ತಾಳಿಕೋಟಿ: ಪಟ್ಟಣದ ವೀರಶೈವ ವಿದ್ಯಾ ವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಎಸ್ ಕೆ ಪಾಪು ಕಾಲೇಜಿನ ವಿದ್ಯಾರ್ಥಿಗಳು ಚಿತ್ರದುರ್ಗದ ಪುಟಾಣಿ ವಿಜ್ಞಾನ ಮತ್ತು ತಾರಾಮಂಡಲ ವಿಜ್ಞಾನ ಪ್ರತಿಭಾನ್ವಿತ ಪರೀಕ್ಷೆ-2025ರಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಸಪ್ಟಂಬರ್ ತಿಂಗಳಿನಲ್ಲಿ ನಡೆದ ಈ ಪರೀಕ್ಷೆಯಲ್ಲಿ ಕಾಲೇಜಿನಿಂದ105 ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬರೆದಿದ್ದರು ಇದರಲ್ಲಿ ಕುಮಾರಿ ಮಧುರಾ ಬಿರಾದಾರ ರಾಷ್ಟ್ರಮಟ್ಟಕ್ಕೆ ದ್ವಿತೀಯ ಸ್ಥಾನ, ಕುಮಾರ ವಾಯುಪುತ್ರ ಎಡಹಳ್ಳಿ ರಾಷ್ಟ್ರಮಟ್ಟಕ್ಕೆ ದ್ವಿತೀಯ ಸ್ಥಾನ, ಪೂಜಾ ಸೋಮಣ್ಣವರ್ ಜಿಲ್ಲೆಗೆ ದ್ವಿತೀಯ ಸ್ಥಾನ, ಮಾಬೂಬ್ಬಿ ಮಾಗಿ ಜಿಲ್ಲೆಗೆ ತೃತೀಯ ಸ್ಥಾನ ಮತ್ತು ನೀಲಮ್ಮ ಕಕ್ಕೇರಿ ತಾಲೂಕಿಗೆ ತೃತಿಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಹಾಗೂ ಇನ್ನುಳಿದ ಎಲ್ಲ ವಿದ್ಯಾರ್ಥಿಗಳು ಅಗ್ರ ಶ್ರೇಣಿ ಮತ್ತು ಪ್ರಥಮ ಸ್ಥಾನದಲ್ಲಿ ಪಾಸಾಗಿದ್ದಾರೆ. ಇವರಿಗೆ ಮಾರ್ಗದರ್ಶನ ನೀಡಿದ ಎನ್. ಐ.ಗಾಣಿಗೇರ ಇವರನ್ನು ರಾಷ್ಟ್ರಮಟ್ಟದ ಉತ್ತಮ ವಿಜ್ಞಾನ ಸಂಘಟನಾ ಉಪನ್ಯಾಸಕ ಪ್ರಶಸ್ತಿ ಹಾಗೂ ಉಪನ್ಯಾಸಕಿ ಶೀತಲ್ ಎಂ ಸಜ್ಜನ್ ಇವರಿಗೆ ರಾಷ್ಟ್ರಮಟ್ಟದ ಉತ್ತಮ ವಿಜ್ಞಾನ ಸಂಘಟನಾ ಉಪನ್ಯಾಸಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರಿಗೆ ಸಹಕರಿಸಿದ ಸಹ ಸಂಘಟನಾ ಉಪನ್ಯಾಸಕಿಯಾದ ಟಿ.ಜಿ. ಮಠಪತಿ ಹಾಗೂ ಉಪನ್ಯಾಸಕ ಕೆ ಎಸ್ ಸಜ್ಜನ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿದ್ಯಾರ್ಥಿಗಳ ಈ ಉತ್ತಮ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಕಿಶೋರಕುಮಾರ ಕೆ. ಹಾಗೂ ಆಡಳಿತ ಮಂಡಳಿಯ
ಅಧ್ಯಕ್ಷರು, ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *