ತಾಳಿಕೋಟಿ: ಬಡವರ ಬಾಳಿಗೆ ಬೆಳಕಾಗಿರುವ, ದುಡಿಯುವ ಕೈಗಳಿಗೆ ಕೆಲಸದೊಂದಿಗೆ ಸಮಾನ ಕೂಲಿಯನ್ನು ಒದಗಿಸುವ ಉದ್ಯೋಗ ಖಾತರಿ ಯೋಜನೆಯ ಲಾಭವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಾಲೂಕ ಪಂಚಾಯಿತಿಯ ಮನರೇಗಾ ಸಹಾಯಕ ನಿರ್ದೇಶಕ ಪಿ.ಎಸ್.ಕಸನಕ್ಕಿ ಹೇಳಿದರು. ತಾಲೂಕಿನ ಮೂಕಿಹಾಳ ಗ್ರಾಮ ಪಂಚಾಯತಿಯ ಸಭಾ ಭವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜಗಾರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವುದು ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅರ್ಹ ಪ್ರತಿ ಕುಟುಂಬವು ಉದ್ಯೋಗ ಚೀಟಿ ಹೊಂದುವ ಹಕ್ಕು ಹೊಂದಿರುತ್ತಾರೆ. ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲಾ ವಯಸ್ಕರು, ಅಕುಶಲ ದೈಹಿಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ. ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬ 100 ಮಾನವ ದಿನಗಳ ಕೆಲಸಕ್ಕಾಗಿ ಅರ್ಜಿ ಸಲ್ಲಿಸಬಹುದು. ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೂಲಿ . ಕೆಲಸಕ್ಕೆ ಬೇಡಿಕೆ ಸಲ್ಲಿಸಿದ ಹದಿನೈದು ದಿನದೊಳಗೆ ಕೆಲಸ ನೀಡಲಾಗುವುದು ಎಂದು ತಿಳಿದರು.
ನಂತರ ಕೂಲಿ‌ಕಾರರಿಂದ ಕೆಲಸದ ಬೇಡಿಕೆಯ ಅರ್ಜಿಯನ್ನು
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಗೂಂಡಾಪೂರ ರವರಿಗೆ ಸಲ್ಲಿಸದರು. ಹೊಸ ಉದ್ಯೋಗ ಚೀಟಿಗಳನ್ನು ವಿತರಿಸಲಾಯಿತು.
ಈ ಸಂದರ್ಬದಲ್ಲಿ ನರೇಗಾ ತಾಂತ್ರೀಕ ಸಂಯೋಜಕ ಮಹಾಂತೇಶ ಕಿಲಾರಟ್ಟಿ, ಐಇಸಿ ಸಂಯೋಜಕ ಮಲಕಪ್ಪ, ಗ್ರಾ.ಪಂ ಸಿಬ್ಬಂದಿಗಳು, ಬಿಎಫ್ ಟಿ ಲಕ್ಕಪ್ಪ, ಜೆಕೆಎಮ್ ಮಹಾದೇವಿ, ಮಹಿಳಾ ಸ್ವ-ಸಹಾಯ‌ ಸಂಘದ ಸದಸ್ಯರುಗಳು, ಗ್ರಾಮಸ್ಥರು‌ ಇದ್ದರು.

Leave a Reply

Your email address will not be published. Required fields are marked *