ತಾಳಿಕೋಟಿ: ನಮಗೆ ಬೇಕಾದ ಎಲ್ಲ ವಿಧದ ವಿದ್ಯೆಗಳನ್ನೂ ದಯಪಾಲಿಸುವವಳು ಸರಸ್ವತಿಯಾಗಿದ್ದು ಬರಿ ವಿದ್ಯೆಯನ್ನಷ್ಟೆ ಗಳಿಸಿದರೆ ಪ್ರಯೋಜನವಿಲ್ಲ ಅದನ್ನು ಸರಿಯಾಗಿ ಬಳಸಲು ಬುದ್ಧಿಯೂ ಬೇಕು. ಇಂಥ ಬುದ್ಧಿಯನ್ನು ಕೊಡುವವಳೂ ಸರಸ್ವತಿಯೇ
ಎಂದು ತಾಳಿಕೋಟಿ ವಿ. ವಿ ಸಂಘದ ಕಾರ್ಯದರ್ಶಿ ಎಂ ಎಸ್ ಸರಶೆಟ್ಟಿ ಹೇಳಿದರು. ಸ್ಥಳೀಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಪ್ರಾರಂಭೋತ್ಸವ ದಿನದಂದು ಸರಸ್ವತಿ ಪೂಜೆ ನೆರವೇರಿಸಿ ಮಾತನಾಡಿದರು.
ಸರಸ್ವತಿಯು ನಮಗೆ ಬೌದ್ಧಿಕ ಸ್ವರೂಪದ ಶಕ್ತಿಯ ಸಂಕೇತ ಆದುದರಿಂದಲೇ ಯಾವುದೇ ವಿದ್ಯೆಯ ಆರಂಭದಲ್ಲಿ ಸರಸ್ವತಿಯನ್ನು ಪ್ರಾರ್ಥಿಸಿಕೊಳ್ಳುವುದು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ
ಇನ್ನೋರ್ವ ಮುಖ್ಯ ಅತಿಥಿ ಸಂಘದ ಉಪಾಧ್ಯಕ್ಷ ಕಾಶಿನಾಥ ಮುರಾಳ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ
ಆರ್. ಎಂ. ಬಂಟನೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಥಮ ವರ್ಷ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪನ್ಯಾಸಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ರೂಪ ಕಾಖಂಡಕಿ ನಿರೂಪಿಸಿದರು. ಸೀಮಾ ಹಾಗೂ ಅನ್ನಪೂರ್ಣ ಪ್ರಾರ್ಥಿಸಿದರು. ಕೀರ್ತಿ ಹಂದ್ರಾಳ ಸ್ವಾಗತಿಸಿ ಪರಿಚಯಿಸಿದಳು. ರೇಷ್ಮಾ ಚಲವಾದಿ ವಂದಿಸಿದಳು.

