ತಾಳಿಕೋಟಿ: ಕವಿಗೆ ಸಾಮಾಜಿಕ ಕಳಕಳಿಯೊಂದಿಗೆ ಆತನ ಚಿಂತನಾ ಲಹರಿ ವಿಭಿನ್ನವಾಗಿರುತ್ತದೆ.ಆ ಕಾರಣದಿಂದ ಕವಿ ಮತ್ತು ಕವಿತೆ ಆ ಕಾಲ ಘಟ್ಟದ ಪ್ರತಿಬಿಂಬ ಎನ್ನುತ್ತೇವೆ ಎಂದು ಯುವ ಸಾಹಿತಿ ಸಿದ್ದನಗೌಡ ಬಿಜ್ಜೂರ ಮಾತನಾಡಿದರು.

ನಗರದ ಪ್ರತಿಭಾಲೋಕ ಕರಿಯರ್ ಅಕಾಡೆಮಿಯಲ್ಲಿ
ಕನ್ನಡ ಸಂಘದ ವತಿಯಿಂದ
ರವಿವಾರ ಹಮ್ಮಿಕೊಂಡ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಇದೆ ಸಂದರ್ಭದಲ್ಲಿ ಅವರು ಮಾತನಾಡಿ ಕವಿತೆಗೆ ಒಂದು ಶಕ್ತಿಯಿದೆ,ಅದು ಅಕ್ಷರಗಳ ಜೋಡಣೆ ಅಲ್ಲ,ಭಾವಸಂಬಂಧವನ್ನು ಹೊಂದಿದೆ.ಒಬ್ಬ ವೃದ್ಧ ಹೇಳುವಂತೆ ನಾವು ಸವೆಸಿದ ಅದ್ಬುತ ಬದುಕಿನ ಹಾದಿಯೇ ಕವಿತೆ ಎಂದರು.ಕವನಗಳು ಆ ಕಾಲದ ಪರಂಪರೆಯ ಧ್ವನಿಯಾಗಿ ಪ್ರತಿನಿಧಿಸುತ್ತವೆ ಎಂದರು.

ಕವಿಗೋಷ್ಠಿಯಲ್ಲಿ ವಿಜಯಪುರ,ಮುದ್ದೇಬಿಹಾಳ,ಬಸವನ ಬಾಗೆವಾಡಿ,ಹಲಸಂಗಿ ಹೀಗೆ ಜಿಲ್ಲೆಯ ವಿವಿಧ ಕಡೆಗಳಿಂದ ಹದಿನೆಂಟಕ್ಕೂ ಅಧಿಕ ಕವಿಗಳು ಭಾಗವಹಿಸಿ,ಸಂಕ್ರಾಂತಿ ,ಹೊಸವರ್ಷ,ಕನ್ನಡ ನಾಡುನುಡಿಕುರಿತಾಗಿ ಕವನ ವಾಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅರ್.ಬಿ.ದಮ್ಮೂರಮಠ ಅವರು ಮಾತನಾಡಿ ಕವಿಯು ಕವಿತೆಯನ್ನು ತನ್ನ ಖುಷಿಗಾಗಿ,ನೋವಿಗೆ,ನಲಿವಿಗೆ,ಕಿಚ್ಚಿಗೆ,ರೊಚ್ಚಿಗೆ ಬರೆಯುತ್ತಾನೆ.ಕವಿತೆ ಮಹಾದಾನಂದ ನೀಡುತ್ತದೆ ಎಂದರು.

ಕವಿಗೋಷ್ಠಿಯಲ್ಲಿ ಭಾಗವಹಿಸಿದ ಶಾಂತಾ ಬಿರಾದಾರ ಅವರು ಚಂದದ ನಾಡು ಎಂಬ ಕವಿತೆಯನ್ನು ಜವಾರಿ ಭಾಷೆಯಲ್ಲಿ ,ಶರಣಗೌಡ ಕೋಳೂರ ಅವರು ಹೊಸ ವರ್ಷ ಎಂಬ ಕವಿತೆಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ,ಸಿದ್ದನಗೌಡ ಕಾಸಿನಕುಂಟಿ ಅವರು ಕೃಷ್ಣೆ
ಜೀವಗಂಗೆ ಎಂಬ ಕವಿತೆಯನ್ನು ವೈವಿಧ್ಯಮಯವಾಗಿ, ಕೀರ್ತಿ ನಿಂಗನಗೌಡ ಪಾಟೀಲ್ ಅವರು ಹೊಸ ವರ್ಷದ ಸಂತೆ ಎಂಬ ಕವಿತೆಯನ್ನು ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ,ಮಹಾದೇವಿ.ಕೆ ಪಾಟೀಲ್ ಅವರು ನೋವಿನ ಪಯಣ ಎಂಬ ಕವಿತೆಯಲ್ಲಿ ಜನಮನಕ್ಕೆ ತಿಳಿಯುವ ರೀತಿನಲ್ಲಿ ,ಹಣಮಗೌಡ ಕರಕಳ್ಳಿ ವರು ಬೇತಾಳನ ಪ್ರಶ್ನೆ ಎಂಬ ಕವನವನ್ನು ಅನೇಕ ಪ್ರತಿಮೆಗಳ ಮೂಲಕ,ಸುವರ್ಣ ಗೋನಾಳ ಅವರು ಸಂಕ್ರಾಂತಿ ಎಂಬ ಪದ್ಯವನ್ನು ಸುಕುಮಾರಶೈಲಿಯಲ್ಲಿ, ಮಡಿವಾಳಪ್ಪಗೌಡ ನೀರಲಗಿ ಕನ್ನಡ ನಾಡು ನುಡಿ ಬಗ್ಗೆ, ಭಾಗ್ಯಶ್ರೀ ಕಾರಜೋಳವರು ಕನ್ನಡ ನಾಡು ಎಂಬ ಕವಿತೆಯನ್ನು ಸುಂದರವಾಗಿ, ಬಾಬು ಅಗಸರವರು ಸಮೃದ್ಧಿ ಅನ್ನುವ ಕವಿತೆಯನ್ನು ,ಮಾಜಿ ಸೈನಿಕರಾದ ಮೌಲಾಸಾಬ ಮೊಕಾಸಿಯವರು ಹೊಸ ವರ್ಷದ ಕುರಿತು, ರಾಹುಲ ರಜಪೂತ ಅವರು ಗುರುವಿನ ಕುರಿತ ಕವಿತೆಯ ಆದಿ ಮಧ್ಯ ಅಂತ್ಯ ಪ್ರಾಸಗಳೊಂದಿಗೆ,ಗುಂಡುರಾವ್ ಧನಪಾಲ ಅವರು
ಹೊಸ ವರ್ಷದ ಕುರಿತಾದ ಸಾಮಾಜಿಕ ವಿಡಂಬನ ಕವಿತೆಯನ್ನು ವಾಚಿಸಿದರು.ಚಂದ್ರಗೌಡ ಕುಲಕರ್ಣಿ ಅವರ ಬರೆದ ಕನ್ನಡ ಪರಂಪರೆ ಎಂಬ ಕನ್ನಡ ನಾಡಿನ ವೈಭವದ ಕವಿತೆಯನ್ನು ಶ್ರೀಕಾಂತ ಪತ್ತಾರ ಅವರು ವಾಚಿಸಿದರು.
ಸಾಹೇಬಗೌಡ ಬಿರಾದಾರ ಅವರು ಸವಿತಾ ಇನಾಂದಾರ್ ಅವರು ರಚಿಸಿದ ಬಿಳಿ ಬಟ್ಟೆಯನ್ನು ಅತ್ಯಂತ ಗತ್ತು ಗಮ್ಮತ್ತಿನ ಜವಾರಿ ಭಾಷೆಯಲ್ಲಿ ವಾಚಿಸಿದರು ಹಾಗೂ ಬಸವರಾಜ ಗೊರಜಿಯವರು ರೈತರ ಗೋಳು ಎಂಬ ಕವಿತೆಯನ್ನು ಹಾಗೂ ಸುಮಂಗಲಾ ಕೋಳೂರವರು ತುಫಾನ್ ಎಂಬ ಕವಿತೆಯ ಮೂಲಕ ಜೀವನದ ಸಮಸ್ಯೆಗಳನ್ನು ಹಾಗೂ ಎ.ಎಲ್.ನಾಗೂರ ರಚಿಸಿದ ಕೆಂಪಾದವು ಎಂಬ ಕವಿತೆಯನ್ನು ಮಹಾಂತೇಶ ಮುರಾಳವರು ವಾಚನವನ್ನು ಮಾಡಿದರು.

ವೇದಿಕೆಯ ಮೇಲೆ ಕನ್ನಡ ಸಂಘದ ಉಪಾಧ್ಯಕ್ಷರಾದ ಶ್ರೀ ಆರ್.ಬಿ.ದಮ್ಮೂರಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಕನ್ನಡ ಸಂಘದ ಉಪಾಧ್ಯಕ್ಷರಾದ
ಶ್ರೀಮತಿ ಸುಮಂಗಲಾ ಕೋಳೂರ ಅವರು,ಶ್ರೀ ಬಸವರಾಜ ಗೊರಜಿ,ಮಹಾಂತೇಶ ಮುರಾಳ,‌ಬಿ,ಎಸ್ ದ್ಯಾಪೂರ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಸಾಹಿತಿ ಶ್ರೀ ಸಾಹೇಬಗೌಡ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಚಿಂತಕರಾದ ಶ್ರೀ ದಿನಕರ ಜೋಷಿ ಅವರು ಸ್ವಾಗತಿಸಿದರು.ಶ್ರೀ ಶ್ರಿಕಾಂತ ಕಟ್ಟಿಮನಿ ಪ್ರಾರ್ಥಿಸಿದರು.ವಾಗ್ಮಿಗಳಾದ ಹಾಗೂ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಪತ್ತಾರ ಅವರು ಪ್ರಾಸ್ಥಾವಿಕ ಮಾತನಾಡಿದರು.ಕನ್ನಡ ಸಂಘದ ಸದಸ್ಯರಾದ ಬಸನಗೌಡ ಚೋಕಾವಿ ವಂದಿಸಿದರು.

Leave a Reply

Your email address will not be published. Required fields are marked *