ಗದಗ 25: ಕರ್ನಾಟಕದಾದ್ಯಂತ ಎಂ.ಎ., ಎಂ.ಎಸ್‌ಸಿ, ಎಂ.ಕಾಂ., ಇತರೆ ಸ್ನಾತಕೋತ್ತರ ಪದವಿ ಪಡೆದು 2004-2005 ರಿಂದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರೆಂದು ಸೇವೆ ಸಲ್ಲಿಸಿತ್ತಿದ್ದರೂ, ಇಂದಿನವರೆಗೆ ಅವರಿಗೆ ತಕ್ಕ ವೇತನ ಕೊಡದೆ ಕಾಯಂಗೊಳಿಸುವ ಪ್ರಸ್ತಾವನೆಯನ್ನು ಮುಂದೂಡುತ್ತ ಅವರ ಜೀವನ ಡೋಲಾಯವಾಗಿಸಿದ್ದು, ಇದನ್ನು ಪರಿಗಣಿಸಿದ ಉಚ್ಚ ನ್ಯಾಯಲಯವು ಸರ್ಕಾರಕ್ಕೆ ಮತ್ತೂ ಕಾಲೇಜು ಶಿಕ್ಷಣ ಆಯುಕ್ತರಿಗೂ ನೋಟೀಸ್ ಆದೇಶಿಸಿದೆ.
ಪ್ರಕರಣದ ವಿವರ:
* ಶ್ರೀ ವಿಜೇಂದ್ರ ಪ್ರಭು ಮತ್ತು 23 ಇತರರು ತಾವೆಲ್ಲರು ವಿವಿಧ ವಿಷಯಗಳಲ್ಲಿ ಸ್ನಾತಕೊತ್ತರ ಪದವೀಧರಿದ್ದು ಅವರುಗಳು ಕಳೆದ ಸರಸಾರಿ 20 ವರ್ಷಗಳಿಂದ ಕರ್ನಾಟಕ ಸರ್ಕಾರದ ವಿವಿಧ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರೆಂದು ಸೇವೆ ಸಲ್ಲಿಸುತ್ತಿದ್ದು ಸೇವೆಯು ಉತ್ತಮವಿದ್ದು, ಅವರ ಮತ್ತು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದ್ದರೂ ಸಹ ಅವರನ್ನು ಇಲ್ಲಿಯವರೆಗೆ ಕಾಯಂ ಮಾಡದೇ ಮತ್ತು ತಕ್ಕ ವೇತನ ಕರುಣಿಸದೆ ಸರ್ಕಾರವು ಅವರನ್ನು ಕಡೆಗಣಿಸುತ್ತ ಬಂದಿದೆ.

ವಸ್ತುಸ್ಥಿತಿ ಹೀಗಿರಲು ಕರ್ನಾಟಕ ಉಚ್ಚ ನ್ಯಾಯಾಲಯದ ಡಬ್ಲ್ಯೂ.ಎ.ನಂ. 1578/2024 ರಲ್ಲಿ ದಿನಾಂಕ: 08.10.2025 ರಂದು ಆದೇಶ ಹೊರಬಂದು ಇನ್ನು ಮುಂದೆ 2025-26 ಮತ್ತು ಮುಂದಿನ ದಿನಗಳಲ್ಲಿ ಕೇವಲ ಸ್ನಾತಕೊತ್ತರ ಪದವಿ ಹೊಂದಿದ್ದು ಅವರಿಗೆ ಯು.ಜಿ.ಸಿ. ನಿಯಮಾನುಸಾರ ಪಿಹೆಚ್.ಡಿ., ಎನ್.ಇ.ಟಿ./ಕೆ-ಸೆಟ್/ಎಸ್ಎಲ್‌ಇಟಿ -ಎಂ.ಫಿಲ್., ವಿದ್ಯಾರ್ಹತೆ ಹೊಂದಿರದಿದ್ದರೆ ಅವರನ್ನು ಅತಿಥಿ ಉಪನ್ಯಾಸಕರೆಂದು ನೇಮಕ ಮಾಡಲು ಅಗಲಾರದೆಂದು ಮತ್ತು ಸದರಿ ಅರ್ಹತೆಗಳು ಇನ್ನು ಮುಂದೆ ಕಡ್ಡಾಯವಾಗಿವೆ ಎಂದು ಅದೇಶವಾಗಿದೆ.

ಆದರೆ, ಈ ಉಚ್ಚ ನ್ಯಾಯಲಾಯದ ಆದೇಶವು ಇನ್ನು ಮುಂದೆ 2025-26 ಮತ್ತು ಮುಂದಿನ ದಿನಗಳ ಹೊಸ ಅತಿಥಿ ಉಪನ್ಯಾಸಕರ ಆಯ್ಕೆಗಳಿಗೆ ಅನುಗುಣವಾಗುತ್ತದೆ ವಿನಹ, ಈಗಾಗಲೇ 20 ವರ್ಷಗಳಿಂದ ಸೇವೆ ಸಲ್ಲಿಸಿರುತ್ತಿರುವ ಅತಿಥಿ ಉಪನ್ಯಾಸಕರಿಗೆ ಇದನ್ನು ಪೂರ್ವಾನ್ವವಾಗಿ ಪರಿಗಣಿಸಲಾಗದು. ಅದು ಅಲ್ಲದೇ
ಸರ್ಕಾರವೇ ಸದರಿ ಪ್ರಕರಣದಲ್ಲಿ ವಾದಿಸಿದಂತೆ ಈ ತೀರ್ಪಿನನ್ವಯ ಹೋದರೆ ತಕ್ಕ ಅಭ್ಯರ್ಥಿಗಳು ಸಿಗಲಾರರು ಮತ್ತು ಅರ್ಜಿದಾರರಲ್ಲಿರುವ ಹತ್ತಾರು ವರ್ಷಗಳ ಉಪನ್ಯಾಸಕ ಅನುಭವ ಕಡೆಗಣಿಸಿದಂತೆ ಅಗುತ್ತದೆ. ಇದು ಅಲ್ಲದೆ ಪ್ರಸ್ತುತ ಅರ್ಜಿದಾರರು 20 ವರ್ಷ ಪ್ರಮಾಣಿಕ ಸೇವೆ ಸಲ್ಲಿಸಿ ಅವರು 35 ರಿಂದ 58 ವಯಸ್ಸಿನವರಿದ್ದು ಅವರ ಜೀವನ ಇಂದಿನವರೆಗೆ ಖಾಯಂ ನೌಕರಿಯ ಬೆಳಕು ಕಂಡಿಲ್ಲವೆಂದು ವಾದಿಸಿದರು.

ಅರ್ಜಿದಾರರ ಪರವಾಗಿ ಪವನ್ ಕುಮಾರ್ ಮತ್ತು ಹರ್ಷಿತ ವಕೀಲರು ರಿಟ್ ಅರ್ಜಿ ಸಲ್ಲಿಸಿದ್ದು, ಶ್ರೀ.ಎಸ್.ಪಿ.ಕುಲಕರ್ಣಿ, ಹಿರಿಯ ವಕೀಲರು, ಬೆಂಗಳೂರು ವಾದ ಮಂಡಿಸಿದ್ದು ಕರ್ನಾಟಕ ಉಚ್ಚ ನ್ಯಾಯಲಯದ ಮಾನ್ಯ ನ್ಯಾಯಮೂರ್ತಿಗಳಾದ ಶ್ರೀ.ಅಶೋಕ ಕಿಣಗಿ, ಪರಿಸ್ಥಿತಿಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರಕ್ಕೆ, ಸರ್ಕಾರಿ ವಕೀಲರ ಮುಖಾಂತರ ನೋಟಿಸ್ ಜಾರಿಗೆ ಅದೇಶಿಸಿದ್ದಾರೆ. ಸದರಿ ಪ್ರಕರಣವು 23.01.2026 ರಂದು ಉಚ್ಚ ನ್ಯಾಯಲಯದಲ್ಲಿ ವಿಚಾರಣೆಗೆ ಬರಲಿದೆ. ಸೇವಾ ಜೀವನದಲ್ಲಿ ಪೂರ್ತಿ ನೊಂದು ತತ್ತರಿಸಿದ ಕರ್ನಾಟಕದಂದ್ಯಂತ ಅತಿಥಿ ಉಪನ್ಯಾಸಕರು ಹೊಸ ಬೆಳಕಿಗಾಗಿ ಕಾದು ನೋಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ . ಹನಮಂತಗೌಡ ಕಲ್ಮನಿಯವರು ತಮ್ಮ ಆಶಾಭಾವನೆಯನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *