ತಾಳಿಕೋಟಿ: ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಬೋಳವಾಡ ಗ್ರಾಮದಲ್ಲಿ ಸುಮಾರು 44.50 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜುಗೌಡ ಪಾಟೀಲ( ಕು.ಸಾಲವಾಡಗಿ) ಚಾಲನೆ ನೀಡಿದರು. ಮಂಗಳವಾರ ತಾಲೂಕಿನ ಬೋಳವಾಡ ಗ್ರಾಮದಲ್ಲಿ ಕೆ ಆರ್ ಐ ಡಿ ಎಲ್ ಇಲಾಖೆಯ ರೂ.20 ಲಕ್ಷ ಮೊತ್ತದ ಡಾ.ಅಂಬೇಡ್ಕರ್ ಸಮುದಾಯ ಭವನ,ಶಾಸಕರ ಅನುದಾನದ ರೂ.10 ಲಕ್ಷ ಮೊತ್ತದ ಶ್ರೀ ಮಾರುತೇಶ್ವರ ದೇವಸ್ಥಾನ ಸಮುದಾಯ ಭವನ,ಜಿಪಂ ಹಾಗೂ ಪಂಚಾಯತ್ ರಾಜ್ ಇಲಾಖೆಯ ರೂ 14.50 ಲಕ್ಷ ಮೊತ್ತದ ಸರ್ಕಾರಿ ಶಾಲೆಗಳ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಅವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ನಂತರ ಗ್ರಾಮಸ್ಥರು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಇವತ್ತು ಚಾಲನೆ ನೀಡಿದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವುದರ ಜೊತೆಗೆ ನಿಗದಿತ ಸಮಯದಲ್ಲಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಎಲ್ಲ ಕಾಮಗಾರಿಗಳು ಸುಗಮವಾಗಿ ಮುಕ್ತಾಯವಾಗುವಂಥಾಗಲು ಗ್ರಾಮಸ್ಥರ ಸಹಕಾರ ಅವರೊಂದಿಗಿರಲಿ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ ಶಾಸಕ ರಾಜುಗೌಡರು ನುಡಿದಂತೆ ನಡೆಯುವ ವ್ಯಕ್ತಿಗಳಾಗಿದ್ದು ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅವರಿಗೆ ನಾವೆಲ್ಲರೂ ಸಹಕರಿಸುವ ಅಗತ್ಯ ಇದೆ ಎಂದರು. ಇದೇ ಸಂದರ್ಭದಲ್ಲಿ ಶಾಸಕ ರಾಜುಗೌಡ ಪಾಟೀಲರಿಗೆ ಗ್ರಾಮಸ್ಥರು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸರೋಜಾಬಾಯಿ ಮ.ಮಸರಕಲ್ಲ, ಮುಖಂಡರಾದ ಸಾಹೇಬಗೌಡ ಬಿರಾದಾರ,ಮಡುಸೌಕಾರ ಬಿರಾದಾರ, ಮಲ್ಲನಗೌಡ ಪೊಲೀಸ್ ಪಾಟೀಲ, ರಾಜುಗೌಡ ಕೋಳೂರ, ನಿಂಗನಗೌಡ ಬಿರಾದಾರ, ನಿಂಗು ಕಲಬುರ್ಗಿ, ಜೈಭೀಮ ಮುತ್ತಗಿ, ವೀರೇಶ ಕಾರಗನೂರ, ಜಗನ್ನಾಥ್ ಮಸರ್ಕಲ್, ಬಸನಗೌಡ ಹಳ್ಳಿಪಾಟೀಲ, ಮುಖ್ಯ ಗುರುಮಾತೆ ಎಚ್.ಎಂ.ಮೂಲಿಮನಿ, ಗುತ್ತಿಗೆದಾರ ಶಶಿಕಾಂತ್ ಕುಬರೆಡ್ಡಿ, ದೊಡ್ಡಪ್ಪ ಹರಿಜನ, ಈರಪ್ಪ ಹರಿಜನ, ಪರಪ್ಪ ಹರಿಜನ್ ಸಿದ್ದಪ್ಪ ಹರಿಜನ್ ಹಾಗೂ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *