ಕುಷ್ಟಗಿ: ತಾಲೂಕಿನ ವಾಸವಿನಗರದ ಶಾಖಾಪುರ ರಸ್ತೆಯಲ್ಲಿರುವ ಹಳೆಯ ಸ್ಕೌಟ್ ಮತ್ತು ಗೈಡ್ಸ್ ಖಾಲಿ ಬಿದ್ದಿರುವ ಕಟ್ಟಡ ಈಗ ಯುವಕರಿಂದ ಗವಿಶ್ರೀ ಗ್ರಂಥಾಲಯ ಒಮ್ಮೆ 2023 ರಲ್ಲಿ ಪಾಳು ಬಿದ್ದು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸ್ಕೌಟ್ ಮತ್ತು ಗೈಡ್ಸ್ ಕಟ್ಟಡ ಇಂದು ಜ್ಞಾನದ ಬೆಳಕನ್ನು ಚೆಲ್ಲುವ ಗವಿಶ್ರೀ ಗ್ರಂಥಾಲಯವಾಗಿ ರೂಪಾಂತರಗೊಂಡಿರುವುದು ಕುಷ್ಟಗಿಯ ಯುವಶಕ್ತಿಯ ಅಪರೂಪದ ಸಾಧನೆ. ಕ್ರಿಕೆಟ್, ಕಬಡ್ಡಿ,ವಾಲಿಬಾಲ್,ಸಿಗರೇಟ್,ಬ್ರಾಂಡಿ ಅಂತ ಮೋಜು–ಮಸ್ತಿ ಎನ್ನುವ ಆಕರ್ಷಣೆಯ ಕಾಲದಲ್ಲಿ,ಧಾರವಾಡ ಬೆಂಗಳೂರು ಅಂತ ನಾವು ಬಡವರು ಅಷ್ಟು ಹಣ ಕೊಟ್ಟು ಓದೋಕೆ ಎಲ್ಲಿ ಹೋಗೋದು ನಮ್ಮ ಊರಲ್ಲಿ ಅಂತಹ ವಾತಾವರಣವನ್ನು ಸೃಷ್ಟಿದರೆ ನಮ್ಮಂತ ಹಲವಾರು ಯುವಕರ ಕನಸು ನನಸು ಆಗುತ್ತೆ ಹಾಗೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಮಹತ್ತರ ಚಿಂತನೆಯೊಂದಿಗೆ 15 ರಿಂದ 20 ಯುವಕರ ಏಕಲವ್ಯ ತಂಡವೊಂದು ಕೈ ಜೋಡಿಸಿದ್ದು ನಿಜಕ್ಕೂ ಶ್ಲಾಘನೀಯ.2023 ರ ವಿಧಾನ ಸಭಾ ಚುನಾವಣೆಯ ಸಂಧರ್ಭದಲ್ಲಿ ಕುಷ್ಟಗಿಯಲ್ಲೀ ಒಳ್ಳೆಯ ಗ್ರಂಥಾಲಯಕ್ಕೆ ಜಾಗ ಕೇಳಲು ಪುರಸಭೆ ಅಧಿಕಾರಿಗಳಿಗೆ ಕೇಳಲು ಹೋದ ಸಂಧರ್ಭದಲ್ಲಿ ಅಲ್ಲಿ ಒಬ್ಬರು ಪತ್ರಕರ್ತರು ಖಾಲಿ ಬಿದ್ದಿರುವ ಸ್ಕೌಟ್ & ಗೈಡ್ಸ್ ಕಟ್ಟಡ ಇದೆ ನೋಡಿ ಅಂತ ಸುಳಿವು ಕೊಟ್ಟರು ಅದೇ ದಿನ ಯುವಕರ ತಂಡ ಮೊದಲು ಪುರಸಭೆ ಮುಖ್ಯಾಧಿಕಾರಿಗಳ ಬಳಿಗೆ ತೆರಳಿ ಮನವಿ ಮಾಡಿಕೊಂಡು ಗ್ರಂಥಾಲಯದ ಅನುಮತಿ ತೆಗೆದು ಕೊಂಡು ಜಿಲ್ಲಾಧಿಕಾರಿಯ ಅನುಮತಿ ತೆಗೆದುಕೊಂಡು ಇಲ್ಲಿನ ಸಾರ್ವಜನಿಕರ ಸವಾಲುಗಳನ್ನು ಎದುರಿಸಿ ಅನುಮತಿ ತೆಗೆದುಕೊಂಡು ತಾವೇ ಯುವಕರು ಸೇರಿ ಟ್ರಸ್ಟ್ ರಚಿಸಿ ಕಟ್ಟಡವನ್ನು ಸ್ವಚ್ಛಗೊಳಿಸಿ ಜನಪ್ರತಿನಿಧಿಗಳ ಹತ್ತಿರ ಕ್ರಿಕೆಟ್,ಕಬ್ಬಡ್ಡಿ ಪಂದ್ಯಾವಳಿಗಾಗಿ ಸ್ಪಾನ್ಸರ್ ಕೇಳುವ ಹಾಗೆ ಗ್ರಂಥಾಲಯಕ್ಕೆ ಸ್ಪಾನ್ಸರ್ ಕೇಳಿ ಕುಷ್ಟಗಿಯ ಮಾಜಿ ಸಚಿವರು ಅಮರೇಗೌಡ ಬಯ್ಯಾಪುರ ಹಾಗೂ ಕುಷ್ಟಗಿಯ ಈಗಿನ ಶಾಸಕ ದೊಡ್ಡನಗೌಡ ಪಾಟೀಲ್,ರವಿ ಅಜ್ಜ,ಇನ್ನರ್ ವೀಲ್ ಕ್ಲಬ್,ಹೋಪ್ ಚಾರಿಟಬಲ್ ಟ್ರಸ್ಟ್ ಹಾಗೂ ವಿವಿಧ ಗಣ್ಯರಿಂದ ನೆರವು ಪಡೆದು ದಾನಿಗಳ ಉದಾರ ಮನಸ್ಸಿನಿಂದ ದೊರೆತ ದಾನದ ಸಹಾಯವನ್ನು ಸದುಪಯೋಗಪಡಿಸಿಕೊಂಡು, ಜ್ಞಾನಾರ್ಜನೆಯ ಕನಸನ್ನು ಸಾಕಾರಗೊಳಿಸಿದ ಈ ಯುವಕರು ತಾವೇ ಪಾಳು ಬಿದ್ದ ಕಟ್ಟಡವನ್ನು ಸ್ವಚ್ಛಗೊಳಿಸಿ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯ ಹೆಸರಿನ ಮೇಲೆ ಒಂದು ಸುಂದರ ಗವಿಶ್ರೀ ಗ್ರಂಥಾಲಯ ಹುಟ್ಟು ಹಾಕಿ ನೂರಾರು ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಭವಿಷ್ಯದ ದಾರಿ ತೋರಿಸಿದ್ದಾರೆ.ಯುಪಿಎಸ್ಸಿ, ಕೆಎಎಸ್,ಬ್ಯಾಂಕಿಂಗ್, ಪಿ.ಎಸ್.ಐ,ಪಿ.ಸಿ,ಎಸ್‌ಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಗವಿಶ್ರೀ ಗ್ರಂಥಾಲಯ ಇಂದು ಆಶಾಕಿರಣವಾಗಿ ಪರಿಣಮಿಸಿದೆ. ಹಾಗೂ ವಿದ್ಯಾರ್ಥಿಗಳು ಆವರಣದಲ್ಲಿ ವಿವಿಧ ಬಗೆಯ 100 ರಿಂದ 150 ಗಿಡಗಳನ್ನು ನೆಟ್ಟು ಓದಲು ಶಾಂತ ವಾತಾವರಣ, ಅಗತ್ಯ ಪುಸ್ತಕಗಳು, ದಿನಪತ್ರಿಕೆಗಳು ಹಾಗೂ ಅಧ್ಯಯನಕ್ಕೆ ಪೂರಕವಾದ ಸೌಲಭ್ಯಗಳೊಂದಿಗೆ ಇಂದಿನ ಯುವ ಮನಸ್ಸುಗಳಿಗೆ ಪ್ರೇರಣೆಯ ಕೇಂದ್ರವಾಗಬೇಕು ಎಂದು .ಸಮಯವನ್ನು ವ್ಯರ್ಥ ಮಾಡದೇ, ಜ್ಞಾನವನ್ನು ಸಂಪಾದಿಸುವ ದಿಕ್ಕಿನಲ್ಲಿ ಯುವಕರನ್ನು ಒಲಿಸುವ ಈ ಪ್ರಯತ್ನ ಸಮಾಜದ ಆರೋಗ್ಯಕರ ಬೆಳವಣಿಗೆಯ ಪ್ರತೀಕವನ್ನೂ ನಿರ್ಮಿಸಿದ್ದಾರೆ. ಹಾಗೂ ಮಹಿಳೆಯರಿಗೆ ಕೂಡ ಅವರಿಗೆ ಬೇಕಾದ ವ್ಯವಸ್ಥೆ ಮಾಡಿದ್ದಾರೆ ಇಲ್ಲಿ ಮಹಿಳೆಯರು ಕೂಡ ದಿನನಿತ್ಯ ಓದಲು ಬರುತ್ತಾರೆ.ಪಾಳು ಬಿದ್ದ ಕಟ್ಟಡವೊಂದು ಇಂದು ಜ್ಞಾನಮಂದಿರವಾಗಿ ಮಾರ್ಪಟ್ಟಿರುವುದು ಕೇವಲ ಕಟ್ಟಡದ ರೂಪಾಂತರವಲ್ಲ; ಅದು ಯೋಚನೆಯ, ದೃಷ್ಟಿಕೋನದ ಮತ್ತು ಸಮಾಜದ ಮೇಲಿನ ಹೊಣೆಗಾರಿಕೆಯ ರೂಪಾಂತರ. ಇಂತಹ ಕಾರ್ಯಗಳು ಇತರರಿಗೆ ದಾರಿ ತೋರಿಸುವ ಮಾದರಿಯಾಗಿದ್ದು, “ಯುವಕರು ಬಯಸಿದರೆ ಏನನ್ನಾದರೂ ಸಾಧ್ಯ” ಎಂಬುದಕ್ಕೆ ಗವಿಶ್ರೀ ಗ್ರಂಥಾಲಯ ಜೀವಂತ ಸಾಕ್ಷಿಯಾಗಿದೆ.ಕುಷ್ಟಗಿಯ ಈ ಯುವಕರ ಅದ್ಭುತ ಸಾಧನೆಗೆ ಅಭಿನಂದನೆಗಳು. ಟ್ರಸ್ಟ್ ನ ಸದಸ್ಯರು ಗ್ರಂಥಾಲಯದ ಖರ್ಚುಗಳಿಗಾಗಿ ತಲಾ 150 ರೂ.ಗಳಂತೆ ಸಂಗ್ರಹಿಸಿ ವಿಧ್ಯುತ್ ,ದಿನಪತ್ರಿಕೆಗಳ ಖರ್ಚು ,ನೀರಿನ ಖರ್ಚು ಹಾಗೂ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಕೇಳಲು ಜಿಯೋ ವೈಫೈ ಕೂಡ ಮೊನ್ನೆ ದಾನಿಗಳು ದಾನವಾಗಿ ನೀಡಿದ್ದಾರೆ ಅದರ ತಿಂಗಳ ಖರ್ಚು ಹೀಗೆ ಇನ್ನಿತರ ಖರ್ಚುಗಳನ್ನು ನಿಭಾಯಿಸುತ್ತಿದ್ದಾರೆ. ಬೇರೆ ಗ್ರಾಮಗಳಿಂದ ಗ್ರಂಥಾಲಯಕ್ಕೆ ಬರುವವರ ಅನುಕೂಲಕ್ಕಾಗಿ ಗ್ರಂಥಾಲಯದ ಮಾಹಿತಿಯನ್ನು Shri Gavishree Library Kushtagi ಎಂದು ಗೂಗಲ್‌ನಲ್ಲಿ ಅಳವಡಿಸಿದ್ದಾರೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಸರ್ಚ್ ಮಾಡಿ ವೀಕ್ಷಿಸಿದ್ದಾರೆ ಎಂದು ಈ ಎಲ್ಲಾ ಮಾಹಿತಿಯನ್ನು ಟ್ರಸ್ಟ್ ಸದಸ್ಯ ಪ್ರಕಾಶ್ ಅವರು ನಮ್ಮ ನೈಜ್ಯ ದೆಸೆ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ ಇಲ್ಲಿ ಅಧ್ಯಯನ ಮಾಡಿದ ಹಲವರು ಕೂ.ಚಿರು ಪಿ.ಸಿ ಹಾಗೂ ಪಿ.ಸಿ ವಿವಿಧ ಹುದ್ದೆ ಅಲಂಕರಿಸಿ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ.ಹಾಗೂ ರಮೇಶ್ ಗುಮಗೇರಿ (IPS), ಹನುಮೇಶ ಹಿರೇಮನಿ ಪಿ.ಎಸ್.ಐ,ಶಿಕ್ಷಕರು ಬಿ ಆರ್.ಸಿ ಶರಣಪ್ಪ ತೆಮ್ಮಿನಾಳ ಸೇರಿ ಹಲವಾರು ಸಾಧಕರು ಭೇಟಿ ನೀಡಿ ಯುವಕರಿಗೆ ಸ್ಪೂರ್ತಿ ನೀಡಿ ಕಾರ್ಯಾಗಾರ ನೀಡಿದ್ದಾರೆ ಹಾಗೂ ನಮ್ಮ ಉತ್ತರ ಕರ್ನಾಟಕದ ಕಲಾ ಮತ್ತು ವಾಣಿಜ್ಯ ವಿಭಾಗದ ಯುವಕರಿಗೆ ಕಷ್ಟಕರವಾದ ವಿಜ್ಞಾನ ವಿಷಯ ಕನ್ನಡದಲ್ಲಿ ಪಾಠ ಮಾಡುತ್ತಿರುವ ಸ್ಪರ್ಧಾತ್ಮಕ ತರಬೇತುದಾರರು ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದ ಲಾಲ್ ಸಾಬ್ ಪಿ.ಎಸ್.ಐ ಹಾಗೂ ಕರ್ನಾಟಕದ ಸ್ಪರ್ಧಾ ಚಾಣಕ್ಯ ಹುಸೇನಪ್ಪ ನಾಯಕ ಪಿ ಎಸ್.ಐ, ಅಮರೇಶ್ ಪೊಟ್ನಾಳ್ ಇನ್ನೂ ಅನೇಕ ನಮ್ಮ ಕರ್ನಾಟಕದ ಸಾಧಕರು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿ ಇಲ್ಲಿನ ಯುವಕರ ಸಾಧನೆಯ ಭಾಗವಾದರೆ ಇನ್ನಷ್ಟು ಯುವಕರು ಉನ್ನತ ಹುದ್ದೆಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಸದಸ್ಯರ ಆಶಯ.ಇಂತಹ ಜ್ಞಾನಪ್ರಧಾನ ಪ್ರಯತ್ನಗಳು ಇನ್ನಷ್ಟು ವಿಸ್ತರಿಸಿ, ಸಮಾಜದ ಯುವಕರ ಅನೇಕ ಕನಸುಗಳಿಗೆ ಹೊಸ ಜೀವ ನೀಡಲಿ ಎಂಬುದೇ ನಮ್ಮ ನೈಜ್ಯ ದೆಸೆ ಕನ್ನಡ ದಿನ ಪತ್ರಿಕೆಯ ಹಾರೈಕೆ.


ಹನುಮಂತ ಗಾಜಿ,ಚಿರು,ಶ್ರೀಶೈಲ,ಹನುಮೇಶ ಪತ್ತಾರ,ರಾಘವೇಂದ್ರ ಹಿರೇಮನಿ,ಶಿವರಾಜ್ ಹನುಮಸಾಗರ,ಸಂತೋಷ ಶೆಟ್ಟರ್,ಅಮರೇಶ್ ಮಂಗಳೂರು,ಪ್ರಕಾಶ್ ಯಂಕಂಚಿ,ಯಲ್ಲಪ್ಪ ಕೊನಸಾಗರ ಹಾಗೂ ಇನ್ನೂ ಯುವಕರು ಸೇರಿ “ನಡೆಮುಂದೆ, ನಡೆಮುಂದೆ ನುಗ್ಗಿ ನಡೆಮುಂದೆ ಕುಗ್ಗದೇಯೇ ಹಿಗ್ಗದೇಯೇ ನುಗ್ಗಿ ನಡೆಮುಂದೆ” ಎನ್ನುವ ವಾಣಿಯಂತೆ ಅನೇಕ ಪ್ರಶ್ನೆ ಸವಾಲುಗಳನ್ನು ಎದುರಿಸಿ ಗವಿಶ್ರೀ ಗ್ರಂಥಾಲಯ ನಿರ್ಮಿಸಿ ಇಂದು ನೂರಾರು ಯುವಕರಿಗೆ ಮಾದರಿ ಯಾಗಿದ್ದಾರೆ.
ಕೆಟ್ಟ ಕೆಲಸಗಳಿಗೆ ಬಹಳ ಪ್ರೋತ್ಸಾಹ ಸಿಗುತ್ತೆ ಆದರೆ ಒಳ್ಳೆಯ ಕೆಲಸಗಳಿಗೆ ಕಡಿಮೆ ಪ್ರೋತ್ಸಾಹ ಇರುತ್ತೆ ನಮಗೆ ದುಡ್ಡು ಕೊಟ್ಟು ದೊಡ್ಡ ದೊಡ್ಡ ನಗರಗಳಿಗೆ ಹೋಗಿ ಶಿಕ್ಷಣ ಪಡೆಯುವುದು ಅಸಾಧ್ಯ ಹಾಗಾಗಿ ನಾವು ಸ್ನಾತ್ತಕೋತ್ತರ ಪದವಿ ಪಡೆದು ಯಾಕೆ ಸುಮ್ಮನೆ ಕೂರುವುದು ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಿ ಉನ್ನತ ಹುದ್ದೆ ಪಡೆದುಕೊಳ್ಳಬೇಕೆಂಬ ಆಸೆ ಆದರೆ ನಮ್ಮ ಕುಷ್ಟಗಿಯಲ್ಲಿ ಸಾರ್ವಜನಿಕ ಗ್ರಂಥಾಲಯ ಸರಿಯಿಲ್ಲ ಎಂಬ ಕಾರಣಕ್ಕೆ ನಾವು ಒಳ್ಳೆಯ ಗ್ರಂಥಾಲಯ ಮಾಡಲು ಹೊರಟಾಗ ಅನೇಕ ಕಷ್ಟಗಳನ್ನು ಎದುರಿಸಿದೇವು ನಮ್ಮ ಕೊಪ್ಪಳದ ಶ್ರೀ ಗವಿ ಸಿದ್ದೇಶ್ವರ ಸ್ವಾಮೀಜಿ ಅಜ್ಜರ ಆಶೀರ್ವಾದ ಹಾಗೂ ನಮ್ಮ ತಾಲೂಕಿನ ಜನಪ್ರತಿನಿಧಿಗಳ ಸಹಾಯದಿಂದ ನಾವು ಗವಿಶ್ರೀ ಗ್ರಂಥಾಲಯ ನಿರ್ಮಿಸಿದ್ದೇವೆ ಈಗ ಅನೇಕ ಆಕಾಂಕ್ಷಿಗಳು ದಿನನಿತ್ಯ ಅನೇಕ ಪುರುಷರು ಮಹಿಳೆಯರು ಜ್ಞಾನ ಸಂಪಾದಿಸಲು ಬರುತ್ತಾರೆ ನಾವು ನಮ್ಮ ಮಿತ್ರರು ಸೇರಿ ಗ್ರಂಥಾಲಯ ಮುನ್ನೆಡೆಸುತ್ತೇವೆ 24/7 ನಮ್ಮ ಗ್ರಂಥಾಲಯ ಜ್ಞಾನ ಗಳಿಸುವುದಕ್ಕೆ ತೆರೆದಿರುತ್ತದೆ “ಒಳ್ಳೆಯತನ ಮೌನವಾಗಿರಬಹುದು,
ಆದರೆ ಅದರ ಶಕ್ತಿ ಅಪಾರ”.
ಪ್ರಕಾಶ್ ಯಂಕಂಚಿ(ಗವಿಶ್ರೀ ಗ್ರಂಥಾಲಯ ಸದಸ್ಯ)
“ನಿನ್ನ ಹತ್ತಿರ ಒಂದು ರೂಪಾಯಿ ಇದ್ದರೆ,ಅದರ ಅರ್ಧದಿಂದ ಊಟ ಮಾಡು ಮತ್ತರ್ಧದಿಂದ ಪುಸ್ತಕ ಕೊಂಡು ಓದು.”ಡಾ. ಬಿ.ಆರ್.ಅಂಬೇಡ್ಕರ್ “ಗ್ರಂಥಾಲಯಕ್ಕೆ ಕೊಟ್ಟ ಕೈಗಳು ಸಮಾಜವನ್ನು ಕಟ್ಟುತ್ತವೆ.” ಎಂಬ ವಾಣಿಯಂತೆ ವಿವಿಧ ಪುಸ್ತಕಗಳು ಹಾಗೂ ಧನ ಸಹಾಯ ಗ್ರಂಥಾಲಯಕ್ಕೆ ಬೇಕಾದ ಇನ್ನಿತರ ಸಾಮಗ್ರಿಗಳನ್ನು ದಾನವಾಗಿ ನೀಡಬಹುದು: ಹನುಮಂತ ಗಾಜಿ 8618888634, ಪ್ರಕಾಶ್ ಯಂಕಂಚಿ 9743075990, ಅಮರೇಶ್ 91642 38182
