಜೇರಿ, ರಾಘು ಹಜೇರಿ,ಗೋವಿಂದಸಿಂಗ್ ಹಜೇರಿ, ಸೂರಜ್ ಹಜೇರಿ, ರಾಜು ಹಜೇರಿ, ವಿಠ್ಠಲ್ ಹಜೇರಿ ಮತ್ತಿತರರು ಇದ್ದರು.

