ತಾಳಿಕೋಟೆ: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಮುಂಭಾಗದ ತೇರಿನ ಮನೆಯಿಂದ ಜಾಮೀಯಾ ಮಸೀದಿವರೆಗಿನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಶುಕ್ರವಾರರಂದು ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ ಸಿದ್ದಲಿಂಗಶ್ರೀಗಳು ಶ್ರೀ ಖಾಸ್ಗತೇಶ್ವರ ಮಠದ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿರುವದರಿಂದ ಮತ್ತು ಪ್ರತಿವರ್ಷ ಶ್ರೀಮಠದ ಅದ್ದೂರಿ ರಥೋತ್ಸವ ಲಕ್ಷಾಂತರ ಭಕ್ತರ ಮಧ್ಯ ಜರುಗುತ್ತಾ ಸಾಗಿದ್ದರಿಂದ ಶ್ರೀಮಠದ ಮುಂದೆ ಉತ್ತಮ ಸಿಸಿ ರಸ್ತೆಯ ಅವಶ್ಯಕತೆ ಇತ್ತು ಈ ನಿಟ್ಟಿನಲ್ಲಿ ನಗರೋತ್ತಾನ ಯೋಜನೆಯಡಿ ಗುತ್ತಿಗೆದಾರರಾದ ವಿಶ್ವನಾಥರೆಡ್ಡಿ ನಾಡಗೌಡ ಅವರೂ ಕೂಡಾ ಶ್ರೀಮಠದ ಭಕ್ತರಾಗಿದ್ದಾರೆ ಅವರು ಸಿಸಿ ರಸ್ತೆ ಕಾಮಗಾರಿ ನಿರ್ವಹಣೆಗೆ ಮುಂದಾಗಿದ್ದು ಉತ್ತಮವಾದ ರಸ್ತೆ ನಿರ್ಮಾಣದ ಜೊತೆಗೆ ಭಕ್ತಾಧಿಗಳಿಗೆ ಮತ್ತು ರಥೋತ್ಸವಕ್ಕೆ ಅನೂಕೂಲ ರೀತಿಯಲ್ಲಿ ರಸ್ತೆ ನಿರ್ಮಾಣ ಮಾಡಲು ಮನವಿ ಮಾಡಲಾಗಿದೆ ಇದಕ್ಕೆ ಅವರೂ ಕೂಡಾ ಹೆಚ್ಚಿನ ರೀತಿಯಲ್ಲಿ ಮುತುವರ್ಜಿ ವಹಿಸಿ ಬಹು ಬಾಳ್ವಿಕೆ ಬರುವ ರೀತಿಯಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡುವದಾಗಿ ತಿಳಿಸಿದ್ದಾರೆ ಶ್ರೀ ಖಾಸ್ಗತರ ಹಾಗೂ ವಿರಕ್ತಶ್ರೀಗಳ ಆಶಿರ್ವಾದ ಅವರ ಮೇಲಿರಲಿ ಎಂದು ಆಶಿಸಿದರು.
ಇದೇ ಸಮಯದಲ್ಲಿ ಗುತ್ತಿಗೆದಾರರಾದ ವಿಶ್ವನಾಥರೆಡ್ಡಿ ನಾಡಗೌಡ ಅವರು ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಗುತ್ತಿಗೆದಾರ ವಿಶ್ವನಾಥರೆಡ್ಡಿ ನಾಡಗೌಡ(ಶಳ್ಳಗಿ), ಅಶೋಕಗೌಡ ಬಿರಾದಾರ, ಬಸನಗೌಡ ಬಿರಾದಾರ, ಜಿಲಾನಿ ಖಾಜಿ(ಶಳ್ಳಗಿ), ಜೈಸಿಂಗ್ ಮೂಲಿಮನಿ, ಮೊದಲಾದವರು ಉಪಸ್ಥಿತರಿದ್ದರು.

