ತಾಳಿಕೋಟೆ: ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದಲ್ಲಿ ಮಾನ್ಯಾ ವಿವೇಕಾನಂದ ದೊಡಮನಿ ಅವರನ್ನು ಮರ್ಯಾದಾ ಹತ್ಯೆ ಮಾಡಿ ಪರಿಶಿಷ್ಟ ಕುಟುಂಬದ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ ಸ್ಥಳೀಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಅಂಬೇಡ್ಕರ್ ಸೇನೆ ತಾಲ್ಲೂಕಾ ಸಮಿತಿ ವತಿಯಿಂದ ಸೋಮವಾರ ತಹಶೀಲ್ದಾರ ಅವರಿಗೆ ತಲುಪಿಸಲಾಯಿತು.
ಘಟನೆಯಲ್ಲಿ ಭಾಗಿಯಾದವರನ್ನು ಪೊಲೀಸ್ ಇಲಾಖೆ ಬಂಧನ ಮಾಡಿದರೆ ಸಾಲದು, ಅವರನ್ನು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಆಗದಂತೆ ಸಕಲರೀತಿಯಲ್ಲಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಒದಗಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ ದೌರ್ಜನ್ಯಕ್ಕೆ ಒಳಗಾದ ಮಾನ್ಯಾ ವಿವೇಕಾನಂದ ಕುಂಟುಂಬದವರಿಗೆ ಸರ್ಕಾರ ಸರ್ಕಾರಿ ಕೆಲಸ, ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸ್ಸು ಈ ಮಾದರ(ಕಟ್ಟಿಮನಿ),
ಮಲ್ಲಪ್ಪ ಶಿರೋಳ, ದೇವೇಂದ್ರಪ್ಪ ಬೇವಿನಗಿಡ, ಮಲ್ಲಿಕಾರ್ಜುನ್ ಅಸ್ಕಿ, ಶಫೀಕ್ ಇನಾಮದಾರ, ಖಾಜೆ ಪಟೇಲ್, ದ್ಯಾಮಣ್ಣ ಸೋಮನಾಳ, ಕಾಲಪ್ಪ ಮಾದರ, ದೇವಪ್ಪ ತುಂಬಿಗಿ, ಬಸವರಾಜ್ ಮುತ್ತಗಿ, ಆಕಾಶ್ ಮನಗೂಳಿ, ಚೈತನ್ಯ ಮಣೂರ, ಮಡು ವನಕ್ಯಾಳ, ಇಸ್ಮಾಯಿಲ್ ನದಾಫ್, ವಿಠ್ಠಲ್ ಕೇಸಾಪುರ, ಮಡು ಚಲವಾದಿ,ಅಂಬೇಡ್ಕರ್ ಸೇನೆಯ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಬಾಗಿಯಾಗಿದ್ದರು.

Leave a Reply

Your email address will not be published. Required fields are marked *