ತಾಳಿಕೋಟಿ: ನೂರು ವರ್ಷಕ್ಕೆ ಕೋಟಿಗೊಬ್ಬ ಸಂತ ಜನಿಸುತ್ತಾನೆ ಅವನನ್ನು ಶತಮಾನದ ಸಂತ ಎಂದು ಕರೆಯುತ್ತಾರೆ ಅಂತಹ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಶ್ರೀಗಳಾಗಿದ್ದಾರೆ ಎಂದು ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಶುಕ್ರವಾರ ಪಟ್ಟಣದ ಶ್ರೀ ಬಸವೇಶ್ವರ ವೃತ್ತದ ಹತ್ತಿರ ಮಾನಸಿಂಗ್ ಕೊಕಟನೂರ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳ 3ನೇ ವರ್ಷದ ನುಡಿ ನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಿದ್ದೇಶ್ವರ ಶ್ರೀಗಳು ಜ್ಞಾನ ಸಾಗರವಾಗಿದ್ದರು ಅವರ ಪ್ರವಚನಗಳು ಅತ್ಯಂತ ಪ್ರಭಾವಶಾಲಿಯಾಗಿದ್ದವು. ನಾವುಗಳು ಕೇವಲ ಮಾತನಾಡುತ್ತೇವೆ ಆದರೆ ಅವರು ಮಾತನಾಡಿದಂತೆ ನಡೆದು ತೋರಿಸಿದರು ಅವರ ನಡೆ ಮತ್ತು ನುಡಿ ಎರಡೂ ಒಂದಾಗಿದ್ದವು ಈ ಕಾರಣಕ್ಕಾಗಿಯೇ ಜಗತ್ತು ಅವರನ್ನು ಶತಮಾನದ ಸಂತ ಎಂದು ಒಪ್ಪಿಕೊಂಡಿತು. ಅವರು ಬದುಕಿನ ಪ್ರತಿ ಹಂತದಲ್ಲೂ ನಮಗೆ ಮಾರ್ಗದರ್ಶಕರಾಗಿದ್ದಾರೆ ಅವರಿಗಿಂತ ಶ್ರೇಷ್ಠ ಸ್ಪೂರ್ತಿದಾಯಕ ವ್ಯಕ್ತಿ ಇನ್ನೊಬ್ಬನಿಲ್ಲ, ಅವರು ಎಲ್ಲರನ್ನೂ ಪ್ರೀತಿಸುವುದನ್ನು ಕಲಿಸಿದರು ಯಾರನ್ನೂ ದ್ವೇಷಿಸಬೇಡಿ ಎಂದು ತಿಳಿಸಿದರು. ಅವರ ಈ ಶ್ರೇಷ್ಠ ಗುಣವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಶಪಥವನ್ನು ಇಂದಿನ ನುಡಿ ನಮನ ಕಾರ್ಯಕ್ರಮದಲ್ಲಿ ಮಾಡಬೇಕಾಗಿದೆ ಎಂದರು. ಶರಣ ಸಾಹಿತ್ಯ ಪರಿಷತ್ತಿನ ಜಿ ಎಸ್ ಜಮ್ಮಲದಿನ್ನಿ, ಪತ್ರಕರ್ತ ಅಬ್ದುಲ್ ಗನಿ ಮಕಾನದಾರ, ನ್ಯಾಯವಾದಿ ಗಂಗಾಧರ ಕಸ್ತೂರಿ ಹಾಗೂ ಹಿಂದೂ ಕಾರ್ಯಕರ್ತ ರಾಘವೇಂದ್ರ ವಿಜಾಪುರ ನುಡಿ ನಮನಗಳನ್ನು ಸಲ್ಲಿಸಿದರು.ಮಾನಸಿಂಗ್ ಕೊಕಟನೂರ ಗೆಳೆಯರ ಬಳಗದ ಅಧ್ಯಕ್ಷ ಎಂ.ಎಸ್.ಕೊಕಟನೂರ ನೇತೃತ್ವದಲ್ಲಿ ಕಾರ್ಯಕ್ರಮದ ಆರಂಭದಲ್ಲಿ ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ವಚನ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಮಹಾಂತೇಶ ಮುರಾಳ ಕಾರ್ಯಕ್ರಮ ನಿರ್ವಹಿಸಿದರು. ಈ ಸಮಯದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಕಟ್ಟಿಮನಿ,ಡಾ.ವಿ.ಎಸ್.ಕಾರ್ಚಿ,ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಎಚ್.ಎಸ್.ಪಾಟೀಲ(ಬಾವೂರ), ಕಾಶಿನಾಥ ಮುರಾಳ, ಎಂ.ಎಸ್. ಸರಶಟ್ಟಿ,ಬಿಜೆಪಿ ದುರೀಣೆ ಸುವರ್ಣಾ ಬಿರಾದಾರ, ಮುತ್ತು ಕಶಟ್ಟಿ, ದ್ಯಾಮನಗೌಡ ಪಾಟೀಲ,ನ್ಯಾಯವಾದಿ ಎಂ ಕೆ ಮೇತ್ರಿ,ಅಮಿತಸಿಂಗ್ ಮನಗೂಳಿ,ನಾಗೇಶ ಕಟ್ಟಿಮನಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹಬೂಬ ಕೆಂಭಾವಿ, ವೀರೇಶ ಬಾಗೇವಾಡಿ, ಅಮಿತಸಿಂಗ್ ಮನಗೂಳಿ, ಬಸವರಾಜ ಮದರಕಲ್ಲ,ರಾಮನಗೌಡ ಬಾಗೇವಾಡಿ,ಎಂ.ಎಸ್.ನಾಗರಾಳ, ಈಶ್ವರ ಹೂಗಾರ,ರಾಘು ಮಾನೆ, ಶಫೀಕ ಇನಾಮದಾರ, ಗೋಪಾಲ ಕಟ್ಟಿಮನಿ, ಬಳಗದ ಪದಾಧಿಕಾರಿಗಳಾದ ರವಿ ಚಂದುಕರ್, ಸಂಜು ಹಜೇರಿ, ಪರಶುರಾಮ ತಂಗಡಗಿ,ರಾಜು ಸಜ್ಜನ,ಅಶೋಕ ಚಿನಗುಡಿ, ದತ್ತು ಉಬಾಳೆ, ಜಗದೀಶ ಬಿಳೆಭಾವಿ ಹಾಗೂ ಸರ್ವ ಸಮಾಜದ ಬಾಂಧವರು ಇದ್ದರು.

